ಪುಟ:ಬೃಹತ್ಕಥಾ ಮಂಜರಿ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೬ ಬ ಹ ಥಾ ಮ೦ ಜ ರಿ . ಹೇಳಲು ಎಲಾ ಹಾಸ್ಯಗಾರನ ಕಾಲಾಕಾಲಂಗಳಂ ತಿಳಿಯದೆ ಹೀಗೆ ಮಾತಾಡಬೇಡ, ನನ್ನ ಕೋಪವಂ ವೃದ್ಧಿಗೊಳಿಸುವುದಕ್ಕೆ ಕಾರಣನಾಗುತ್ತೆ. ಇದೂಕೂಡಿ ಅನೇಕಾ ವೃತ್ತಿ ಈ ಭಾಗದೊಳು ಎಚ್ಚರಿಸಲ್ಪಟ್ಟಿರುವೆ, ಮುಂದೂ ಹೀಗೆಯೇ ಮಾತನಾಡಿ ದರೆ ದಂಡನೆಗೆ ಗುರಿಯಾಗುವಿ ಎಂದು ಗರ್ಧಿಸಿ ಮಾತನಾಡುತ್ತಾ ಬರಲು ಇವರಿ ರ್ವರ ಶಬ್ದ ಮಂ ಕೇಳುತ್ತಾ ಆನಂದವಲ್ಲಿಯು ಒಳಗಿನಿಂದಲೇ ಆದೇನು ಗದ್ದಲ ಮೆಂದು ಕೇಳಲು ಬಾಗಿಲೊಳಿದ್ದ ಬ್ರಹ್ಮ ದೇಶದ ಸೇವಕ ಅಮ್ಮಾ ಯಾರೋ ಫೋಕರಿ ಜನರು ಬಂದು ವಿಧವಿಧವಾಗಿ ಮಾತಾಡುತ್ತಾ ಗದ್ದಲ ಮಾಡುತ್ತಿರುವರು. ಯಾರೋ ಪೋಕರಿಗಳಾಗಿ ಕಾಣುತ್ತಾರೆಯೇ ವಿನಾ ದೊಡ್ಡವರಂತೆ ಕಾಣರು. ಈ ಊರೊಳಗೆ ಇರುವರ ರೀತಿಯಂ ಕಾಬವುದು ಬಹು ಪ್ರಯಾಸವೆಂದು ಸುಮ್ಮನಾ ಗಲು, ಯಾರಾದರೂ ಸಮಯವಲ್ಲವೆಂದು ಹೇಳು. ಬಾಗಿಲಂ ತೆಗೆಯಬೇಡವೆಂದು ಹೇಳಿ ಸುಮ್ಮನಾಗೆ ಮಣಿದ್ವೀಪದ ಮದನಸುಂದರಂ ಎಲೋ ಪಾಪಿಯಾದ ಸೇವಕನೇ ನಾನು ಮನೆ ಯಜಮಾನನೆಂದು ತಿಳಿಯದೆ ಹೆಂಗಸಿನ ಮಾತಿನಂತೆ ನೀನೂ ದುರಾ ರ್ಗದೊಳು ಪ್ರವರ್ತಿಸುನಿಯಾ. ಅವಳು ನಾನು ಮದುವೆಯಾದದ್ದು ಮೊದಲು ಈವ ರಿಗೂ ಇಂತಹ ಅವಳ ಸಹಜಗುಣವಂ ತೋರಿಸದೆ ಮಾಡಿ ವಿನಯಮಂ ನಟಿಸುತ್ತಿ ರ್ದಳು. ಇದೇ ಪ್ರಥ ರುತು ಕಾಣಬಂದುದು. ತನಗೆ ಬೇಕಾದ ಪುಂಡರಂ ಮನೆ ಯೋಳು ಸೇರಿಸಿಕೊಂಡು ಹೀಗೆ ಮನಸ್ಸಿಯಾಡುವಳು. ಒಿತು ಛೇ ಛೇ ಮೂಧನೆ ಬೇಗನೆ ಬಾಗಿಲಂ ತಿಗೆ ತಪ್ಪಿದರೆ ಅದರ ಫಲಮನ್ನಿಗಲೇ ಕಾಣುವೆ ಎಂದು ಘಟ್ಟ ಯಾಗಿ ಗದರುತ್ತಾ ಬರಲು ಸಮಾಜದೊಳಿರ್ದು ಶೀಲವಂತನೆಂಬ ಸ್ವರ್ಣಕಾರನ ನೆರೆಮನೆಯವಳಾದ ಆತನಿಗೆ ಪರಮ ಪ್ರೀತಿಪಾತ್ರಳಾಗಿದ್ದ ಮಂದಯಾನೆಯೆಂಬುವಳೂ ಆತನನ್ನು ಕುರಿತು ಎಲೈ ಮಿತ್ರನೇ ನೀನೇತಕಿ೦ತು ಕೋಪಾಕ್ರಾಂತನಾಗುತ್ತೋ ಇದು ಸಮಯವಲ್ಲ, ನೀನು ಕೋಪಗೊಳ್ಳುವದಕ್ಕೆ ನಿನ್ನ ಪತ್ನಿ ಯು ಅಂಥಾ ದುರ್ಗುಣ ವಂತಳೂ ಅಲ್ಲ. ಆಕೆಯನ್ನು ಬಹುಕಾಲವಾಗಿ ನೋಡುತ್ತಿರುವೆನು, ಇನಿತಾದರೂ ದೋಷಕರವಾದ ಗುಣವು ಕಾಣಬರುವದೇ ಇಲ್ಲ. ಆಕೆಯು ವೀರಪತಿವ್ರತೆಯು ನೀನೇನರಿಯ ? ಆಕೆಯಿಂತು ಮುನಿಸಿಕೊಂಡಿರುವದಕ್ಕೆ ಕಾರಣವೇನೋ ಇರಬ ಹುದು, ಅದಂ ವಿಚಾರಿಸುತ್ತಾ ಇಲ್ಲಿಯೇ ನಿಂತು ಗಲಮಾಡಿದರೆ ನೋಡಿದವರಿಗೆ ಹಾಸ್ಯಾಸ್ಪದವಾಗಿ ಕಾರ್ಯಕ್ಕೆ ಹಾನಿಯೂ, ನಿನ್ನ ಕೋಪದೇಳಿಗೆಗೆ ಕಾರಣವೂ ಹುಟ್ಟುವದು, ಇದಲ್ಲದೇ ಭೋಜನವಿಲ್ಲದೆ ಹಸಿವಿನಿಂದ ಆತುರನಾಗಿರುವ ನೀನು ಇಲ್ಲಿ ನಿಂತು ಯಾವದನ್ನೂ ಯೋಚಿಸಬಾರದು. ಆದ್ದರಿಂದ ದಯಮಾಡಿ ನನ್ನ ಮನೆಗೆ ಬಂದು ಭೋಜನವಂ ಮಾಡಿ, ವಿಶ್ರಾಂತನಾಗಿ ಅನಂತರ ಯಾವದ ನಾದರೂ ಯೋಚಿಸಬಹುದು ಎಂದು ವಿನಯಳಾಗಿ ವ್ಯಕ್ತಿಗಳಿಂದ ಸಮಾಧಾ ನಗೊಳಿಸಲು, ಬಳಿಯೊಳಿರ್ದ ಶೀಲವಂತನಂ ಕುರಿತಾ ಜೇಷ್ಠಮದನಸುಂದರಂ ಅಯಾ