ಪುಟ:ಬೃಹತ್ಕಥಾ ಮಂಜರಿ.djvu/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮಂಜರಿ , ೨೧೩ ನಂದಗೊಳಿಸುವನು ಎನಲು ವಿಕ್ರಮಾರ್ಕರಾಯಂ ಬಳಿಯೊಳಿದ ಪದಾವತೀ ಲೀಲಾವತಿಯರಂ ನೋಡಿ ಪಕ್ಕನೆ ನಕ್ಕವನಾಗೆ ಅವರಿರ ರೂ, ತಮ್ಮ ತಂಗಿಯು ಹೊಂದುತ್ತಿರುವ ಅವಮಾನದ ಪರಿಯಂ ನೋಡಿ ಅಸಮಾಧಾನ ಚಿತ್ತಾಗ, ಅವರ ಮುಖರಸದಿಂದ ಅವರ ಭಾವಮಂ ಕಂಡು ಭೇತಾಳನಂ ಸಂಜ್ಞೆಮಾಡೆ, ರಾಯನಾಚ್ಛಾನುಸಾರವಾಗಿಯೂ, ಭೇತಾಳಂ ಸೂಕ್ಷ ಮಾದೊಂದು, ಅಂಶು ಕವಂ ಕೊಡಲು ಅದಂ ಧರಿಸಿ ಮೇಲಿನ ಸೆರಗಿಗೆ ಸಾಲದ ಹೆದರೂ ಯೋ ಚಿಸದ, ವಿಕ್ರ ಮಾರ್ಕರಾಯನ ಮಂಚದ ಸವಿಾಪದೊಳು ಕುಳಿತು ಕೊಳ್ಳಲು, ಭೇತಾಳನು ಮೂರುಯಾಮದಿಂದ ನಡೆದು ಬರುತ್ತಿರುವ ಕಥೆಯನ್ಮ: ಹೇಳು ತಾ ಬಂದನು, ತನ್ನ ತನುಸಂಭವನೆಂದರಿಯದೆ ಶಿರಚೋದನೆಯಂ ಮಾಡುವದಕ್ಕೆ ಪುಷ್ಕರ ನು ಮೇಲಕ್ಕೆ ಎತ್ತಿದ ಕತ್ತಿಯು, ಕೈನಡ ನೆಲದೊಳು ಬಿದ್ದು ಹೋದುದು, ಅವನಿಗೇನೆ ಬಗೆಯಾಗಿ ಮನಸ್ಸಿಗೆ ವೃಥೆ ತೋರಿತು, ಇದರಿಂದ೦ತೆಯೇ ಸ್ತ್ರ ಬ್ಲತೆಯಂ ತಳಿ, ಅಂತೆಯೇ ಚೇತರಿಸಿಕೊಂಡು ಎಲೈ ಅರ್ಚಕ ಶಿರೋಮಣಿ ಯೇ ! ಇದೇ ನಿಂತಾದುದು, ಮುಂಚಿನ ರಾಜರ ಕಾಲದೊಳೆಂದಾದರಿಂತಾದು ದುದೋ ? ಅಲ್ಲಿ ದೊಡ್ಡ ಕಾರಣವ೦, ನೀನೇ ಹೇಳಬೇಕೆನಲು, ಸಾವಿರಾ? ಮುನ್ನಿನರಾಯರ ಕಾಲದೊಳು, ಈ ಪರಿಯೆಂದೂ ನಡೆಯಲಿಲ್ಲ, ಈ ಜಾಲ ಕನಿಗೂ ನಿಮಗೂ ಎನೋ ದೇಹಬಾಂದವ್ಯ ಮಿರಬೇಕು ಅದೇ ಹೀಗೆ ಆಗುವದ ಕ್ಕೆ ಕಾರಣವಾಗಿದೆ ಯೋಚಿಸಬೇಕನಲು ಆ ಪುಷ್ಕರಾಯಂ ನನಗೆ ಯಾರೂ, ಈ ಪ್ರಾಂತದೊಳಗಾಗಿ ದೇಹಬಾಂಧವರಿಲ್ಲ, ನಾನು ಹುಬ್ಬಿದವನೂ ಒಬ್ಬನೇ, ಇರುವವನೂ ಒಬ್ಬನೆ ಯೆನಲು ಬಳೆಯೊಳಿರ್ದ ಮಂತ್ರಿಯು ಸಾಮಾ ಮಹಾ ರಾಯರ ! ನವರಾತ್ರಿ ಬಂದದ್ದು ಮೊದಲು ಕಾಲಕ್ಕೆ ಭೋಜನಾದಿಗಳಿಲ್ಲದ ಯೂ, ಈ ದಿನವಿಾವರಿವಿಗೂ, ಆಹಾರವಿಲ್ಲದಿರುವದರಿಂದ ಇಂತಾದುದು. ಜಾಗ್ರತೆಯಾಗಿ ಬಲಿಯನ್ನ ವಿಳಸಿ ಮನೆಯಂ ಸಾರಿ ಭೋಜನಮಾಡಿ, ವಿಶ್ರಾಂತ ರಾಗಿರ೦ದೊರೆಯೆ, ರಾಯಂ ಪುನಃ ಖಡ್ಗವನ್ನೆ ಆ ಬಾಲಕನ ಕಂಠದಮೇಲೆ ಗುರಿಯಿಡಲು ಕೈ ಸೋತು ಅ ಕತ್ತಿಯು ಮರಳಿ ಭೂಗತವಾದುದು. ರಾಯಂ ಗೆ ಮೈಮರದುದು ಅಂತೆಯೇ ಚೇತರಿಸಿ ನಿಂತು ಯೋಚಿಸುತ್ತಿರುವಾಗ ಮಂ ತ್ರಿಯು ಸ್ವಾಮಿ ಮಹಾರಾಜನೇ : ಯಾರೋ ಕಟ್ಟು ಕಟ್ಟಿರಬಹುದು ಲೋ ಕದೊಳು ರಕ್ತವು ಸೋರದಂತೆಯೂ, ಕುರಿ ಕೋಣ ಮುಂತಾದವುಗಳಂ ಕಡಿ ರುವಾಗ, ಎಷ್ಟು ಸಲ ಆಯುಧಂಗಳಿಂ ಅದರ ಕುತ್ತಿಗೆಯಂ ಕತ್ತರಿಸಿದರೂ ತುಂಡಾಗದೆ,' ಹರಿಯದೆ ಅಯುಧದ ಬಾಯಿಯೇ ಮಂಡಾಗುವದು. ಆದ್ದರಿಂ ದ ಅಂತೆಯೇನಾದರೂ ಇರಬಹುದು ಎಂದು ಆ ತಂತ್ರಜ್ಞರಂ ಕರೆಯಿಸಿ ಕಟ್ಟು