ಪುಟ:ಬತ್ತೀಸಪುತ್ತಳಿ ಕಥೆ.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ ಬತ್ತೀಸಪುತ್ತಳ ಕಥೆ. ಎಲೆ ಪುತಳಿಯೇ 1 ಕೇಳು. ನಮ್ಮ ಭೋಜರಾಯನು ಸುಖದಿಂದ ಧಾರಾಪುರದಲ್ಲಿ ರಾಜ್ಯಂಗೆಯ್ಯುವಲ್ಲಿ ಒಂದು ದಿನ ಸದರಿನಲ್ಲಿರುವ ಮುನ್ನ ಹು ಮುಖ್ಯ ಕವಿಗಳಲ್ಲದೆ ಲಕ್ಷವೂ ತೊಂಬತ್ತಾರು ಸಾವಿರ ಕವಿಗಳ ಕುಳ್ಳಿರುವಲ್ಲಿ : ರಾಯ-ದಾನಂಗಳಲ್ಲಿ ಅಧಿಕವಾದ ದಾನಂಗಳು ಆವುವು ? ಎಂದು ಕೇಳಲು; ವರರುಚಿ ಹೇಳಿದನು .- ಅನ್ನೋದಕ ದಾನವೇ ಅಧಿಕ ವೆಂದು ಹೇಳಿದುದಕ್ಕೆ ; ರಾಯನು-ಅದು ಹೇಗೆ ? ಎಂದು ಕೇಳಲಾಗಿ ; ವರರುಚಿಯೆಂಬೊಬ್ಬ ಇಂತೆಂದನು :-ಕೆಳೆಯಾ ರಾಯನೆ : ಚಿತ್ರಸೇನ ರಾಯನಿಗೆ ಮೂಲ ತಿಂಗಳ ಕುವಾರ ಹುಟ್ಟಿರುವನು. ಆಮಗುವನ್ನು ಕೇಳಿದರೆ ಅನ್ನೋದಕದಾನದ ಮಹತ್ತನ್ನು ಹೇಳುವುದು ಎನ್ನಲಾಗಿ ; ರಾಯನು ವರರುಚಿಸತತ ಚಿತ್ರಸೇನಾಯನ ಮನೆಗೆ ಹೋಗಲಾಗಿ , ಅವನು ಎದರುಗೊಂಡು ಕರೆದುಕೊಂಡು ಹೋಗಿ ಬಹುವಿನಯದಿಂದ ಉಪ ತರಿಸಿ-ಏನು ಕಾರಣ ದಯೆಮಾಡಿದಿರಿ ? ಎನ್ನಲಾಗಿ; ರಾಯನು--ನಿನ್ನ ಮಕುತಿಂಗಳ ಮಗನ ಕೂಡೆ ಮಾತನಾಡಬೇಕು ? ಎನ್ನಲಾಗಿ ; ತೋ ಟೈಲು ಸಹಿತ ಮಗುವ ತಂದು ಮುಂದಿರಿಸಲಾಗಿ; ರಾಯನು ಎಲೈ ತಿಶುವೇ ? ಮನದೊಳಧಿಕದಾನವಾವುದು ? ಎನ್ನಲಾಗಿ : ಅಮಗುವು ತಂದೆ ತಾಯಿಗೆ ಉನ್ನತವಾದ ದೇವರಿಲ್ಲ ; ಅನ್ನೋದಕದಾನಕ್ಕಿಂತ ಮಿಗಿಲಾದ ದಾನವಿಲ್ಲ , ಎನ್ನಲಾಗಿ ; ರಾಯನು-ಅದು ಹೇಗೆ ? ಎನ್ನಲು . ಕೇಳ್ಯಾ ರಾಯನೇ : ಪೂರ್ವದಲ್ಲಿ ಮುನ್ನೊಂದು ಜನ್ಮದಲ್ಲಿ ನಾನು ಪುಳಿಂದನೆಂಬ ರಾಕ್ಷಸನಾಗಿ, ಒಂದು ಘೋರಾರಣ್ಯದಲ್ಲಿ ಗೋಬ್ರಾಹ್ಮಣ ಪಕ್ಷಿ ಮೃಗಗಳನ್ನು ಭಕ್ಷಿಸಿ ಕೊಂಡು ನಾನು ಒಬ್ಬ ನಿಯ ಸಹಿತವಾಗಿ ಒಂದು ಗವಿಯಲ್ಲಿ ಇರು ನಲ್ಲಿ ಬಂದುದಿನ ಅಲ್ಲಿಗೆ ಒಬ್ಬ ಬ್ರಾಹ್ಮಣ, ತನಗೆ ಹಣ್ಣು ಹಂಪಲ ಬೇಕಾ ದುದನ್ನು ಹುಡುಕುತ್ತ ಗವಿಯ ಬಾಗಿಲಿಗೆ ಬರಲಾಗಿ ; ಆವೇಳೆಯಲ್ಲಿ ನಾನು ಸಂಚಾರಕ್ಕೆ ಹೋಗಿದ್ದ ಕಾರಣ, ಅವನ ನನ್ನ ಸತಿ ಕಂಡು* ಎಲೋ ಬ್ರಾಹ್ಮಣ ! ಇಲ್ಲಿಗೆ ಏಕೆ ಬಂದೆ ? ನನ್ನ ಪತಿ ನಿನ್ನ ಕಂಡರೆ ತಿಂದಾನು, ” ಎಂದು ಹೇಳಿ ಅವನ ಒಂದು ಕಲ್ಲು ಬಂಡೆಯಲ್ಲಿ ಕುಳ್ಳಿರಿಸಿ ಮೇಲೆ ಸೊಪ್ಪುನೆದೆಯ ಮುಚ್ಚಿ ಮರೆಯಂ ಮಾಡಿ, ನಾನು ಬಂದ ಬಳಿಕ, ನನ್ನ ಪಾದವಿಡಿದು ನನ್ನೊಡನೆ ತಾನು ಒಂದು ಕಾರವ ಮಾಡಿ ಇದ್ದೇನೆ, m m