ಪುಟ:ಬತ್ತೀಸಪುತ್ತಳಿ ಕಥೆ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸರಳ ಕಥೆ. ಕುಸುಮೆ ಕುಸುಮೋತ್ಪತಿಃ ಶೂಯತೆ' ನ ಚ ದೃಶ್ಯತೆ, ಎಂದು ಒಂದು ಪದ್ಯದ ಅರ್ಧ ಹೇಳಿ,-ಈ ಸಮಸ್ಯೆ ಪೂರ್ತಿ ಮಾಡಿ ಎನ್ನಲಾಗಿ ; ಪೂರ್ತಿಮಾಡಿ ಯಾರೂ ಹೇಳದೇ ಇರುವುದ ಸಮ್ಮುಖದ ಶೃಂಗಾರವಿಳಾಸಿನಿಯೆಂಬ ಸೂಳೆಯು ಕಂಡು, ರಾಯನಿಗೆ ಕೈ ಮುಗಿದು, -ಇದ ನಾನು ಪೂರ್ತಿ ಮಾಡುವೆನೆಂದು ಆಚರಣವನ್ನು ಒಂದು ಹಲ ಗರು ಮೇಲೆ ಬರೆದು ತಂದು, ತಾನು ಮಲಗುವ ಮನೆಯ ಮಂಚದ ಬಳಿಯಲ್ಲಿ ಇರಿಸಿರಲು ; ಅಷ್ಟಿ ಕಾಳಿದಾಸ ಬರಲಾಗಿ, ಆತನ ಪಾದವ ತೊಳದು, ಕರೆದುಕೊಂಡು ಹೋಗಿ, ಮಂಚದ ಮೇಲೆ ಕುಳ್ಳಿರಿಸಿ, ಆಗ ಅವ ನಿಗೆ ಸುಗಂಧವಂ ಲೆವಿಸಿ, ಪುಪ್ಪವಂ ಮುಡಿಸಿ, ತಂಬೂಲವನಿತ್ತು ಸಂತೋ ಪಪಡಿಸಿ ಅವಳು ಈಚೆಗೆ ಬರಲಾಗಿ ; ಕಾಳಿದಾಸನು ಅಲ್ಲಿ ಇರಿಸಿರುವ ಹಲ ಗೆಯಂ ತೆಗೆದುಕೊಂಡು, ಅದಕಲ್ಲಿ ಬರೆದಿರುವ ಶ್ಲೋಕಾರ್ಥವನೋದಿ ನೋಡಿ ಬದಲು ಚರಣವ ಬರೆದನು. ಅದೆಂತೆಂದರೆ'-

  • “ ಕುಸುಮೆ ಕುಸುಮೋತ್ಪತಿಃ ಶೂರತ್ ನ ಚ ದೃಶ್ಯತೇ || ಎಂದು ಬರೆದಿದ್ದ ಪೂರ್ವಾರ್ಧಕ್ಕೆ

“ ಬಾಲೇ ತವ ಮುಖಾಂಭೋಜೇ ದೃಷ್ಟಮಿಂದೀವರದ್ದಯಂ | ಎಂದು ಉತ್ತರಾಧವಂ ಬರೆದು, ಸಮಸ್ಯೆಯ ಪೂರ್ತಿಮಾಡಿ ಇರಿ ಸಲಾಗಿ ; ಆದೇಶಿಯು ಬಂದು, ಹಲಗೆಯ ಓದಿ ನೋಡಿ ತಿಳಿದುಕೊಂಡು -ಇದು ಪುರುಷ ಸ್ತ್ರೀಗೆ ಹೇಳಿದಂತಿದೆ. ಇದ ಹೀಗೆ ಕೊಂಡುಹೋಗಿ ರಾಯನಿಗೆ ತೋಚಿಸಿದರೆ ಕಾಳಿದಾಸ ಹೇಳಿದುದು ಎಂದು ತಿಳವನು-ಎನು ತ ಯೋಚಿಸಿ, ಕಾಳಿದಾಸ ಮತು ಮಲಗಿ ನಿದ್ರೆಗೆಯ್ಯುವಾಗ, ಅವಳಿಗೆ ಕಾಳಿದಾಸನ ಮೇಲೆ ದ್ವೇಷಹುಟ್ಟಿ, ದೊಡ್ಡದೊಂದು ಕಲ್ಲ ತಂದು ತಲೆಯ

  • ಟೀಕು-ಕುಸುಮೇ= ಪುಷ್ಪದಲ್ಲಿ, ಕುಸುಮೋತ್ಸಃ = ಪುಷ್ಪದ ಹುಟ್ಟೋ ಇವ, ಉಂಟೆಂದು, ಶೂಯತೇ= ಕಿವಿಯಿಂದ ಕೇಳಲ್ಪಡುತ್ತದೆ; ನಚದೃಶ್ಯತೇ= ಕಣ್ಣಿನಿಂದ ನೋಡಲ್ಪಡುವುದಿಲ್ಲ; ಅದೇನು ? ಎಂದು ಸಮಸ್ಯೆ, ಅದಕ್ಕೆ ಉತ್ತರ - ಎಲೆ ಬಾಲೆಯೇ, ತವ ವಖಾಂಭೋಜೇ = ನಿನ್ನ ಮುಸಿವೆಂಬ ತಾವರೆಯ ನಷ್ಟದಲ್ಲಿ, ಇಂದೀವ ಗದ್ಯ ಯ೦ದೃಷ್ಟಂ = ಕಣ್ಣುಗಳೆ೦ಬ ಏರಡು ಕನೈದಿಲೆ ಪುಷ್ಪ ಗಳು ನೋಡಲ್ಪಟ್ಟುವು-ಎಂದು ಕೇಳಿದುದಲ್ಲದೆ ನೋಡುತ್ತಲೂ ಇದ್ದೇವೆ ಎಂದು ಆಭಿಪ್ರಾಯ.