ಪುಟ:ಬತ್ತೀಸಪುತ್ತಳಿ ಕಥೆ.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸಪುತ್ತಳಿ ಕಥೆ ಕೇಳ್ಳೆಯ ಚಿತ್ರಶರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಸುಖ ವಾಗಿ ರಾಜ್ಯವು ಪಾಲಿಸುವ ವೇಳೆಯಲ್ಲಿ ಒಂದು ದಿನ ಶಿಕಾರಿಗಾಗಿ ಆ ಗ್ಯಕ್ಕೆ ಹೋಗಿ ನಾನಾಮೃಗವಂ ಸಂಹರಿಸಿ ಬರುವಲ್ಲಿ ಒಬ್ಬ ದ್ವಿಜನು ತನ್ನ ಕುಟುಂಬ ಸಹಿತ ಹೊಳೆಯ ದಾಟುವಾಗ, ಅವನ ಹೆಂಡತಿ ಮತ್ತು ನೀರು ಬಂದು ನೀರಿನಲ್ಲಿ ಮುಳುಗಿ ತೇಲಿ ಹೋಗಲಾಗಿ, ಆತನು ಅನೇಕ ದುಃಪಡುವುದು ಕಂಡು, ರಾಯನು ತಾನು ನೀರಿನಲ್ಲಿ ಹೊಕ್ಕು ಆ ಸಿ ಯನ್ನು ಈಚೆಗೆ ಎಳೆತಂದು, ಆತನಿಗೆ ಅವಳನ್ನು ಕೋಟದ ವ್ಯವನ್ನು ಸಹ ಕೊಟ್ಟು, ಸುಖವಾಗಿ ಹೋಗಿ ಎನ್ನಲಾಗಿ ; ಆ ವಿಸ್ತನು-ಎಲೈ ಮಹಾರಾ ಯನೆ ನೀನು ಮಾಡಿದ ಪಾಪಕಾರಕ್ಕೆ ನಿಸಗೆ ಶೀಘ್ರದಿಂದ ಮೋಕ್ಷ ವಾಗುವುದೊಂದು ಮಂತ್ರವ ಉಪದೇಶ ಮಾಡಿಕೊಡುತ್ತೇನೆ ಎನ್ನಲಾಗಿ ; ರಾಯ-ಹಾಗಾಗಲಿ ಎಂದುದಕ್ಕೆ; ಆ ರಾಯನಿಗೆ ಮಂತ್ರ ಪದೇಶವಂ ಮಾಡಿ, ರಾಯನ ಅಪ್ಪಣೆ ತೆಗೆದುಕೊಂಡು ಹೋದ, ಬಳಿಕ, ಅಲ್ಲಿಂದ ರಾಯ ಬರುವ ದಾರಿಯಲ್ಲಿ ಬಂದು ಪರ್ವತದರುಗಿನಲ್ಲಿ ಒಬ್ಬ ಗವಿ ಮಹಾತಪಸ್ಸು ಮಾಡಿದರೂ ಮೋಕ್ಷ ವಾಗದಿರುವುದು ಕಂಡು, ಆ ಋಷಿಗೆ ಮೋಕ್ಷವಾಗುವ ಮಂತ್ರವಂ ಹೇಳಲಾಗಿ ; ರಾಯನಿಗಾ ರುಪಿ ಪುರುಷಲಿಂಗವ ಕೊಟ್ಟು ಕಳುಹಿಸಲಾಗಿ ; ರಾಯ ಈ ಪಟ್ಟಣದ ರಾಯ ಬೀದಿಯಲ್ಲಿ ಬರುವಲ್ಲಿ ಒಬ್ಬ ದರಿದ್ರನಂ ಕಂಡು ಆ ಪುರುಷಲಿಂಗರಂ ಕೊ ಟ್ಟು ತನ್ನ ಅರಮನೆಗೆ ಬಂದು ಸುಖವಾಗಿ ಇದ್ದನು ಕಣಾ! ಇಂತಪ್ಪ ವಿತ ರಣ ಭುಜಬಲ ಮತ್ತೆಲ್ಲಿಯಾದರೂ ಉಂಟೆ ? ಇ೦ತು ಕರ್ಣಾಟಭಾಷಾ ವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಕುರಂಗಸೇನೆ ಎಂಬ ಪುತ್ತಳಿ ಹೇಳಿದ ಹದಿಮೂನೆಯ ಕಥೆ.

  • *

೧೪ ನೆಯ ಕಥೆ. ಹದಿನಾಲ್ಕನೆಯ ದಿವಸದಲ್ಲಿ ಭೋಜರಾಯನು ಎಂದಿನಂತೆ ಸುನ ದೇ ವತಾರ್ಚನೆ ಭೋಜನವಂ ತೀರಿಸಿ, ನಿಂಹಾಸನದ ಬಳಿಗೆ ಬಂದು, ತನ್ನ