ಪುಟ:ಬತ್ತೀಸಪುತ್ತಳಿ ಕಥೆ.djvu/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸುತ್ತಳ ಕಥೆ. Y ಇದ್ದಾನು. ಅದುಕಾರಣ ಅನ್ನದಾನಕ್ಕೆ ಸಮಾನವಾದ ದಾನವಿಲ್ಲ. ಇದು ಅಲ್ಲದೆ ಇನ್ನೂ ಒಂದು ಉಂಟು. ಅದೇನೆಂದರೆ-ಉದಕದಾನದಿಂದ ಅಧಿಕಫಲವುಂಟು ಕೇಳು. ಒಬ್ಬ ವಸುಪಾಲನೆಂಬ ವರ್ತಕನ ಕೈಯಲ್ಲಿ ಜ ಯಪಾಲನೆಂಬ ವ್ಯಾಪಾರಿ ಹತ್ತು ಸಾವಿರ ವರಹವನ್ನು ಕಡ ತೆಗೆದುಕೊಂಡು ತನ್ನ ಮನೆಗೆ ಹೋದನು. ಅಜಯಪಾಲನ ಹಟ್ಟಿಯಲ್ಲಿ ಒಂದು ಎತ್ತು ಇರುವುದು. ಆಯೆತ್ತು ಜಯಪಾಲನ ನೋಡಿ ನಗುವುದು ಅದು ಕಂಡು ಓ ಎ : ನನ್ನ ನೋಡಿ ನಗುವುದೇನು ? ಎಂದು ಜಯಪಾಲ ಕೇಳಲಾಗಿ; ಆಯೆತ್ತು-ಪೂರ್ವದಲ್ಲಿ ನಿನ್ನ ನಾನು ತೆಗೆದ ಸಾವಿರ ವರಹ ಸಾಲ ಏನುಮಾಡಿದರೂ ತೀರದೆ ಈಗ ನಿನ್ನ ಮನೆಯತ್ತಾಗಿ ಹುಟ್ಟಿ ಇರುವ ನಿಮಿತ ನೀನು ಹತ್ತು ಸಾವಿರ ವರಹದ ಸಾಲ ಯಾವ ಜನ್ಮಾಂತರಕ್ಕೆ ತೀರಿ ಸುವೆ ? ಎಂದು ನಿನ್ನ ನೋಡಿ ನಾನು ನಗುತ್ತೇನೆ.-ಎಂದ ಎತ್ತಿನ ಮಾತಂ ಕೇಳಿ, ಜಯಪಾಲ ವಸುಪಾಲನ ಮನೆಗೆ ಹೋಗಿ-ನನಗೆ ನೀನು ಕೊಟ್ಟ ಸಾಲದ ಹಣ ತೆಗೆದುಕೊ ಎನ್ನಲಾಗಿ ; ವಸುಪಾಲ-ನಿನಗೆಂದು ವರುಷದ ಗಡುವನ್ನು ಮಾಡಿ ಸಾಲ ಕೊಟ್ಟೆ, ವರುಷವಾದ ಬಳಕ ಹಣ ತೆಗೆದುಕೊ ಳ್ಳುವುದೇ ಹೋಯಿತು ಈಗ ತೆಗೆದುಕೊಳ್ಳುವುದಿಲ್ಲ ಎನ್ನಲಾಗಿ : ಜಯಾ ಅನು ಚಿಂತಿಸುತ್ತ ತನ್ನ ಮನೆಗೆ ಬಂದು ತನಗಾಸರ ಕಡೆ ಎಲ್ಲ ವಿವರವಂ ಹೇಳಲಾಗಿ ; ಅವರು-ಈಹಣ ಮಿಗಿಸಿಕೊಳ್ಳದೆ ಒಂದು ಕೆ.ಕಟ್ಟಿಸು ಎನ್ನಲಾಗಿ ; ಅದೇ ಮೇರೆಗೆ ಜಯಪಾಲ ಹತ್ತು ಸಾವಿರ ವರಹದಲ್ಲಿ ಬಂದು ಕಾಸೂ ಇರಿಸಿಕೊಳ್ಳದೆ ಬಂದು ಕೆರೆಯ ಕಟ್ಟಿಸಿದನು. ಆಬಳಿಕ ವರು ಪದ ಮೇಲೆ ವಸುಪಾಲ ಬಂದು-ನನ್ನ ಅಸಲು ಚುಂಗಡಿ ಸಹವಾಗಿ ಹಣ ಕೊಡು ಎನ್ನಲಾಗಿ : ಅಜಯಪಾಲ-ನಾನು ಬಂದು, ನಿನ್ನ ಹಣ ತೆಗೆದು ಕೋ ಎಂದರೆ, ನೀನು ತೆಗೆದುಕೊಳ್ಳದೆ ಹೋದುದರಿಂದ ಆಹದಲ್ಲಿ ಒಂದು ಕೆರೆಯ ಕಟ್ಟನಿ ಇದ್ದೇನೆ ಎಂದು, ತಾ ಮಾಡಿದ ಕೆಲಸವ ಕಂಡ ಕಂಡ ವರ ಬಳಿಗೆ ವಸುಪಾಲನ ಕರೆದುಕೊಂಡು ಹೋಗಿ ಹೇಳಿಸಲಾಗಿ; ಜನರು -ಎಲೈ ವಸುಪಾಲ : ನಿನಗೇನಾಗಬೇಕೆಂದು ಕೇಳಲು ; ಅವರ ಮಾತಿಗೆ ನನ್ನ ಹಣ ಬಡ್ಡಿ ಸಹ ಕೊಡಿಸಿ, ಇಲ್ಲವೇ ಕೆರೆಯ ಕಟ್ಟಿದ ಫಲ ಕೊ ಏನಿ--ಎನ್ನಲಾಗಿ; ಆಸನರು ಈತನ ಹಣಕ್ಕೆ ಎಷ್ಟು ಫಲ ಕೊಡಬೇಕೆಂದು