ಪುಟ:ಬತ್ತೀಸಪುತ್ತಳಿ ಕಥೆ.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


LL ಕರ್ಣಾಟಳ ಕಾವ್ಯಕಲಾನಿಧಿ, ಲಂ ನೀಡುವ ಸಮಯದಲ್ಲಿ, ಆ ಸೋಪಾನದ ಮೋಹಿನಿಯೆಂಬ ಪುತ್ತಳ ಧಿಕ್ಕರಿಸಲಾಗಿ ; ಭೋಜರಾಯ ಬೇರೆ ಸಿಂಹಾಸನದಲ್ಲಿ ಕುಳಿತು ಚಿತ್ರ ಶರ್ಮನಿಂದ ಹೇಳಿಸಿದ ಕಥೆ :- ಎಲೆ ಪುತ್ತಳಿಯೇ ? ಕೇಳು-ಧಾರಾಪುರದಲ್ಲಿ ನಮ್ಮ ರಾಯ ಸುಖ ರಾಜ್ಯವಂಗೆಯ್ಯುವಲ್ಲಿ ಒಂದು ದಿನ ಆ ಪುರದಲ್ಲೊಬ್ಬ ಸಮಾಧಿಕನೆಂಬ ಬ್ರಾಹ್ಮಣ ಎಂದು ರಾಯನ ಸಂಗಡ ಇಂತೆಂದನು :-ಕೇಳ್ಳ ಮಹಾರಾ ಮನೇ ? ನನ್ನ ಮನೆಯಲ್ಲಿ ನನಗೂ ನನ್ನ ತಾಯಿಗೂ ಆಗದು ; ನನ್ನ ಹೆಂಡತಿಗೂ ನನಗೂ ಆಗದು ; ಅತ್ತೆ ಸೊಸೆಯರಿಗೂ ಆಗದು ; ಹೀಗೆ ಒಬ್ಬರಿಗೊಬ್ಬರು ಬಡಿದಾಡುತ್ತ ಇದ್ದೇವೆ. ಈ ನನ್ನ ಕರ್ಮವ ಬಿಡಿಸ ಬೇಕು ಎನ್ನಲಾಗಿ ; ರಾಯ ಕೇಳಿ-ಈ ದೋಷ ನನ್ನದೆನ್ನಲಾಗಿ ; ಆ ಮಾತಿಗೆ ಮಂತ್ರಿಗಳು-ಅವನ ಅನುಭವಕ್ಕೆ ನಿಮಗೆ ಕಾರಣವೇನು ? ಎಂದುದಕ್ಕೆ, ರಾಯ-ಕೇಳಿರೆ, ಆ ವಿಗ್ರೆನಿಗೆ ವೃತ್ತಿ ಕ್ಷೇತ್ರ ಉಚಿತಂಗಳ ನಾವು ಕೊಟ್ಟಿದ್ದರೆ ಅವನ ಮನೆಯಲ್ಲಿ ಜಗಳ ಬಾರದು. ಇದಜಿಂದ ಕಲಹವುಂಟಾಯಿತು. ಅದು ಕಾರಣ ಈ ದೋಷ ನಮ್ಮದೇ ಸರಿ-ಎಂದು ರಾಯನಾಡಿದ ಮಾತಿಗೆ ಸಕಲರೂ ಸಂತೋಷಪಡಲಾಗಿ ; ಆ ಬಳಕ ಆ ದ್ವೀಜ ನಿಗೆ ಉಂಬಳ ಸ್ವಾಸ್ಥ್ಯವಂ ಸವಾಲಕ್ಷದವ್ಯ ಸಹ ಕೊಟ್ಟು ಕಳುಹಿಸಿದನು ಕಣಾ ! ಎಂದ ಮಾತಿಗೆ ಮೋಹಿನಿಯೆಂಬ ಪುತ್ತಳಿ ನಗುತ್ತ ಹಾಸ್ಯಂ ಗೆಯು ಹೇಳಿದ ಉಪಕಥೆ :- ಕೇಳೋಯಾ ಚಿತ್ರಶರ್ಮನೇನಮ್ಮ ವಿಕ್ರಮಾದಿತ್ಯರಾಯ ರಾಜ್ಯವ ಪಾಲಿಸುವ ವೇಳೆಯಲ್ಲಿ ಒಂದು ದಿನ ಒಬ್ಬ ಬ್ರಾಹ್ಮಣೋತ್ತಮ ರಾಯನ ಎದುರಿಗೆ ಬಂದು ನಿಂತು-ಎಲೈ ಮಹಾರಾಯನೇ ! ನಾನು ದಾರಿದ್ರ ಪದಿಂದ ದೇಶದೇಶದಲ್ಲಿರುವ ದೇವರ ಪೂಜಿಸಿದಾಗೂ ದಾರಿದ್ರ, ಬಿಡದೆ ಇರ ಲಾಗಿನೀನು ನೆರ ದಾತನೆಂದು ನಾನು ಕೇಳಿ ಬಂದೆ. ನನ್ನ ದಾರಿದ), • • • ++++ +++ ++ ++ond • •+. ಪಾ-1, ನಾನಾ ದೇಶಂಗಳಂ ತಿರುಗಿ ಆಯಾ ದೇಶಗಳಲ್ಲಿದ್ದ ದೇವತೆಗಳ ಪೂಜೆಯಂ ಮಾಡಿ, ನಾನಾ ದೇಶಗಳಲ್ಲಿರುವ ಬೆಟ್ಟಗಳನ್ನು ಬೀಳುವೆನೆಂದರೆ ನನ್ನ ದಾರಿದ್ರ ಪೋಗದು.