ಪುಟ:ಬತ್ತೀಸಪುತ್ತಳಿ ಕಥೆ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ. ಹಲ್ಲು ನೋಡಿ ನಾನು ಹಾಸ್ಯಮಾಡಲಾಗಿ ; ಆ ಮಸಿಯು ಕೋಪಿಸಿ, ರಾಕ್ಷಸಿಯಾಗೆಂದು ಶಪಿಸಲಾಗಿ ; ಆ ಬಳಿಕ-ಈ ಶಾಪವಿಮೋಚನ ಯಾವಾ ಗ? ಎಂದು ಋಷಿಯಂ ಕೇಳಿಕೊಳ್ಳಲಾಗಿ ; ಆ ಖಷಿಯು-ನಿನ್ನ ದೇಹ ಎಂ ಟು ನೀಳಂ ಮಾಡಿ, ನಾಲ್ಕು ನೀಳ ನಾಲ್ಕು ದಿಕ್ಕಿಗೆ ಇಟ್ಟು, ನಿಂತ ನಾಲ್ಕು ಸೀಳಂ ಜಯಸ್ತಂಭ ಮಾಡಿದಾಗ, ಈ ಶಾಪ ತೀರುವುದು ಎನ್ನಲಾಗಿ ; ಆಗ ಆಗಮಿಯನ್ನು-ನನ್ನ ಆಹಾರಕ್ಕೇನು ? ಎಂದು ಕೇಳಲಾಗಿ; ದಮಯಂತಿಗೆ ಪತಿಯಾಗಿ ಬಂದವರ ಭಕ್ಷಿಸಿಕೊಂಡು ಇರು-ಎಂದು ನೇಮಿಸಿ, ಇದ್ದುದ ಅಂದ ನಾನು ಇಲ್ಲಿ ಹೀಗೆ ಇದ್ದೆ-ಎಂದ ಮಾತ ರಾಯ ಕೇಳಿ, ಸಂತೋಷ ಪಡಲಾಗಿ; ಬಳಕ ಆ ಸ್ತಿಯನ್ನು ರಾಮನಿಗೆ ಒಂಭತ್ತು ಕೋಟಿ ಹಣವ ನ್ನು ಬೇಕಾದುದನ್ನು ಕೊಡುವ ರತ್ನವನ್ನು ಕೊಟ್ಟು, ಕೈಲಾಸಕ್ಕೆ ಹೋದ ಬಳಕ, ರಾಯನು ಆರತ್ನವನ್ನೂ ಹವನ ಇರಂದರನಿಗೆ ಕೊಟ್ಟು, ಇರ್ವರೂ ಇಲ್ಲಿಗೆ ಬಂದು ಸುಖವಾಗಿ ಇದ್ದರು ಕಣಾ! ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಇಂದ್ರಾವತಿಯೆಂಬ ಪುತ್ತಳಿಯು ಹೇಳಿದ ಹನ್ನೆರಡನೆಯಕಥೆ. ೧೩ ನೆಯ ಕಥೆ, ಹದಿಮನೆಯ ದಿವಸದಲ್ಲಿ ಎಂದಿನಂತೆ ಭೋಜರಾಯನು ಸ್ನಾನ ದೇವತಾರ್ಚನ ಭೋಜನ ತಂಬೂಲವ ತೀರಿಸಿಕೊಂಡು ಮೂವತ್ತೆರಡು ಪುತ್ತಳಗಳಿಂದ ಕೂಡಿದ ನಿಂಹಾಸನದೆಡೆಗೆ ಬಂದು ಬಲಗಾಲಂ ನೀಡುವ ವೇ ಳೆಯಲ್ಲಿ, ಆಸೋಪಾನದ ಕುರಂಗಸೇನೆಯೆಂಬ ಪುತ್ಥಳಿಯು-ಹೋಹೋ : ನಿಲ್ಲು ನಿಲ್ಲು ' ಎಂದು ಧಿಕ್ಕರಿಸಿಲಾಗಿ ; ಭೋಜರಾಯನು ಬೇಲೆ ನಿಂಹಾಸನ ದಲ್ಲಿ ಕುಳಿತು ಚಿತ್ರಕರ್ಮನಿಂದ ಹೇಳಿಸಿದ ಕಥೆ:- ಎಲೆ ಸುತ ೪ಯೆ : ಕೇಳು. ನನ್ನ ಭೋಜರಾಯನು ಧಾರಾ ಪುರದಲ್ಲಿ ಸುರರಾಜ್ಯಂಗೆಯ್ಯುತ್ತಿರುವಲ್ಲಿ ಒಂದು ದಿನ ವರರುಚಿಯ ಸಂ