ಪುಟ:ಬೃಹತ್ಕಥಾ ಮಂಜರಿ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ್ ಥಾ ಮಂಜರಿ. ೧nt ಣಿಯು ರಾಕಚಂದ್ರನು ಕಂಡ ಕುಮುದಿನಿವೊಲು, ಉಬ್ಬಿದ್ದು, ಪರಮಾನಂದ ಭರಿತಳಾಗಿ, ಬಿಗಿದಾಲಿಂಗಿಸಿ, ತೊರ್ದ ಮಣಿ ಕೂರ್ಪಾಸಂ ಪದ್ಮನೇ ಬಿರಿದು ಪೋಗೆ, ಬದ ದಿವ್ಯ ಬಲೂಲೆಗಳಿಂದಾ ತನುರವನೊತ್ತುತ, ಕದಪ್ರಗಳು ಮುತ್ತಿಡುತ್ತ ಅಧರಮಂ ಸವಿಯುತ್ತೆ, ಅಂತೆಯೇ ಅಂತಃ ಪರವಂ ಹೊಗಿಸಿ, ಸಕಲೋಪಚಾರಂಗಳಿಂ ಮನ್ನಿಸಿ, ರತ್ನ ಖಚಿತವಾದ ವಂಚದ ಹಂಸತೂಲಿಕಾ ತಲ ದೊಳು ಕುಳ್ಳಿರಿಸಿ, ಎಲೈ ಪ್ರಾಣಕಾಂತನೇ ; ನಿನ್ನ೦ ತೊರೆದು ಬದುಕಿದಕಾಲಮಂ ಕೋಟಿಕಲ ೦ಗಳಂತೆ ಕಳೆದೆನು, ಇಂದೀ ನಿನ್ನ ಮುಖೇ ಂದು ಸಂದರ್ಶನದಿಂದ, ನನ್ನ ಪಾಪವೆಲ್ಲವೂ ಕುಂದಿತು, ಇಂದೀ ನನ್ನ ಜನ್ಮವು ಧನ್ಯವಾದುದು ಎಂಬ ಬಾರಿಬಾರಿಗೂ ಪತಿಯಂ ಬಿಗಿದ ಪ್ರತಾ, ಮುಖಮಂ ಚುಂಬಿಸುತ್ತಾ ಬರುವ, ಸಾಂಗ ಸುಂದರಿಯಾದ ತರುಣೀ ಮಣಿಯಂ ತಾನೂ ಬಿಗಿದಪ್ಪಿ, ಪುಳಕಿತನಾಗಿ, ಸುರನಗರಿಯೊಳಂ, ಈ ಪರಿಯ ಸುಂದರೀ ಮಣಿಯಂ ಕಾಣಲಿಲ್ಲವಲ್ಲಾ, ಇcತಿಹ ಸುಂದರಿಯ ವೃಥಾ, ತೊರದಾಂ ಪಾವಿಯಲ್ಲಿವೆ ಎಂದು ಯೋಚಿಸುತ್ತಾ, ಆಕೆಯೊಡಗೂಡಿ, ಸಕಲ ಭೋಗಂಗಳಂ ಹೊಂದುತ್ತಾ ರತಿ ಕೇಳೀ ವಿಲಾಸದೊಳು ಪರಸ ರವಾಗಿ ಮೈಮರ ದು, ಆ ರಾತ್ರಿಯಂ ಪರಮಾನಂದದೂಳು ಕಳೆದು, ಅರುಣೋದಯಾತ್ ರೂಮಾಗಿ ಯೇ ತನ್ನ ಮೋಹನಾಂಗಿಯಾದಾ ನಂದಿನಿಯಂ ಕುರಿತು ಪಾ ಇಕಂತೆಯೇ, ನಿನ್ನ ನಗಲಿದ ಮೊದಲೀವರೆಗಂ, ನಾಂ ತಾಳಿದ ಬಗೆಯನ್ನೆಲ್ಲ ಮc ನಿನ್ನೊಳುಸುರಲು, ಇದು ಸಮಯವಲ್ಲ, ಇನ್ನೊಂದು ದಿನ ದೊರೆತು, ಈ ಗಲಾ ಗಂಧರಾ೦ಗನೆ ಯರು ಬರುವಕಾಲವಾದುದು, ನಿನ್ನ ಬಿಟ್ಟು ಹೋಗಲಾರೆನೆಂದು ಮನಂ ಕಳವಳ ಪುದು, ಈಗನಾಂ ಅವರು ವಂಚಿಸಿದೊಡೆ, ಮರಳಿ ನಿನ್ನ ನೋಡದಂತೆ ಮಾಳ ರಾಗಿ ಹೋಗಿ ಬರಲನುಮತಿಯಂ ಈವುದೆ೦ದೊರೆಯುವ ಕಾಂತನಂ ಬಿಗಿದಪ್ಪಿ, ಪ್ರಾಣಪದಕವೇ ನಿನ್ನಿಚ್ಛಾನುಸಾರವಾಗಿರು, ಮರಳಿ ನಿನ್ನ ಮುಖೇ೦ದುವ೦ ನೋಡುವವರೆಗಂ ಆ ಕಳವಳವು ಬಿಡಲಾರನೆಂದೆರೆದು ಪಾದಗಳೊಳು ಮಣಿದು ಬೀಳೊಡಲಾ ನಾಗರಾಜಂ ಅಲ್ಲಿಂ ಪೊರಮಟ್ಟು ಹೊರಗೆ ತರುವನಿತರೊಳಾ ಗಂಧರ್ವ ಮಂದಯಾನೆಯರೈ ತಂದು ಈ ಸುಂದರಾಂಗನಂ ಹಿ೦ದಗೊಂಡು, ಅವರ ದಾನಂದದೊಳ್‌, ತಮ್ಮ ನಿವಾಸಕೈದಿದರು. ಇಂತೆಯೇ ಪ್ರತಿ ಶುಕ್ರವಾರ ಮಂಗಳವಾರಂಗಳಲ್ಲಿ ಗಂಧರಾಂಗನೆಯರ ನೊಡಗೊಂಡು ಬಂದು ಅವರವರ ಕಾರ್ ದೊಳು ಬಿಟ್ಟು ತಾಂ ತನ್ನ ಪ್ರಾಣಕಾಂತೆ ಯಾದ ನಂದಿನಿಯ ಅಂತಃಪುರನುಂ ಸಾರಿ ಅವಳೊಂದಿಗೆ ಸೇರಿ ಸಕಲ ಸುಖಂ ಗಳಂ ಹೊಂದುತ್ತಾ ಸುರತಸುಖದೊಳಾನಂದಿನಿಯಂ ಆನಂದಗೊಳಿಸುತ್ತಾ, ಹೀಗೆ ಯೇ, ಯಾರು ಮರಿಯದಂತೆ ಬಹುಕಾಲ ಕಳೆಯುತ್ತಾ ಬಂದನು, ಆಶಾಶಾ