ಪುಟ:ಬನಶಂಕರಿ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

ಅಮ್ಮಿಯ ಮಾವ ಒಂದು ಪುಸ್ತಕ ತೆರೆದು ಎರಡು ಪುಟ ಓದಿದರು ಯಾವುದೋ
ದಸ್ತಾವೇಜು ತೆರೆದು ನಾಲ್ಕಾರು ಪುಟ ಮಗುಚಿ ಹಾಕಿದರು. ಅದೂ ಬೇಸರವಾಯಿತು
ಕನ್ನಡಕವನ್ನು ಮೂಗಿನ ಮೇಲಿಂದ ಇಳಿಸಿ ಮಡಚಿಟ್ಟು ಅತ್ತಿತ್ತ ಶತಫಥ ತುಳಿದರು.
ಅಮ್ಮಿ ದೇವರ ಮನೆಗೆ ಹೋದಳು. ಅಲಂಕೃತ ಮಂಟಪದೊಳಗೆ ಮನೆದೇವರ
ವಿಗ್ರಹ ನಿಶ್ಚಲವಾಗಿ ಕುಳಿತಿತ್ತು ಅಲ್ಲೇ ಬಾಗಿಲ ಆತು ಕಾಲು ಕೆರೆಯುತ್ತ ಅಮ್ಮಿ
ನಿಂತಳು. ಅವ್ಯಕ್ತ ಪ್ರಾರ್ಥನೆಯ ನುಡಿಗಳೆಂಬಂತೆ ತುಟಿಗಳು ಚಲಿಸುತಿದ್ದವು.
ಹಿಂಬದಿಯಿಂದ ನಡೆದು ಬಂದು ಅತ್ತೆ ಹೇಳಿದರು;
"ನೀನು ಊಟ ಮಾಡಿ ಮಲಕ್ಕೋ ಅಮ್ಮಿ"
-ಎಲ್ಲಾದರೂ ಉಂಟೆ ಎಂತಹ ಮಾತು?
"ನಾ ಒಲ್ಲೆ ಅತ್ತೆ. ನಂಗೆ ಹಸಿವಿಲ್ಲ"
ಕಾಡು ಹಾದಿ ..ಕತ್ತಲು..ಅಮ್ಮಿಯ ಗಂಡನನ್ನು ಬಸಿರಲ್ಲಿಹೊತ್ತು ಹೆತ್ತಿದ್ದ ಆ
ತಾಯಿಗೆ ಯಾಕೋ ಒಂದು ರೀತಿಯ ಅಳುಕು. ಶೀತಲ ಗಾಳಿ ನರನಾಡಿಗಳನ್ನು ತಿವಿಯುವ
ಹಾಗೆ ಆ ಅಳುಕು ಹೃದಯ ಹಿಂಡು ತಿತ್ತು ತೂಕಡಿಸುತ್ತಿದ್ದ ಎಳೆಯ ಮಕ್ಕಳಿಬ್ಬರನ್ನೂ
ಮಲಗಿಸಿದ್ದಾಯಿತು..ಆ ಬಳಿಕ ಯೋಚನೆಗಳನ್ನು ಓಡಿಸಲೆಂದು ದೇವರ ನಾಮ .."ಕಂಡು
ಕಂಡು ನಿ ಎನ್ನ ಕೈ ಬಿಡುವರೆ.."
ಮಾವ ಅಂಗಳಕ್ಕೆ ಹೋಗಿ ನಿಂತರು ಬಹಳ ಹೊತ್ತು,
ತನಗರಿವಿಲ್ಲದಂತೆಯೇ ಅಮ್ಮಿ ಅತ್ತೆ ಹತ್ತಿರ ಬಂದಿದ್ದಳು.ಅತ್ತೆಯ ಮಡಿಲಲ್ಲಿ
ಮುಖವಿರಿಸಿ ಎಲ್ಲವನ್ನೂ ಮರೆಯ ಬಯಸಿದ್ದಳು ಅಮ್ಮಿ ಹಿತಕರವಾಗಿ ಮುಂಗುರುಳು
ಅತ್ತೆಯ ಬೆರಳುಗಳು .ಆ ಪಲ್ಲವಿ.."ಕಂಡು ಕಂಡು ನೀ ಎನ್ನ.."ಎಲ್ಲ
ವನ್ನೂ ಮರೆಯುವ ಸಾದ್ಯತೆ..ತಿಳಿದೋ ತಿಳಿಯದೋ ಬಲೆ ಬೀಸಿದ ಕಳ್ಳ ನಿದ್ದೆ..
ಇರುವಿಕೆಯನ್ನು ಮರೆತ ಆ ಅವಸ್ತೆಯೊಳಗೆ ಅಮ್ಮಿ ಅದೆಷ್ಟು ಹೊತ್ತು ಇದ್ದಳೋ!
ಯಾವುದೋ ಪಿಸು ಮಾತು ಕೇಳಿಸಿತು ಅಮ್ಮಿಗೆ.ಇದು ಸ್ವಪ್ನವಿರಬೇಕು-ಎಂದು
ಕೊಡಳು ಆಕೆ ಅವರು ಬಂದು ತನಗಾಗಿ ದೃಶ್ಟಿ ಹಾಯಿಸುತ್ತಿದ್ದ
ಹಾಗೆ...ಅಮ್ಮಿ ನಿದಾನವಾಗಿ ಕಣ್ಣು ತೆರೆದಳು ಅತ್ತೆ ಮಾವ ಜತೆಯಾಗಿ ಬಾಗಿಲ ವಬಳಿ ನಿಂತಿದ್ದರು. ಬೇರೆ ಯಾರೂ ಇರಲ್ಲಿಲ್ಲ, ಸಾಲು ದೀಪಗಳಿನ್ನೂ ಉರಿಯುತ್ತಿದ್ದವು,
ಅಲ್ಲೊಂದು ಇಲ್ಲೊಂದು ಸೊಡರು ಕಣ್ಣು ಮುಚ್ಚಿತ್ತು, ಅಷ್ಟೆ,ಪಿಸುಮಾತು ಬಾಗಿಲ ಬಳಿಯಿಂದ ಬರುತಿತ್ತು.
ಅತ್ತೆ ಹೇಳುತಿದ್ದರು;
"ನೋಡಿ ಈಗ ಸ್ವಷ್ಟವಾಗಿ ಕಾಣ್ತಿದೆ ಕಂದೀಲು ಅಲ್ಲ?"
"ಹೂಂ.. ಹೌದು.. ಬೇಗ ಬೇಗನೆ ಬರ್ತಿರೋ ಹಾಗಿದೆ"
ಅಮ್ಮಿ ಥಟ್ಟನೆ ಎದ್ದು ಕುಳಿತಳು,ತಾನೂ ಬಾಗಿಲ ಬಳಿಗೆ ಓಡಬೇಕೆಂಬ ಅವಳಿಗೆ
ಆಸೆಯಾಯಿತು,ಆದರೂ ಒಳಮನಸ್ಸು ಹೇಳುತ್ತಿತ್ತು: ಇಲ್ಲೇಕೂತಿರು.ಈ ನಿರೀಕ್ಷೆ
ಎಷ್ಟೋಂದು ಸುಂದರ| ಇಲ್ಲೇ ಕೂತಿರು.."
ಆ ಸುಖಕ್ಕೆ ಭಂಗ ಬರಬಾರದೆಂದು ಅಮ್ಮಿಅಲ್ಲಿಯೇ. ಚಾಪೆಯ ಮೇಲೆ ಕುಳಿತಳು.