ಪುಟ:ಬತ್ತೀಸಪುತ್ತಳಿ ಕಥೆ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ. ಅಲ್ಲಿಂದ ಆಕಾಶಮಾರ್ಗದಲ್ಲಿ ಇಲ್ಲಿಗೆ ಬಂದು, ಈ ರಾಜ್ಯವನ್ನು ಪರಿಪಾ ಲಿಸಿ ಪೊರೆಯುತ್ತ, ಈನಿಂಹಾಸನಾರೂಢನಾಗಿ ತಾನು ಸುಖದಲ್ಲಿದ್ದನುಕಣಾ! ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ಕುರಂಗಲೋಚನೆಯೆಂಬ ಪುತ್ತಳಿ ಪೇಳಿದ ಹದಿನಾ೦ನೆಯ ಕಥೆ.

೧೭ ನೆಯ ಕಥೆ. -~-- ಹದಿನೇಳನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚನೆ ಭೋಜನ ತಾಂಬೂಲವ ತೀರಿಸಿ ನಿಂಹಾಸನದ ಬಳಿಗೆ ಬಂದು ಬಲಗಾಲಂ ನೀಡುವ ಸಮಯದಲ್ಲಿ, ಆ ಸೋಪಾನದ ಕಾಮಕೇಳಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾಜನು ಖಿನ್ನನಾಗಿ ಬೇಕು ನಿಂಹಾಸನದಲ್ಲಿ ಕುಳ ತು ಚಿತ್ರಶರ್ಮನಿಂದ ಹೇಳಿಸಿದ ಕಥೆ:-- 1 ಎಲೆ ಪುತ್ತಳಿಯೇ ' ಕೇಳು. ಧಾರಾಪುರದಲ್ಲಿ ನನ್ನ ಭೋಜ ರಾಯನು ಸುಖರಾಜ್ಯಂಗೆಯ್ಯುವಲ್ಲಿ ಒಂದುದಿನ ನಾಟಕಶಾಲೆಯಲ್ಲಿ ಕುಳಿತು ಚಿತ್ರಲೇಖೆಯೆಂಬ ವೇತಿಯ ನಾಟ್ಯವಂ ನೋಡುವಲ್ಲಿ ರಾಯಂಗೆ ವಾಹ ಕಂ ಡುದ ಹಡಸಿಗೆ ತಿಳಿದು ಪರಗಿಂಡಿಯಂ ಕುಡಲಾಗಿ ; ರಾಯ ದಾಹಶಮನ ಮಾಡಿಕೊಂಡು ಹಡಪಿಗನ ಮೆಚ್ಚಿ ಆ ಸವಾಲಕ್ಷದ ಗಿಂಡಿಯನ್ನು ಅವನಿಗೆ ಕೊಟ್ಟು ಆ ದೇಶಿಯ ನಾಟ್ಯದ ಕುಶಲತೆಗೆ ಅವಳಿಗೆ ಸವಾಲಕ್ಷೆದವ್ಯವನಿ ತು ಕಳುಹಿಸಿದನು, ಎಂದ ಮಾತಿಗೆ ಕಾಮಕೇಳಿಯೆಂಬ ಪುತ್ತಳಿ ನಗುತ್ತ ಹಾಸ್ಯಂಗೆಯ್ದು ಪೇಳಿದ ಉಪಕಥೆ:- ಪಾ-1, ಎಲೆ ಪುತ್ತಳಿಯೆ ? ಕೇಳು. ನನ್ನೊಡೆಯ ಭೋಜಿರಾಯನು ಧಾರಾಪುರದಲ್ಲಿ ಸುಖರಾಜ್ಯಂಗೆಯ್ಯುತ್ತಿಪ್ಪ ಸಮಯದಲ್ಲಿ, ಒಂದಾನೊಂದು ದಿನ ತನ್ನ ನಾಟಕಶಾಲೆಯೋಳು ನಾನಾವಿಧದ ನಾಟ್ಯವನಾಡುತ್ತ ಇರಲಾಗಿ, ರಾಯಂಗೆ ದಾಹವಾಗಲು, 'ಗಿಂಡಿಯ ಪನ್ನೀರನ್ನೆಲೆ ಯುವ ಸಮದಲ್ಲಿ ನಾಟ್ಯವಿದ್ಯೆಯ ಕುಶಲ ತೆಗೆ ಮೆಚ್ಚಿ ಕಾಯಂ ತಲೆದೂಗುತ್ತಿರಲು, ಗಿಂಡಿಯ ಸನ್ನಿರೆ ನೆರೆಯುತ್ತಿರಲು ;