ಪುಟ:ಬತ್ತೀಸಪುತ್ತಳಿ ಕಥೆ.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೦ ಕರ್ಣಾಟಕ ಕಾವ್ಯಕಲಾನಿಧಿ, ಯ ಈ ಉಜ್ಜಿನಿ ರಾಜ್ಯ ಪಾಲಿಸುವಲ್ಲಿ ಒಂದು ದಿನ ಈ ಪುರದೊಳೊಬ್ಬ ಧನದತ್ತನೆಂಬ ವರ್ತಕ ಬಹು ದನ್ಯಸಂಪಾದಿಸಿ ತನ್ನಲ್ಲಿ ತಾನೇ ಯೋಚಿಸಿ 1 (( ಭೋಜನಕ್ಕಿಲದ ಹಣ ತಾನಿರಲೇಕೆ? ಊಟಕ್ಕಿಲ್ಲದ ಸಿ ಯಿರಲೇಕೆ? ಥರ್ಮಕ್ಕಿಲದ ಧನವಿರಲೇಕೆ? ಪರೋಪಕಾರ ಗೆಯ್ಯುವನೊಬ್ಬ ಧರಾತ್ರ ನಿಗಲ್ಲದೆ ಮಿಕ್ಕಾದವರಿಗೆ ಭಕ್ತಿ ದೊರೆವುದೆ ? ” ಎಂಬ ನೀತಿಯಂ ತಿಳಿ ದು, ಭಾಗ್ಯವಿದ್ದ ನಿಮಿತ್ತ 1 ಗೋದಾನ ಭೂದಾನ ಕನ್ಯಾದಾನ ಹಿರಣ್ಯದಾನ ಅನ್ನೋದಕದಾನ ವಸ್ತ್ರದಾನ ಮುಂತಾದ ದಾನಗಳಂ ಮಾಡಿ, ತೀರ್ಥಯಾ ತ್ರೆಗೆ ಹೋಗಿ, ಪುಣ್ಯನದಿಗಳಲ್ಲಿ ಸ್ನಾನವಂ ಮಾಡಿ, ಆ ಬಳಿಗಳಲ್ಲಿರುವ ದೇವರುಗಳ ಪೂಜೆಯಂ ಮಾಡಿ, ಮರಳಿ ಪಟ್ಟಣಕ್ಕೆ ಬಂದು ಸುಖದಲ್ಲಿ ಇ ರುತ್ತ, ಒಂದುದಿನ ವಿಕ್ರಮಾದಿತ್ಯರಾಯನ ಒಲಗಕ್ಕೆ ಬರಲು ; ರಾಯ ಆ ವರ್ತಕನಿಗೆ ಬಹುಮಾನ ಮಾಡಿಸಿ-ನೀನು ಯಾತ್ರೆಗಳ ಮಾಡಿರುವ ವಿಚಾ ರವ ಕೇಳ ಇದ್ದೆವೆಯಾದರೂ ಆಸ್ಥಳಗಳಲ್ಲಿ ನಡೆದ ಅತಿಶಯವನ್ನು ನಿನ್ನಿಂದಲೇ ಕೇಳಬೇಕು ಎಂದು ಹೇಳಲಾಗಿ ; ಆ ವರ್ತಕನು-ಹಿಮವತ್ಸರ ತದ ಬಳಿಯಲ್ಲಿರುವ ಮಣಿಮಂಡಲವೆಂಬ ಪಟ್ಟಣದ ಶ್ರುತಸೇನನೆಂಬ ರಾಯ ಬಹುಕಾಲ ರಾಜ್ಯವಾಳುತ್ತಿರುವ ಸಂಸ್ಕಾರಫಲದಿಂದ ಒಬ್ಬ ಮಗಳ ಹರ ದು ಗಂಡುಮಕ್ಕಳಿಲ್ಲದೆ ಇರಲು, ಮುಂದೆ ಪಟ್ಟಣಕ್ಕೆ ಯಾರೂ ಇಲ್ಲ. ಒಬ್ಬ ಮಗಳಿದ್ದಾಳೆ. ಇದಕ್ಕೆ ಹೇಗೆ ಮಾಡಬೇಕೆಂದು ಮಂತ್ರಿಗಳೊಡನೆ ಆಲೋ ಜೆಸಿ, ಇರುವ ಮಗಳಿಗೆ ಪಟ್ಟ ಕಟ್ಟಬೇಕೆಂದು ಅವರು ಹೇಳೆ, ಆ ಮಗ ೪ಗೆ ಪಟ್ಟಾಭಿಷೇಕವಂ ಮಾಡಿ, ರಾಜ್ಯಭಾರವಂ ಮಾಡಿಸುತ್ತಿರಲಾಗಿ ; ಆ ರಾಯ ತನ್ನ ಮಗಳು ಯೌವನಸ್ಥೆಯಾದಳೆಂದು ತಿಳಿದು, ಇನ್ನು ವಿವಾಹ ವಿಲ್ಲದೆ ಇರಬಾರದೆಂದು ಅವಳಿಗೆ ತಕ್ಕ ಪುರುಷನ ವಿಚಾರಿಸುತ್ತಿರುವಲ್ಲಿ, ಆ ಪಟ್ಟಣದಲ್ಲೊಬ್ಬ ರಾಕ್ಷಸನಿರುವನು. ಅವನು ಹೊಸಜನರ ಕಂಡಕ್ಷಣವೇ ತಿನ್ನುವನು (ಎಂದು ಕೇಳಿ) ಅದು ಕಾರಣ ಅಲ್ಲಿಗೆ ಯಾರೂ ಹೋಗದೆ ಇರು m m ) ಪಾ-2, ಭೋಜನೋಚಿತವಾದ ಸಕಲ ಪದಾರ್ಥಗಳಿಂದ ಭುಂಜಿಸುವ ಭಕ್ತಿ ಯೆಂಬುದು ಬಹು ಪುಣ್ಯಾತ್ಮನಿಗಲ್ಲದೆ ದೊರಕದೆಂದು, ತನಗೆ ಭಾಗ್ಯವುಂಟಾದ ಕಾರಣ.