ಪುಟ:ಬೃಹತ್ಕಥಾ ಮಂಜರಿ.djvu/೨೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೦ ಬೃ ಹ ತ ಥಾ ನ ೦ ರಿ . ಯ ಕುಮಾರನನ್ನೂ, ಸೇವಕನೊಂದಿಗೆ ಆ ನಾವೆಯಂ ಹತ್ತಿಸಿ, ಪ್ರಯಾಣವುಂ ಮಾಡಿಸಿ ಕಳುಹಿಸಿದನು, ಮರುದಿನದೊಳು ಹೊರಡುವ ಮತ್ತೊಂದು ನಾವೆಯಂ ತಾನೂ ತನ್ನ ಕಿರಿಯಮಗನೂ, ಅವನ ಸೇವಕನೂ ಹತ್ತಿ ಬ್ರಹ್ಮ ದೇಶಕ್ಕಾಗಿ, ಬರುತ್ತಿರ್ದರು, ಹೀಗೆ ಸಮುದ್ರ ಮಾರ್ಗವಾಗಿ ಹೊರಟ ನಾವೆಗಳೆರಡೂ ಬರುತ್ರಿ ರುವಕಾಲದಲ್ಲಿ ಅಮಿತವಾದ ಚಂಡಮಾರುತವುದಯಿಸಿ, ಅನೇಕ ಮುಖ ಮಾಗಿ ಸುಳಿಸುತ್ತುತಾ ಬೀಸಲಾರಂಭಿಸಲು, ಸಮುದ್ರ ಮಧ್ಯದೊಳು ನಡೆ ಯಿಸಲ್ಪಡುತ್ತಿರ್ದ ನಾವೆಗಳೆರಡೂ ಅನ್ಯ ದೇಶಗಳಿಂದ ಹೊರಟು ಪ್ರಯಾ ಣವಾಗಿ ಬರುತಿರ್ದ ನಾವೆಗಳೂ ಸಹಾ ತಮ್ಮ ಮಾರ್ಗವಂ ಬಿಟ್ಟವು. ಆ ಹಡುಗುಗಳಂ ನಡೆಸುವವರು ತಮ್ಮ ಸಕಲ ಶಕ್ತಿ ಸಾಹಸಂಗಳಂ ಎಕ್ಕೆ ಷ್ಟು ವ್ಯಯಮಾಡಿ ನೋಡಿದರೂ, ತನ್ನ ದಾರಿಯ೦ಸಾರದೆ, ಆ ಚಂಡ ಮಾರು ತದ ಮಾರ್ಗವನ್ನೇ ಆಶ್ರಯಿಸಿ ಹೊಡೆದುಕೊಂಡು ಹೋದವು. ಹೀಗೆ ಕಂಡಕಡೆಗೆ ಕೊಚ್ಚಿ ಕೊಂಡು ಹೋದ ಈ ಹಡಗುಗಳು ಒಂದೊಂದು ಬೇರೊಂದು ದಾರಿಯಂ ಹೊಂದಿ ಹೋಗುತ್ತಿರುವಾಗ ಅ ಹುಚು ಗಾಳಿಯು ಶಮನಮಾಗಿ ಒಂದೇ ವಿಧ ಮಾದ ಮೋಡದ ಗಾಳಿಯು ಬೀಸಲಾರಂಭಿಸಿ, ನಾವಿಕರು ತಮ್ಮ ತಮ್ಮ ನಾವೆ ಗಳಂ ಸ್ವಾಧೀನಪಡಿಸಿಕೊಂಡು ನಕ್ಷತ್ರಗಳ ಮತ್ತು ಕುರುಹ ಕಂಭಗಳ ಗುರು ತುಗಳಂ ವಿಡಿದು, ತಮ್ಮ ತಮ್ಮ ದೇಶಾಭಿಮುಖವಾಗಿ ನಡೆಸುತ್ತಾ ಬಂದರು ಈ ಸತ್ಯವಿಜಯನ ಪತ್ನಿ ತ್ರರು ಕುಳತಿರ್ದ ಹಡಗವು ಬಹುರೂರವಾಗಿ ಹೊ ಡೆದುಕೊಂಡು ಹೋಗಿದ್ದ ದ್ದರಿಂದ ಆ ಪ್ರಾಂತದೊಳು ಮೇಘಾವರಣವಾಗಿ ಗಾ ಢಾಂಧಕಾರಂ ಕವಿದಿರಲು, ರಾತ್ರಿಯೊಳು ಯಾವ ಕುರುಹುಮಂ ಕಾಣಲು ಅನು ಕೂಲವಿಲ್ಲದೆ ಒಂದೇ ದಾರಿಯಾಗಿ ನಡೆಸುತ್ತಾ ಬರೆ, ಅವರು ಬರಬೇಕಾಗಿದ್ಧ ಬ್ರಹ್ಮ ದೇಶದ ದಾರಿಯ ತಪ್ಪಿ ಹೋಗೆ ರಾತ್ರಿಯೊಳೆಲ್ಲಾ ಈ ರೀತಿಯಾಗಿ ನಡೆದು ಮರುದಿನದರುಣೋದಯ ಕಾಲಕ್ಕೆ ವಜಾ ವರ್ತವೆಂಬ ದಿ ಪದ ತಡಿಯಂ ಸಾರಲು ಬಹುಕಾಲದಿಂ ಯುಕ್ತಾಹಾರಂಗಳಿಲ್ಲದೆ ಬೇಸತ್ತಿದ್ದವರಾಗಿ ಆ ನಾವೆಯೊಳಿದ್ದವ ರೆಲ್ಲರೂ ಹೊರಗಿಳಿದು ತಡಿಯಂ ಸಾರಿ ವಿಶ್ರಾಂತರಾಗುತ್ತಾ ಭೋಜನ ಸ್ನಾನಾದಿ ಕಾರಂಗಳೊಳು ಸಂಭವರಾಗಿರುತ್ತಿರ್ದರು. ಹೀಗಿರುತ್ತಿದೆ ಅನ್ಯ ದೇಶಕ್ಕೆ ಯುದ್ಧ ಕಾರಕ್ಕಾಗಿ ಹೋಗಿದ್ದಾ ವಜ್ರಾವರ್ತ ದೀಪದ ಸೈನ್ಯವು ಜಯಮಂ ಕ೦ದಿ, ಪರಮ ಸಂಭ್ರಮದೊಂದಿಗೆ ಹತ್ತಿ ಬರುತ್ತಿದ್ದ ಹಡಗುಗಳು ಆ ಕಾಲದಲ್ಲಿಯೇ ಬಂ ದು ಅದೇದಡದಲ್ಲಿ ಯ ಇಳಿಯಲು ಅವುಗಳೊಳಗಿನ ಸೈನ್ಯದಲ್ಲ ೦ ಇಳಿದು ಪರ ಮೋತ್ಸಾಹದಳು ಹೊಳಲಿಗೆ ನಡೆದು ಹೋಗುತ್ತಿರುವ ಸಂಭ್ರಮವನೋಡಲು ನಿಂತಿದ್ದ ಆ ಸತ್ಯವಿಜಯನ ಹಿರೆಯ ಕುಮಾರನೂ ಅವನ ಸೇವಕನೂ ಆ ದಂಡಿ