ಪುಟ:ಬತ್ತೀಸಪುತ್ತಳಿ ಕಥೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ೩e ಕರ್ಣಾಟಕ ಕಾವ್ಯಕಲಾನಿಧಿ, ರಾತಿ ಅಲ್ಲಿ ಕಾದಿದ್ದನು. ಆದಿನ ಮಳೆ, ಗುಡುಗು, ಮಿಂಚು, ಸಿಡಿಲಿನಾ ರ್ಭಟಿ-ಬಹಳವಾದುದಲಿಂದ ಅರಮನೆಯ ಬಾಗಿಲ ಕಾವಲಜನರು ಯಾರೂ ಬಾರದೆ ಅಲ್ಲಿ ಒಬ್ಬನೇ ಕಾದಿರಲು , ಅರ್ಧರಾತ್ರಿಯಲ್ಲಿ ಅರಸು ಎದ್ದು ಅಂಗಳಕ್ಕೆ ಬರಲಾಗಿ, ಆ ವೇಳೆಯಲ್ಲಿ ಊರ ಹೋಗೆ ರೋದನೆಯಂ ಕೇಳ, ಈ ಸಮರಾತ್ರಿಯಲ್ಲಿ ಹೆಣ್ಣು ಬಾಲೆ ದುಃಖಪಡ ಕಾರಣವೇನು ? ಆವಳಗೇನು ಉಪಾಧಿಯೋ ? ತಿಳಿಯಲಿಲ್ಲವೆಂದು, ಅರಮನೆಯಬಾಗಿಲಲ್ಲಿ ಯಾರು ಇದ್ದೀರಿ?' ಎಂದು ಅರಸು ಕರೆಯಲಾಗಿ; ವಿಕಮ-“ನಾನೊಬ್ಬನೇ ಇದ್ದೇನೆ' ಎಂದನು. “ಎಲೋ ವಿಕ್ರಮ ! ಈ ಮಧ್ಯರಾತ್ರಿಯಲ್ಲಿ ಊರಾಚೆ ಯಾರೋ ಸಿಯ ಪ್ರಳಾಪವಾಗಿಯಿದೆ, ಅದೇನೆಂದು ತಿಳಿದುಬಾ” ಎಂದು ಅಪ್ಪಣೆಯಾದುದಕಂದ, ವಿಕನು ಹೊರಗೆ ಹೋಟು ರೋದಿಸುವ ಬಳಿ ವಿಡಿದು ಹೋಗಲಾಗಿ; ಆ ಮಾಯಾಂಗನೆ ನಿಂತುಕೊಂಡು-ಈ ನಡುರಾತ್ರೆ ಯಲ್ಲಿ ಭೀತಿಯಿಲ್ಲದೆ ನನ್ನ ಬೆಂಬತ್ತಿ ಬಂದವನು, ನೀನು ಯಾರು? ಎಂದು ಕೇಳಲು ; ಆಮಾತಿಗೆ ವಿಕ್ರಮನು 'ನೀನುಯಾರು ? ಪಟ್ಟಣದ ಸಮೀಪಕ್ಕೆ ಬಂದು ರೋದನ ಮಾಡುವುದು ಇದೇನು ??” ಎಂದು ಕೇಳಲು ; “ಎಲೊ ವೀರನೇ ? ಕೇಳು. ನನ್ನ ಗಂಡ ಏಳುಮಂದಿ ಗೆಣೆಯರು ಸಹಿತ ಈ ಪಟ್ಟ ನದಲ್ಲಿ ಕಳ್ಳತನ ಮಾಡುತಿರಲು, ಬಂದುದಿನ ಕಳವು ನಿಕ್ಕಿ, ಎಂಟು ಜನ ರನ್ನು ಹಿಡಿದು, ಸಾಲುಮೇಲೆ ಶೂಲಕ್ಕೆ ಹಾಕಲಾಗಿ, ನನ್ನ ಗಂಡನಿಗೆ ಒಂದಿಷ್ಟು ಅನ್ನ ತಿಕ್ಕಬೇಕೆಂದು ನಾ ಬಂದೆ. ಆ ಶೂಲವು ಕೈಗೆ ನಿಲು ಕದೆ ಇರುವುದಲ್ಂದ ಇದಕ್ಕೂ ನನಗೆ ಪ್ರಾಪ್ತಿಯಿಲ್ಲವೇ ? ಎಂದು ಪ್ರಳಾ ವಿಸುತಿದ್ದೇನೆ' ಎನ್ನಲಾಗಿ, ವಿಕ್ರಮನು ಮುಗಿ, “ ಎಲ್ ಸಿಯೆ ! ನನ್ನ ಹೆಗಲನೇ ನಿನ್ನ ಗಂಡನಿಗೆ ಅನ್ನ ವಿಕ್ಕು ” ಎಂದನು. “ಹಾಗಾದರೆ ಅನ್ನವನಿಕ್ಕುವೆ'ಎನಲು ಶೂಲದ ಬಳಿಗೆ ಬಂದು,ಅವಳ ಹೆಗಲನೇಸಿಕೊಳ್ಳಿ ಲಾಗಿ ; ಅವಳು ಬಲುಚಾರವಾಗಿ ಕಂಡುದರಿಂದ ವಿಕ್ರಮನು-ಇವಳು ಹೆಂಗಸಲ್ಲ, ಮಾಯಾಂಗನೆ ಎಂದು ತಿಳಿದು, ತನ್ನ ಬಲಗೈಯಲಿದ್ದ ಖಡ್ಗ ದಿಂದ ಅವಳ ಮುಂದಲ ಕಾಲ ಕತ್ತರಿಸಲಾಗಿ, ಅವಳು, ಖೋ ! ಎಂದು ಆರ್ಭಟಿಸುತ್ತ ಬೇಚರಕ್ಕೆ ಹಾಲಹೋಗಲಾಗಿ, ಆ ಕಾಲಿನ ತುಂಡಂ ತಂದು ತನ್ನ ಮನೆಯ ಮುಂದೆ ಹಾಕಿ, ಆ ರಾತ್ರಿ ಕಳೆದು, ಬೆಳಗಾಗಿ ಬಂದು,