ಪುಟ:ಬತ್ತೀಸಪುತ್ತಳಿ ಕಥೆ.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


fo ಕರ್ಣಾಟಕ ಕಾವ್ಯಕಲಾನಿಧಿ, ಗಿದ್ದಾಗ ನಡೆದ ವೃತ್ತಾಂತವ ಹೇಳಿ, ಅದುಕಾರಣ ಅಟ್ಟಹಾಸದಿಂದ ನಕ್ಕನು ಎಂದು ಹೇಳಲಾಗಿ; ರಾಯ ಮೆಜಿ ವರರುಚಿಗೆ ಸವಾಲಕ್ಷ ದ್ರವ್ಯವ ಕೊಟ್ಟು, ಮನ್ನಿಸಿದನು ಕಣಾ ! ಎಂದ ಮಾತಿಗೆ ರತ್ನವತಿಯೆಂಬ ಪುತ್ತಳ ನಗುತ ಹಾಸ್ಯಗೆಯ್ದು ಪೇಳಿದ ಉಪಕಥೆ :-- ಕೇಳೋಯಾ ಚಿತ್ರ ಶರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ಪಾಲಿಸುವಲ್ಲಿ ಒಂದು ದಿನ ಒಬ್ಬ ಬೇಟೆಗಾಲ ಜಿಂಕೆಯ ಚರ್ಮ, ಪುಲಿಯ ಚರ್ಮ, ಪುಣುಗುಬೆಟ್ಟು, ಕರಿ ಸಹ ತಂದು, ಕೈಗಾಣಿಕೆ ಬೊಪ್ಪಿನಿ-ಎಲೈ ಮಹಾರಾಯನೇ ! ಮೃಗಗಳು ಅರಣ್ಯದ ವನಗಳಲ್ಲಿ ಹೇರಳವಿದೆ, ಈಗ ಬೇಂಟೆಗೆ ಸಮಯವಾಗಿದೆ ಎಂದು ಆಕೆ ಮಾಡಲಾ ಗಿ; ರಾಯನು ಕೇಳಿ, ಆಕ್ಷಣವೇ ಹೋಟು ನಾನಾಮೃಗಗಳ ಬಡಿಯ ಬೇಕೆಂದು ಬಲೆಗಳ ಬೀಸಿ, ಗಿಡವನೆಲ್ಲಾ ಶೋಧಿಸುತ್ತ, ಬೇಟೆಯನಾಡು ಈ ಬರುವಲ್ಲಿ, ಒಂದು ಕಾಡ ಹಂದಿಯ ಕಂಡು ಬೆನ್ನಟ್ಟಿ ಹೋಗಲಾಗಿ, ಅದು ಕೈಗೆ ಸಿಕ್ಕದೆ ಬಂದು ಗವಿಯ ಹೊಕ್ಕಿತು. ರಾಯನು ಆ ಗವಿಯ ಪೊಕ್ಕು, ಹುಡುಕಿ ನೋಡಲಾಗಿ; ಅಲ್ಲಿ ಮತ್ತೊಂದು ಬಿಲದ್ವಾರ ಕಂಡು, ಅದಲ್ಲಿ ಹೋಗಲಾಗಿ; ಒಂದು ಕೋಟಿ ಸುವರ್ಣಮಯವಾಗಿ ಕಾಣಿ ಸಲು; ಆಕೋಟೆಯೊಳಗೆ ಹೋಗಿ ನೋಡಲಾಗಿ, ನವರತ್ನಖಚಿತವಾದ ನಿಲಗನ್ನಡಿ ಬಾಗಿಲುಗಳನ್ನುಳ್ಳ ಮನೆಗಳಿ೦ದೊಪ್ಪುವ ನಾನಾತರದಿಂದ ಪ್ರಕಾಶಮಾನವಾದ ಪಟ್ಟಣವಿರಲು, ಅದ ಬಳಿಯ ಉದ್ಯಾನವನಕ್ಕೆ ರಾ ಯನು ಹೋಗಲಾಗಿ ; ಅಲ್ಲಿ ಆ ಪಟ್ಟಣದ ಕಾವಲುಗಾರ ಕಂಡು ಈ ಪಟ್ಟಣವು ಯಾರದು ? ಇದನಾಳುವ ಅರಸು ಯಾರು ? ಎಂದು ಕೇಳ ಲಾಗಿ; ಅವರು-ಇದು ಶೋಣಿತವೆಂಬ ಪಟ್ಟಣ. ಇದನಾಳುವನು ಬಲಿತ ಕ್ರವರ್ತಿಯೆಂದು ಹೇಳಿ, ಆ ಬಳಕ-ನೀವಾರೆಂದು ಕಾವಲುಗಾರು ಕೇಳ ಲಾಗಿ; ರಾಯ ತನ್ನ ವೃತ್ತಾಂತವ ಅವರೊಡನೆ ಪೇಳಲಾಗಿ; ಆ ಜನವು ಕೇಳಿ ತನ್ನೊಡೆಯನಾದ ಬಲೀಂದ್ರ ಚಕ್ರವರ್ತಿಯ ಬಳಿಗೆ ಹೋಗಿ, ಕೈ ಮುಗಿದು-ಎಲೈ ಚಕ್ರವರ್ತಿಯೇ ? ನಿಮ್ಮ ಉದ್ಯಾನವನಕ್ಕೆ ವಿಕ್ರಮಾದಿ ತ್ಯರಾಯ ಬಂದಿದ್ದಾರೆ ಎನ್ನಲಾಗಿ ; ಆತ ಅಕ್ಷರಪಟ್ಟು ತನ್ನ ಮಂತ್ರಿಗಳ ಕಳುಹಿಸಿ, ತಾನು ಎದುರಾಗಿ ಹೋಗಿ, ರಾಯನ ತನ್ನ ಅರಮನೆಗೆ ಕರೆದು