ಪುಟ:ಬತ್ತೀಸಪುತ್ತಳಿ ಕಥೆ.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


M ಬತ್ತೀಸವುಳಿ ಕಥೆ &# ನೀಲಲೋಹಿತವೆಂಬ ಗವಿಯಲ್ಲಿ ಮರೀಚಿಯೆಂಬ ಋಷಿ ಆತು ಮಂದಿ ಮಕ್ಕಳು ಸಹ ಇರುವನು, ಅವರ ತಿನ್ನಬೇಕೆಂದು ಒಂದು ಚಿತ್ರಕಾಯ ನೆಂಬ ಹುಲಿಯು ಕಾದಿರುವುದು ಎಂದ ಮಾತ ಕೇಳಿ, ಆಚೆ ಕಾಂತರಾಯನಿಗೆ ಅನೇಕ ಬಹುಮಾನವಂ ಮಾಡಿ ಕಳುಹಿಸಿ, ಬಳಿಕ ರಾಯ ಖೇಚರಮಾ ರ್ಗದಲ್ಲಿ ಆನಂದನವನದ ಬಳಿಗೆ ಹೋಗಲಾಗಿ ; ಆ ಸಮಾಚಾರವನ್ನು ಆ ಋಷಿಯು ಕೇಳಿ, ತನ್ನ ಜೇಷ್ಠ ಪುತ್ರನ ರಾಯನ ಬಳಿಗೆ ಕಳುಹಿಸಿ ತಮ್ಮ ಉಪಾಧಿಯಾವತ್ತೂ ವಿವರಿಸಲಾಗಿ ; ರಾಯ ಕೇಳಿ, ಆ ಗವಿಯೆಡೆಗೆ ಹೋಗಿ, ಅಲ್ಲಿ ಕಾದಿರುವ ಚಿತ್ರಕಾಯನೆಂಬ ಹುಲಿಯಂ ಕೊಂದು, ಆ ಋಷಿಮಕ್ಕಳ ಭೀತಿ ಬಿಡಿಸಿ, ಕಾಪಾಡಿದುದುಂದ ಅರು-ಎಲೈ ಮಹಾರಾಯನೇ ? ನಿನ್ನಿಂದ ನಮ್ಮೆಲ್ಲರ ಜೀವ ಉಳಿಯಿತೆಂದು ಕೊಂಡಾಡಿ, ರಾಯನಿಗೆ ದಕ್ಷಿ ಣಾವರ್ತಶಂಖವಂ, ಏಕಮುಖದ ರುದ್ರಾಕ್ಷಿಯಂ, ವಧಿವಾಮನಮೂರ್ತಿ, ಲಕ್ಷ್ಮೀನಾರಾಯಣಮೂರ್ತಿ- ಎಂಬ ಸಾಲಗಾ ಮಂಗಳ ಸಹ ಕೊಡಲಾಗಿ ; ರಾಯ ತೆಗೆದುಕೊಂಡು, ಅಲ್ಲಿಂದ ಬರುವಲ್ಲಿ, ಒಬ್ಬ ಬುಧನು ಕಳ್ಳರಿಗೆ ಸಿಕ್ಕಿ ದೇವತಾರ್ಚನೆ ದೇವರೊಡನೆಯೆಲ್ಲವನು ಕಳಕೊಂಡು ಹೆಂಡತಿ ಮಕ್ಕಳು ಸಹ ಬರುತ್ತಿರಲು ; ರಾಯಂ ಕಂಡು-ಎಲೈ ಬ್ರಾಹ್ಮಣ ಮನೆ-ನೀನಾರು ? ಎಲ್ಲಿಂದ ಬಂದೆ ? ಎಲ್ಲಿಗೆ ಹೋಗುವೆ ? ಎನ್ನಲಾಗಿ ; ಆತನು ತನ್ನ ವೃತ್ತಾಂತವೆಲ್ಲವಂ ಪೇಳಿದುದಕಂದ ರಾಯನಿಗೆ ದಯೆಬಂದು ಆ ವಿಪ್ರನಿಗೆ ಆ ಬಲಮುರಿಶಂಖ ಸಾಲಿಗ್ರಾಮಗಳ ಲಕ್ಷದವ್ಯ ಸಹ ಕೊಟ್ಟು ಕಳುಹಿಸಿ +ತಾನಿಲ್ಲಿಗೆ ಬಂದು ಸುಖವಾಗಿದ್ದನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಲಾವಣ್ಯವತಿಯೆಂಬ ಪುತ್ತಳಿ ಹೇಳಿದ ಹದಿನಾಲ್ಕನೆಯ ಕಥೆ. ರ ೧೫ ನೆಯ ಕಥ. ಹದಿನೈದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವಂ ತೀರಿಸಿ, ನಿಂಹಾಸನದ ಬಳಿಗೆ ಬಂದು, ಬಲಗಾ ಪಾ-fಕಳುಹಿಸಲಾಬ್ರಾಹ್ಮಣಂ ರಾಯನಂ ಹಳಿಸಿ ಕೊ೦ಡಾಡಿ ಆತನೊpr ಬೀಳ್ಕೊಂಡು ಹೋದನು ಕಣಾ!