ಪುಟ:ಬತ್ತೀಸಪುತ್ತಳಿ ಕಥೆ.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೯ ಬತ್ತೀಸಪುತ್ತಳಿ ಕಥೆ, ಎಂದು ಆಸೋಪಾನದ ನವಮೋಹಿನಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು ಬದಲು ನಿಂಹಾಸನದಲ್ಲಿ ಕುಳಿತು ಚಿತ್ರಕರ್ಮದಿಂದ ಹೇಳಿ ನಿದ ಕಥೆ:- ಎಲೆ ಪುತಳಿಯೇ ಕೇಳು. ನನ್ನ ಒಡೆಯನಾನ ಭೋಜರಾಜನು ಧಾರಾಪುರದಲ್ಲಿ ಸುಖರಾಜ್ಯಂಗೆಯ್ಯುವಲ್ಲಿ ಒಂದುದಿನ ಸುಖದಿಂದ ಎಣ್ಣೆ ಯಂ ಒತ್ತಿಸಿಕೊಳ್ಳುತ ಮೂಡ ಮುಖವಾಗಿ ಕುಳಿತಿರುವ ಸಮಯದಲ್ಲಿ ಒಬ್ಬ ಭಿಕ್ಷು ಕವಿಯೆಂಬ ಬ್ರಾಹ್ಮಣ ನಾಲ್ಕು ಶ್ಲೋಕ ಬರೆದು ಓಲೆಯಂ ಕೈಯಲ್ಲಿ ಹಿಡಿದು, ಅರಮನೆಯ ಬಾಗಿಲ ಬಳಿಗೆ ಬಂದು, ಕವಲಕಾದಿರುವ ಗೊಲ್ಲರ ಸೆರುಗಾಜನು ಕರೆದು, ರಾಯನ ಕಡೆ-ನಾನು ಬಂದಿರುವ ವರ್ತಮಾನವನ್ನು ಹೋಗಿ ನೀನು ಅಕೆ ಮಾಡು ನಿನಗೆ ಹನ್ನೆರಡು ಸಾ ವಿರ ವರಹನ ಕೊಡುವೆ, ಎನ್ನಲಾಗಿ ; ಆಸೇರುಗಾಲ ಬಂದು ಕೈಮುಗಿದು, -ಎಲೈ ಮಹಾರಾಯನೇ ? ಭಿಕ್ಷು ಕವಿ ನಾಲ್ಕು ಶ್ಲೋಕವಂ ಬರೆದ ಓಲೆ ಯಂ ಕೈಯಲ್ಲಿ ಹಿಡಿದುಕೊಂಡು ಅರಮನೆಯ ಬಾಗಲಿಗೆ ಬಂದು ನನ್ನ ಕರೆದು ತನ್ನ ಬಂದು ಇದ್ದಾನೆ ಎಂಬ ವರ್ತಮಾನವನ್ನು ತುತಪಡಿಸಿದರೆ ನಿನಗೆ ಹನ್ನೆರಡು ಸಾವಿರ ವರಹ ಕೊಡುವೆನು ಎಂದು ಹೇಳಿದ ಆಮಾತ, ರಾಯ ಕೇಳಿ, ಆಕವಿಯು ಕರತರಹೇಳಿ ಆಜ್ಞೆಯಂ ಮಾಡಿ ಹೇಳಲಾಗಿ ; ಆಸೇರುಗಳು ಬಂದು ಆಕವಿಯಂ ಕರೆದುಕೊಂಡು ಹೋಗಿ, ರಾಯನ ಎದುರಾಗಿ ನಿಲ್ಲಿಸಲು ; ಆಕವಿಯು ರಾಯನ ಮುಖವ ನಿರೀಕ್ಷಿಸಿ, ಬಂದ ನೆಯಕವ ಹೇಳಿದನು. ಅದಂ ರಾಯಂ ಕೇಳಿ ಅದಿಕ್ಕಿನ ರಾಜ್ಯವನ್ನು ತನ್ನ ಮನಸ್ಸಿನಲ್ಲಿ ಧಾರೆಯೆರೆದುಕೊಟ್ಟು, ತೆಂಕಮುಖವಾಗಿ ಕುಳಿತುಕೊ ಟೈಲಾಗಿ : ಆಕವಿಯ) ಆದಿಕ್ಕಿನಲ್ಲಿ ಹೋಗಿ ಎದುರಿಗೆ ನಿಂತು ಎರಡನೆಯ ಶ್ಲೋಕನ ಹೇಳಿದನು. ಅದಂ ಕೇಳಿ ರಾಯ ಪಡುವಣದಿಕ್ಕಿಗೆ ತಿರಿಗಿಕ ಳ್ಳಲು, ಆಕವಿಯು ಆದಿಕ್ಕಿನಲ್ಲಿ ಹೋಗಿ ಎದುರಿಗೆ ನಿಂತು ಮನೆಯ ಶೋಕನ ಹೇಳಿದನು. ಅದಂ ಕೇಳಿ ರಾಯ ಬಡಗಂದಿಕ್ಕಿಗೆ ತಿರುಗಿ ಕುಳ ತುಕೊಳ್ಳಲಾಗಿ, ಆ ಕವಿಯು ಆ ದಿಕ್ಕಿನಲ್ಲಿ ಹೋಗಿ ಎದುರಾಗಿ ನಿಂತು ನಾಲ್ಕನೆಯ ಶ್ಲೋಕನ ಹೇಳಿದನು. ಅದನ್ನು ರಾಯನು ಕೇಳಿ ಚೌದಿಕ್ಕಿನ ರಾಜನು ಧಾರೆಯೆರೆದು ಕೊಟ್ಟು, ಮೇಲುಮುಖವಾಗಿ ಎದ್ದು ನಿಂತು, ಆ sm.