ಪುಟ:ಬತ್ತೀಸಪುತ್ತಳಿ ಕಥೆ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸವುಳ ಕಥೆ. ಲಾಗಿ ; ರಾಯ ಆ ಮುನಿಯ ಸಕಲ ಉಪಚಾರದಿಂದ ಉಪಚರಿಸಿ ಏನು ದಯಮಾಡಿದಿರಿ ? ಎಂದು ಕೇಳಲಾಗಿ ; ಆ ಮುನಿ-ಎಲೈ ರಾಯನೇ ? ನಿನ್ನ ಸಾಧಿ ಈ ಲೋಕದಲ್ಲಿ ರವಿಯೋಪಾದಿ ವ್ಯಾಪಿಸಿ ಇರುವುದಿ೦ದ ನಿನ್ನ ಕಾಣಬೇಕೆಂದು ಬಂದೆನು, ಎಂದ ಮಾತಂ ಕೇಳಿ, ರಾಯನು ಮೆಚ್ಚಿ, ಆಮುನಿಗೆ ಸವಾಲಕ್ಷದ್ರವ್ಯವ ಕೊಟ್ಟು ನಮಸ್ಕಾರವಂ ಮಾಡಿ ಕಳುಹಿ ದನು ಕಣಾ ?-ಎಂದ ಮಾತಿಗೆ ಅನಂಗಳೆಯೆಂಬ ಪುತಳಿಯು ತಲೆದೂಗಿ ನಗುತ್ತ, ಹಾಸ್ಯಂಗೈದು ಹೇಳಿದ ಉಪಕಥೆ :- ಕೆಳ್ಳೆಯ ಚಿತ್ರಶರ್ಮನೆ ! ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುತ್ತ ಇರುವಲ್ಲಿ, ಒಂದು ದಿನ ಕಿರಾತನು ಗಜದಕೊಂಬು, ಕೃಷ್ಣಾಜಿನ, ಅಣಿಮುತ್ತು, ಚೌರಿಸರ ತಂದು, ರಾಯನಿಗೆ ಕಾಣಿಕೆಯನ್ನಿ ರಿಸಿ, ಕೈಮುಗಿದು ಇಂತೆಂದನು :-ಎಲೈ ಮಹಾರಾಯನೇ ? ವನಾಂತರ ದಲ್ಲಿ ಕೂರನ್ನುಗಗಳ ಬಾಧಕವಾಗಿದೆ. ಅದ ತಪ್ಪಿಸಬೇಕೆಂದು ಬಿನ್ನ, ಸಲಾಗಿ ; ರಾಯನು ಕೇಳಿ ಆಕ್ಷಣವೇ ಬಲೆಗಳು, ಕಣ್ಣಿಗಳು, ನಾಯಿಗಳು ಮೊದಲಾದುವನ್ನು ಸನ್ನಾಹಮಾಡಿಸಿಕೊಟ್ಟು, ನಿಂಹ ಶಾರ್ದೂಲ ಮೊದ ಅರ್ಥವ ಹೇಳಿ ಎಂದು ಬೆಸಗೊಳ್ಳಲು ; ವರರುಚಿ ಇಂತೆಂದನು-ಎಲೈ ರಾಜನೇ ! ನಾನು ದೇಶಾಂತರಕ್ಕೆ ಪೋದಲ್ಲಿ, ಪುಂಡರೀಕವೆಂಬ ಪಟ್ಟಣದಲ್ಲಿ ಸಿಂಹಸೇನನೆಂಬ ಅರಸು ರಾಜ್ಯಂಗೆಯ್ಯುತ್ತಿದ್ದನು. ಆತಂ ಲೋಭಿಗಳಲ್ಲಿ ಹೆಚ್ಚಾದವನು, ಯಾ ರಿಗೂ ಏನನ್ನೂ ಕೊಟ್ಟಂಧವನಲ್ಲ. ಆತನು ತನ್ನ ಹೆಂಡತಿಗೆ ಅನ್ನವನು, ತನ್ನ ಓಲೈ ಸಿದವರಿಗೆ ಸಂಬಳವನು ಸಹ ಕೊಡನು. ಯೊವುದಕ್ಕೂ ಹೇಸನು, ಹುಸಿಗೆ ಪಿಸುಣಕ್ಕೆ ಭಂಡಾರವಾಗಿರ್ಪನು, ದುರ್ಮಾರ್ಗ: ಒಬ್ಬನ ಊಟಮಾಡುವನು. ಭೂತಬಲಿಗಳ ಕೊಡನು, ಎಂಜಲ ಕೈಯಿಂದ ಕಾಗೆಯ ಹೊಡೆಯನು, ತ್ಯಾಗ ಕೊಡನು. ನೀರು ಮಜ್ಜಿಗೆಯನ್ನೂ ಸಹ ಯಾರಿಗೂ ಇಕ್ಕದೆ, ನಾಯಂತ ಬಗು ಳುತ್ತ ಮನೆಯ ಹೂಗುವ ಯೋಚಕರ ಗದರಿಸುತ್ತ, ತಾನ ಉ೦ಬನು, ಇ೦ಥವನ ಭೋಜನ (( ಅಭುಕ್ತ!” ಎನಿಸುವುದು, ಮತ್ತೆ ಆತನ ಜನ್ಮ ವ್ಯರ್ಥವು. ಇನ್ನು (( ಭುಕ್ತ ' ಎಂಬುದು ಏನು? ಎಂದರೆ -ದಾನಧರ್ಮ ಪರೋಪಕಾರವಾಗಿ ಮ ಕ್ಕಳು ನಂಟರು ಸ್ನೇಹಿತರು ಹೆಂಡತಿ ಒಡ ಹುಟ್ಟಿದರು ಪರದೇಶಿಗಳು ಎಲ್ಲರಿಗೂ ಅನ್ನ ವಂ ಕೊರಿಸಿ ಉಂಬುವನ ಊಟವೀಗ 11 ಭುಕ್ತ 2' ಎನಿಸುವುದು ಎಂದು ವರರುಚಿ ಪೇಳಲು ; ರಾಯಂ ಕೇಳಿ ಮೆಚ್ಚಿ ಸವಾಲಕ್ಷವರಹವಂ ಕೊಟ್ಟನು ಕಣಾ!-ಎಂದು ಒಂದು ಪ್ರತಿಯಲ್ಲಿ ಬದಲಾಗಿ ಇದೆ.