ಪುಟ:ಬತ್ತೀಸಪುತ್ತಳಿ ಕಥೆ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಬ Y! ಕರ್ನಾಟಕ ಕಾವ್ಯಕಲಾನಿಧಿ, ಸತಿ ಸಹಿತ ಕಳುಹಿಸಲಾಗಿ ; ಆನೆಲವಾಡ ನಾಗಲೋಕದಿಂದ ಶರಧಿಯೊ ಳಗೆ ಬಂದು, ಭೂಲೋಕಕ್ಕೆ ಪುಟನೆಗೆದು ತಂದು ಬಿಡಲಾಗಿ, ಅಲ್ಲಿಂದ ನರ್ತ ಕ ಸಮೇತವಾಗಿ ಬರುವ ದಾರಿಯಲ್ಲಿ ಒಬ್ಬ ಸಾಧುಕನ ಹಾವು ಕಚ್ಚಿ ಬಿದ್ದಿ ರುವನಂ ಕಂಡು, ಗರುಡಮಂತ್ರದಿಂದವನ ಏಳಿಸಿ, ಇಲ್ಲಿ ನೀನು ಬಿದ್ದಿರ ಕಾರಣವೇನೆಂದು ಕೇಳಲಾಗಿ ; ದಾರಿದ್ರ ದೋಷದಿಂದ ಈಅರಣ್ಯದಲ್ಲಿ ತಪಸ್ಸು ಮಾಡಬೇಕೆಂದು ಬರಲಾಗಿ, ಹಾವು ಕಚ್ಚಿ ಬಿದ್ದೆನು ಎಂದ ಕಾರಣ ; ರಾಯನು ಕರುಣಚಿತನಾಗಿ, ಅವನಿಗೆ ರಸರಸಾಯನ ಪಂಚಭಕ್ಷ್ಯ ಪರ ಮಾನ್ನ ಕೊಡುವ ರತ್ನವಂ ಕೊಟ್ಟು, ಇಲ್ಲಿಗೆ ಬಂದು, ಆವರ್ತಕನಿಗೆ ಹತ್ತು ಕೋಟಿ ದ್ರವ್ಯ ದಿವ್ಯರತ್ನಂಗಳಂ ಐನೂಕು ಮರಂ ಕೊಟ್ಟು ಉಪಚರಿಸಿ, ಕಳುಹಿಸಿ, ತಾನು ಅನೀಮಂತಿನಿ ಸಹಿತ ಸುಖದಿಂದ್ರನು ಕಣಾ ? ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ನವಮೋಹಿನಿ ಎಂಬ ಪುಳಿ ಪೇಳಿದ ಏಳನೆಯ ಕಥೆ. X ಎಂಟನೆಯ ಕವ. ಎಂಟನೆಯ ದಿವಸದಲ್ಲಿ ಭೋಜರಾಜನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತಿರಿಸಿಕೊಂಡು ಸಾಲಂಕಾರಭೂಷಿತನಾಗಿ ಚಿತ)ವರ್ಮನ ಕೈಲಾಗಿನಲ್ಲಿ ರತ್ನಖಚಿತವಾದ ಪಾವುಗೆಯಂ ಮೆಟ್ಟಿಕೊಂಡು ನಿಂಹಾಸನದ ಬಳಿಗೆ ಬಂದು ಹೊಗಳುವ ಭಟರ ಸಂಭ್ರಮದಲ್ಲಿ ಎಣಗಾಲಂ ನೀಡುವ ಸಮಯದಲ್ಲಿ ಅಸೋಪಾನದ ಪದ್ಮಾವತಿಯೆಂಬ ಪುತ್ತಳಿಯು ಹೋಹೋ : ನಿಲ್ಲು ನಿಲ್ಲು ಭೋಜರಾಯನೇ ? ನಮ್ಮ ಒಡೆಯನಾದ ವಿಕ ಮಾದಿತ್ಯರಾಯನಂತೆ ವೀರವಿತರಗುಣಗಳುಳ್ಳಡೆ ಈನಿಂಹಾಸನವ ನೇಣು, ಇಲ್ಲವಾದರೆ ಕೆಲಸಾರು, ಮಿಾಕುಳಿತೆಯಾದರೆ ನಿನ್ನ ತಲೆ ಸಹಸ್ರ ಹೋಳಾಗುವುದು ಎಂದು ಧಿಕ್ಕರಿಸಲಾಗಿ; ಭೋಜರಾಯನು ಬೇಲe ನಿಂದಾ ಸನದಲ್ಲಿ ಕುಳಿತು ಚಿತ ಕರ್ಮನಿಂದ ಬೆಳೆಸಿದ ಕಥೆ :- m