ಪುಟ:ಬೃಹತ್ಕಥಾ ಮಂಜರಿ.djvu/೨೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮ ಹ ಫಾ ಮ೦ಜರಿ ಆ ಕಾಲಕ್ಕೆ ಸರಿಯಾಗಿ ಸ್ವರ್ಣಕಾರನಾದ ಶೀಲವಂತನು ಕೈ ಕಡಗಗಳಂ ಬಣ್ಣ ಹಚ್ಚಿ ತನ್ನ ಕೈಯಲ್ಲಿ ತೆಗೆದುಕೊಂಡು ಬರುತ್ತಿರ್ದವನು ದೂರದೊಳೀತನಂ ನೋಡಿ, ಹಾ! ಆ ಮದನಸುಂದರಂ ನನ್ನನ್ನೇ ಹುಡುಕಿಕೊಂಡು ಬರುವನೋ ಏನೋ ಎಂದು ಚಿಂತಿಸುತ್ತಾ ಸಮಾಪಕ್ಕೆ ಬಂದು ಸ್ವಾಮಿಾ ! ನಾನು ಬರುವದಕ್ಕೆ ಸಾವಕಾಶವಾದು ದೆಂದು ತಾವೇ ಬಂದವರಾದಿರಿ. ಈ ಬಿಸಿಳು ನಾಂ ತಮಗೆ ಕೊಟ್ಟಿಯಪರಾಧಮಂ ಮನ್ನಿಸಿರಿ, ಇದೋ ರತ್ನ ಕಂಕಣಂಗಳಂ ತಂದಿರುವೆನು, ಪರಿಗ್ರಹಿಸಬೇಕು, ಮೊದಲು ನಿಮ್ಮ ಕಾರಮಂ ನೆರವೇರಿಸಿಕೊಳ್ಳಿರೆಂದು ಕೈಗೆ ಕೊಡುವದಕ್ಕೆ ಬರಲು, ಆ ಕನಿಷ್ಠ ಮದನಸುಂದರನು, ಇದೇನು ಈ ಊರಿನ ನಡತೆ, ಇಂತು ಚಿತ್ರವಾಗಿಯದು, ಎಂದು ಯೋಚಿಸುತ್ತಿರಲಾ ಅಕ್ಕಸಾಲಿಗಂ ಸ್ವಾಹಾ ! ಕೆ.ಣಕ್ಕಾಗಿ ನಾನೀಗ ತಮ್ಮ೦ತೊಂದರೆ ಕೊಡುವೆನೆಂದು ಯೋಚಿಸಬಾರದು, ಸಾವಕಾಶ ಮಾಡಿದನೆಂತಲೂ ಚಿಂತಿಸಲಾಗದು, ಎಂದು ಬಲಾತ್ಕರಿಸಿಕೈಗೆ ಕೊಡಲು, ಇದೇನು ಈತಂ ಅಪರಿಚಿತನಾದ ನನ್ನ ಕೈಯೊಳಗಿ ಯಾಭರಣವನ್ನಿತ್ತು ಇಂತು ಪೇಳುವನು, ನೋಡಿದರೆ ಆಶ್ಚರವಾಗುವದೆಂದು ಯೋಚಿಸಿ, ಅಯ್ಯಾವರ್ತಕನೇ! ನೀನೀಯಾಭರಣಮಂ ನನ್ನ ಕೈಯ್ಯೋಳು ಬಲಾತ್ಕರಿಸಿಕೊಟ್ಟ ಮಾತ್ರ ದಿಂದಲೇ ನಾಂ ತೆಗದುಕೊಳ್ಳುವನಲ್ಲ, ಇದರಮ”ನಂ ನಿಶೆಸಿಗೆದುಕೊಂಡರೇನೇ ನಾನೀ ಯಾಭರಣಮಂ ತೆಗೆದುಕೊಳ್ಳುವೆನು, ಇಲ್ಲವಾದರೆ ಹಿಂದಕ್ಕೆ ತೆಗೆದುಕೊಳ್ಳು ವನಾಗೆಂದು ಖಂಡಿತವಾಗಿ ಹೇಳುವ ಮಾತುಗಳಂ ಕೇಳಿದಾ ಶೀಲವಂತಂ ನಾನೀತನ ಸಮಯಕ್ಕೆ ಕೊಡಲಿಲ್ಲವೆಂದು ಅಸಮಾಧಾನದಿಂದ ಹೀಗೆ ಹೇಳುತ್ತಾನೆಂದು ತಿಳಿದು, ಸ್ವಾಮಿಾ!ನಿಮ್ಮನ್ನು ಹಣವಂಈಗಲೇ ಕೊಡುವಂತೆ ನಾಂಬಲಾತ್ಕಾರವಂಮಾಡುವದಿಲ್ಲ, ನೀವುಕೊಡದವರೂಅಲ್ಲ, ಸಮಯಬಂದಾಗ ತೆಗೆದುಕೊಂಡು ಹೋಗುತ್ತೇನೆಂದು ಹೇಳಿ, ಯಾಭರಣಂಗಳಂ ಆತನಕೈಯ್ಯೋಳಿತ್ತು ತನ್ನ ಮನೆಯಂ ಕುರಿತು ಹೊರಟು ಹೋದನು. ಅತ್ತಲಾ ಮಣಿಪುರದ ಜೈಷ್ಟನಾದ ಮದನ ಸುಂದರನು, ತಾನು ಭೋಜನಾ ರ್ಥವಾಗಿ ಹೋಗಿದ್ದ ಮಂದಯಾನೆಯ ಪತಿಯಾದ ನೀತಿಮರುನ ಜೊತೆಯೊಳು ಸ್ನಾನಮಂಮಾಡಿ ಕುಳಿತು, ಭೋಜನವಂ ಮಾಡುವ ಕಾಲದೊಳು ಆತನ ಕಂಠದೊ ಳಿದ್ದ ದಿವ್ಯರತ್ನ ಹಾರಮಂನೋಡಿ ಭ್ರಾಂತನಾಗಿ ಆತನಂ ಕುರಿತು, ಅಯ್ಯಾ ಮಿತ್ರನೇ! ನಿನ್ನ ಕಂಠದೊಳು ರಾರಾಜಿಸುತ್ತಿರುವ ಕಾರಮಂ ನನಗೆ ಕೊಡುವೆಯಾ ಇದಕ್ಕೆ ಬದ ಲಾಗಿ ನಾಂ ಮಾಡಿಸಿರುವ ಘನತರವಾದ ರತ್ನ ಕಂಕಣಗಳ ಜೊತೆಯಂ ಕೊಡುವ ನಂದೊರೆಯಲು, ಆ ನೀತಿಮರುತ್ತನು, ಸ್ವಾರಾ ಪರಮಾಪ್ತರೇ ! ಇದು ನನ್ನ ಪ್ರಾಣ ಕಾಂತೆಯ ಪ್ರೀತಿಪಾತ್ರವಾದಾಭರಣವು. ತಾವು ಕೇಳಿದಮೇಲೆ ಕೊಡಲೇಬೇಕು, ಇದು ನನ್ನ ಅಭಿಪ್ರಾಯವು ನನ್ನ ಅಂಗನೆಯು, ಏನಂ ಹೇಳುವ ಕೇಳಿ, ಅನಂತರ ಕೊಡುವೆನೆಂದು ಮದನ ಸುಂದರನ ಭಾವವಂ ಆಕೆಯೊಳು ತಿಳುಹಲು, ಆ ಮಂದ ಯಾನೆಯು ಡೋಲಮಾನಸಳಾಗಿ ಯೋಚಿಸುತ್ತಿರಲದಂ ಕಂಡಾ ಮನದಸುಂದರಂ