ಪುಟ:ಬತ್ತೀಸಪುತ್ತಳಿ ಕಥೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. LY ಕರ್ಣಾಟಕ ಕಾವ್ಯಕಲಾನಿಧಿ, ಕಿನ್ನರನೋ ? ಯಕ್ಷನೋ ? ಯಾರು ? ಎನ್ನಲಾಗಿ ;-ತಾನು ವಿಕ ಮಾಧಿತ್ಯರಾಯನೆಂದುದಕಂದ, ಆ ಪುರುಷ ಕರಗಳ ಮುಗಿದು ನಂದಿಸಲಾ ಗಿ ; ಆಗವನ ಮುಂದಲೆಯಂ ಬಿಟ್ಟು, ಕುಳ್ಳಿರಿಸಿ-ನೀನು ಸ್ವರ್ಗಾದಿ ಭೋ ಗವನ್ನು ಅನುಭವಿಸುತ್ತಿದ್ದರೂ ಹೇಣ ತಿನ್ನುವುದೇನೆಂದು ಕೇಳಿದುದಕ್ಕೆ, ಆ ಪುರುಷ-ಎಲೈ ಮಹಾರಾಯನೇ, ನಾನು ಪೂರ್ವಜನ್ಮದಲ್ಲಿ ಸುರಭಿಪಟ್ಟ ದಲ್ಲಿ ವೀರಸೇನನೆಂಬರಸಾಗಿ ರಾಜ್ಯವಾಳುವಲ್ಲಿ ಗೋದಾನ, ಭೂದಾನ, ಕನ್ಯಾದಾನ, ಹಿರಣ್ಯದಾನ, ವಸ್ತ್ರದಾನ, ಮುಂತಾದ ದಾನವ ಮಾಡಿ, ಅನ್ನೋದಕದಾನವ ಮಾಡದ ಕಾರಣ-ಸ್ವರ್ಗಭೋಗವಾದರೂ, ಅನ್ನೋ ದಕವಿಲ್ಲವಾದುದnಂದ ನನ್ನ ಹೆಂದ ರಕ್ತ ಮಾಂಸವು ತಿನ್ನುವುದಾಗಿ ಅಮೃತಸೇವನೆ ತಪ್ಪಿತು. ಈ ಲೋಕದಲ್ಲಿ ಆಹುತಿಸಮಾನವಾದ ಹೋಮ, ಗಾಯತ್ರೀಸಮಾನವಾದ ಜಪ, ಅನ್ನೋದಕಸಮಾನವಾದ ದಾನವಿಲ್ಲ” ಎಂಬ ನೀತಿ ಅpಿಯದೆ, ಅನ್ನೋದಕದಾನ ಮಾಡದ ನಿಮಿತ್ತ, ಈ ಪಾಪಿ ಯೆನಗಾಯಿತೆಂದು ಹೇಳಲಾಗಿ ; ಅದ ರಾಯ ಕೇಳಿ, ಈ ದಿವ್ಯಪುರುಷನಂ ರಕ್ಷಿಸಬೇಕೆಂದು ಚಿಂತಿಸಿ, ತಾಯ ಗರ್ಭದಿಂದ ತಾನು ಪಟ್ಟಿದಾರಭ್ಯ ಅಂದಿನ ವರೆಗೆ ಮಾಡಿದ ಅನ್ನೋದಕ ದಾನದ ಫಲವನ್ನು ಆತನಿಗೆ ಧಾರೆಯೆರೆದು ಕೊಡಲಾಗಿ ; ದೇವದುಂದುಭಿ ಮೊಳಗಿದುವು ; ದೇವತೆಗಳು ಪೂಮಳೆಗಂತೆ ದರು, ಆ ಫಲದಿಂದ ಹಣ ಮರೆಯಾಗಲು, ಆ ಪುರುಷನಿಗೆ ಹೆಣ ತಿನ್ನುವುದು ತಪ್ಪಿ ಅನ್ನುತಸೇವನೆಯುಂಟಾಗಿ, ದೇವತೆಗಳು ವಿಮಾನವ ತೆಗೆದುಕೊಂಡು ಬಂದು ದಿವ್ಯಪುರುಷನ ದೇವಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ರಾಯನ ಉವಾರಸತಿ ಕಗುಣಕ್ಕೆ ಮೆಚ್ಚಿ ಆಪುರುಷ ಕೇಳಿದುದ ಕೊಡುವು ದೊಂದು ರತ್ನ ವಂ ರಾಯನಿಗೆ ಕೊಟ್ಟು, ಸುರಲೋಕಕ್ಕೆ ಹೋದನು. ಆ ಬಳಿಕ ಅಲ್ಲಿಂದ ರಾಯ ಬರುವ ದಾರಿಯಲ್ಲಿ ಒಬ್ಬ ಬ್ರಾಹ್ಮಣ ಅನ್ನವಿಲ್ಲದೆ ಕ್ಷು ತಿನಿಂದಿರುವನಂ ಕಂಡು, ಅವನಿಗಾರನಂ ಕೊಟ್ಟು, ಇಲ್ಲಿಗೆ ಬಂದು ಸುಖವಾಗಿದ್ದನು, ಕಣಾ ? ಇಂತು'ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಮೋಹಿನಿಯೆಂಬ ಪುತ್ತಳಿಯು ಹೇಳಿದ ಹದಿನೈದನೆಯ ಕಥೆ, m remove