ಪುಟ:ಬೃಹತ್ಕಥಾ ಮಂಜರಿ.djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ್ರ ಹತ್ಯ ಥಾ ನು ೦ 8 ರಿ . ೨೪೫ ಮದುವೆಯಾದವನಲ್ಲವು. ಈ ಊರಿಗೆ ಈದಿನದುದಯದೊಳೇ ಬಂದೆನು, ಅನ್ಯನಾದ ನನ್ನ೦ ಪತಿಯೆಂದು ಬಲಾತ್ಕರಿಸುವ ನಿನ್ನ ಅಕ್ಕನೊಳು ನಾನೆಂತು ಕೂಡಿ ಆಕೆಯಂ ಸುಖಗೊಳಿಸಲಿ. ಇದು ಮಹಾ ಪಾಪಕಾರ್ಯವ್ಯ, ಮತ್ತು ಲೋಕವಿರುದ್ಧವಾದ ಕೆಲಸವ, ನೀನಾದರೋ ಪತಿಯನ್ನು ಸೇರಬೇಕೆಂದು ಅಪೇಕ್ಷೆಯುಳ್ಳವಳಾಗಿರುವಿ. ನಾನು ಮದುವೆಯಿಲ್ಲದವನಾದ್ದರಿಂದ ನನ್ನ ಮದುವೆಯಾಗುವಂತೆ ಸಮ್ಮತಿಸು. ಈ ನಿಮಿಷದಲ್ಲಿ ಏನನ್ನೂ ಯೋಚಿಸದೆ ಪಾಣಿಗ್ರಗಣಮಂ ಮಾಡಿಕೊಳ್ಳುವೆನು. ಈ ಭಾಗದೊಳು ಸಂದೇಹವೇ ಇಲ್ಲ. ನಿನ್ನ ಮನದಣಿಯುವಂತೆ ನನ್ನ ೦ ಸೇರಿ ಸುಖಿಸು. ಆಕೆಯು ಪರಸ್ಮಿಯಾದ್ದರಿಂದ ನಾನಾಕೆಯಂ ಸ್ಮರಿಸಲಾರೆನು. ಆ ಸಮಾಚಾರವನ್ನು ಕೇಳಲು ಬೇಸರಿಕೆಯಾಗುವುದೆಂದು ಹೇಳುತ್ತಿರ್ದ ಮಾತುಗಳು ಕೇಳಿ ಅಯ್ಯೋ ನನ್ನ ಅಕ್ಕನೊಳೀತನಿಗಿದ ಶ್ವಾಸಮಂ ಯಾವ ದುಷ್ಟಾಂಗನೆಯೋ ಅಪಹರಿಸಿದಳು. ನಾನೆಷ್ಟು ವಿಧವಾಗಿ ಹೇಳಿದರೂ ಆತನ ಮನಸ್ಸೇ ಬೇರೆಯಾಗಿಹುದು ಎಂದು ಚಿಂತಿಸಿದವಳಾಗಿ ಪ್ರತ್ಯುತ್ತರವಂ ಹೇಳಲಾರದೆ ಸುಮ್ಮನಾದಳು. ಹೀಗಿರುವ ಸಮಯದೊಳು ಜೈ ಮದನಸುಂದರಂ ಅಕ್ಕಸಾಲೆಯವನ ಮನೆ ಯಲ್ಲಿ ಕುಳಿತಿದ್ದು ಬಹಳ ಹೊತ್ತಾಯಿತೆಂದರಿತು, ಆಯಾ ಸ್ವರ್ಣಕಾರನೇ ನಾನು ಇಲ್ಲಿಗೆ ಬಂದು ಬಹಳ ಹೊತ್ತಾಯಿತು, ಇಷ್ಟು ಹೊತ್ತು ಈ ಆಭರಣಕ್ಕಾಗಿ ಕಾದು ಕೊಂಡಿದ್ದರೂ ಪೂರೈಸಿಕೊಡಲಿಲ್ಲ. ಮನೆಗೆ ಹೋದರೆ ನನ್ನ ಹೆಂಡತಿಯು ಕಡಗಗಳಂ ತರಲಿಲ್ಲವೆಂದು ಅಸಮಾಧಾನಮಂ ತೋರುತ್ತಾರೆ. ಆದ್ದರಿಂದ ನೀನೂ ನನ್ನ ಜೊತೆ ಹೊಳೇ ಬಂದು ಸಮಾಧಾನನಂ ಹೇಳಿ ಬಂದನಂತರ ಮಧ್ಯಾಹ್ನದೊಳಗಾಗಿ ಆ ಆಭರಣಮಂ ತಂದು ಖಂಡಿತವಾಗಿ ಕೊಡಬೇಕೆಂದು ಹೇಳಲು ಸೀಲವಂತನೆಂಬ ಅಕ್ಕ ಸಾಲೆಯವನು ಸಾಮೂಾ ತಾವೇತಕಿ೦ತು ಅನುಮಾನಪಡುವಿರಿ ಆಭರಣದ ಕೆಲಸ ವೆಲ್ಲವೂ ಪೂರೆ ಸಿಹುದು ರ್ಬಹಾಕುವ ಕೆಲಸ ಮಾತ್ರ ನಿಂತಿರುವರು. ಇದು ಒಂದು ಘಂಟೆಯಕಾಲಗೋಳಗಾಗಿಯೇ ಪೂರೆಸಿ ಕೊಡುತ್ತೇನೆ ಎಂಗು ಹೇಳಲು, ಆ ಮದನ ಸುಂದರಂ ನೀನಿದೇ ಮಾತುಗಳನ್ನೇ ಆಕೆಯೊಳು ಹೇಳಬರುವಂತೆ ಮಾಡೆಂದು ಆತನನ್ನು ಜೊತೆಗೆಳು ಕೊಂಡು ತನ್ನ ಮನೆಯ ಬಾಗಿಲಿಗೆ ಬಂದು ಬಾಗಲಂ ತಟ್ಟಲು ಪ್ರತಿಶಬ್ಬಮೇ ಬಾರದಿರಲು, ಕೂಗಿ ಬಾಗಿಲಂ ತೆಗೆಯೆಂದು ತಟ್ಟುವದಕ್ಕೆ ಅರಂಭಿ ಸಲು, ಮನೆಯೊಳಗಿದ್ದ ಬ್ರಹ್ಮ ದೇಶದ ಕುಶಲತಂತ್ರ ನೋಡಿ ಈ ದಿನದೊಳು ಮಾತಾಡಲು ಸಮಯವಿಲ್ಲವು ನಾಳೆಯದಿನಂ ಬರಬಹುದೆಂದು ಪ್ರತ್ಯುತ್ತರಮಂ ಕೊಡಲು ಎಲಾ ಮೂರ್ಖನೇ ಬಾಗಿಲ ಬೇಗನೆ ತೆಗೆ ಹಾಸ್ಯವನ್ನಾಡಬೇಡ, ನಿನ್ನ ಪರಿಹಾಸ್ಯಕ್ಕೆ ಇದು ಸಮಯವಲ್ಲ. ಬೇಗೆನೆ ತೆಗೆಯನಲು ಯಾರಾದರೂ ಬರಲಿ ಎಂಥಾ ಅವಸರಮಾದ ಕಾರ್ಯವನ್ನು ಹೇಳಲಿ ಬಾಗಿಲಂ ತೆಗಿಯಬೇಡವೆಂದು ಯಜಮಾನಿಯವರು ಆಜ್ಞಾಪಿಸಿರುವರು. ಆದ್ದರಿಂದ ನಾ೦ ತೆಗಿಯಲಾರೆನು ಎಂದು