ಪುಟ:ಬತ್ತೀಸಪುತ್ತಳಿ ಕಥೆ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ. ಬ ಕರ್ನಾಟಕ ಕಾವ್ಯಕಲಾನಿಧಿ. ಎನ್ನಲು ;-ಅದೇನೆಂದು ನಾನು ಕೇಳಲಾಗಿ;ನಾನೊಬ್ಬ ಬ್ರಾಹ್ಮಣನ ಬಚ್ಚಿ ಟ್ಟು ಇದ್ದೇನೆ, ಅವನ ನೀನು ತಿನ್ನದೆ ರಕ್ಷಿಸಬೇಕೆಂದು ಬಹಳ ಬಗೆ ನನಗೆ ಹೇಳಿ, ನಂಬುಗೆಯ ತೆಗೆದುಕೊಂಡ ಬಳಿಕ, ಅವನ ಕರೆತಂದು ಮುಂದೆ ನಿಲ್ಲಿಸಲಾಗಿ ; ಅವನು ಕ್ಷು ತಿನಿಂದ ಬಳಲಿ ಇರುವುದಂ ಕಂಡು, ಆಗ ಅವನಿಗೆ ಸಣ್ಣಕ್ಕಿ ಮುಂತಾದ ಬೇಕಾದುದನೆಲ್ಲವ ಕೊಟ್ಟು, ಚೆನ್ನಾಗಿ ಭೋಜನವಾಡಿ ಬಾರೆಂದು ಕಳುಹಿಸಲಾಗಿ ; ಆತ ಅಡಿಗೆ ಊಟ ತೀರಿಸಿ ಬರುವ ಹೊತ್ತಿಗೆ ಸಂಜೆಯಾದುದರಿಂದ, ಈಬ್ರಾಹ್ಮಣನು ಒಬ್ಬನೇ ಹೋದರೆ ಹುಲಿ ಕರಡಿ ತಿಂದಾವು ಎಂದು ಆರಾತ್ರೆ ಆಗವಿಯಲ್ಲಿ ಇರಿಸಿ ಕೊಂಡು, ಆತನಿಗೆ ಫಲಾಹಾರಕ್ಕೆ ಖರ್ಜೂರ ದ್ರಾಕ್ಷಿ ಬಾಳೆಯಹಣ್ಣು ಎಳೆ ನೀರು ಮುಂತಾದುದು ಎಲ್ಲವನ್ನೂ ಕೊಟ್ಟು, ಬೆಳಗಾಗುತ್ತಲೆ ಅವನಿಗೆ ಬೇಕಾದುದೆಲ್ಲವನ್ನೂ ಕೊಟ್ಟು ದಾರಿ ತಪ್ಪದರ ಸಂಗಡ ಹೋಗಿ, ಅವನ ಅವನಾಶ್ರಮಕ್ಕೆ ಕಳುಹಿದ ಕಾರಣ, ಆಬ್ರಾಹ್ಮಣನಿಗೆ ಒಂದು ದಿನ ಅನ್ನ ವಂ ಕೊಡಲಾಗಿ ಆಜನ್ಮದ ಕರಕರ್ಮಗಳಲ್ಲಿ ಹೋಗಿ, ಈಗ ದೊರೆಯ ಮಗನಾಗಿ ಸಕಲ ರಾಜ್ಯಕ್ಕೂ ಅರಸುವಾಗಿ, ಅಷ್ಟಭೋಗಭೋಗ್ಯಂಗಳಿಗೆ ಒಡೆಯನಾಗಿ, ಹುಟ್ಟಿರುವೆನು. ಆದುದಂದ ಅನ್ನದಾನಕ್ಕೆ ಪ್ರತಿಯಿಲ್ಲ ಎಂಬುದನ್ನು ಹೇಳಿ, ಮರಳ, ರುದ್ರಕೇತುವೆಂಬ ರಾಯನಿಗೆ ಒಂದು ಹೆಣ್ಣು ಹುಟ್ಟಿ ತಿಂಗಳಾಯಿತು. ಅದ ಕೇಳಿದರೆ ನಿಮ್ಮ ಸಂಶಯ ನಿಸ್ಸಂದೇಹವಾಗಿ ತೀರುವುದೆನ್ನಲಾಗಿ ; ಅಲ್ಲಿಂದ ರಾಯ ವರರುಚಿ ಸಹಿತ ರುದ್ರಕೇತುವಿನ ಮನೆಗೆ ಬರಲಾಗಿ ; ಅವನು ಎದ್ದು ಇದಿರುಗೊಂಡು ಕರೆದುಕೊಂಡು ಹೋ ಗಿ, ಅತಿ ಉಪಚರಿಸಿ ಬಳಿಕ,-ಏನು ಕಾರಣ ಬಂದಿರಿ ? ಎನ್ನಲಾಗಿ ; ರಾ ಯನು-ನಿನ್ನ ತಿಂಗಳ ಮಗುವಿನ ಕಡೆ ಮಾತನಾಡಬೇಕೆಂದು ಬಂದೆವು ಎನ್ನಲಾಗಿ; ಆಮಗುವಂ ತಂದು ಇರಿಸಲು; ರಾಯನುದಾನದೊಳು ಉನ್ನತ ವಾದ ದಾನ ಯಾವುದು ? ಎನ್ನಲಾಗಿ ; ಆಮಗುವು-ನಾನು ಪೂರ್ವ ಜನ್ಮ ದಲ್ಲಿ ಪುಳಿಂಗನೆಂಬ ರಾಕ್ಷಸನ ಸತಿಯಾಗಿದ್ದೆನು. ಆಕಾಲದಲ್ಲಿ ಒಬ್ಬ ಬಾಹ್ಮಣನು ಹೊಲಬು ತಪ್ಪಿ ಬರಲಾಗಿ, ಆತನಿಗೆ ಅನ್ನ ಕೊಡಿಸಿದುದುಂದ ಆನನ್ನ ಪತಿ ಚಿತ್ರಸೇನನ ಸುತನಾಗಿ ಹುಟ್ಟಿದ. ನಾನು ರುದ್ರಕೇತುರಾಯನ ತನುಜೆಯಾಗಿ ಹುಟ್ಟಿದೆ. ಅವಿವರವನ್ನು ದೊರೆಯಮಗ ನಿಮಗೆ ಹೇಳಿ