ಪುಟ:ಬೃಹತ್ಕಥಾ ಮಂಜರಿ.djvu/೨೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(೩೨) ಬ ಹ ತ ಥಾ ನ ೦ ಜರಿ, ೨೪೯ ಇದಕ್ಕೆ ಬದಲಾಗಿ ಮತ್ತೊಂದು ದಿವ್ಯಾಭರಣಮಂ ಈಗಲೇ ತಂದು ಕೊಡುವೆನು. ನಿನಗಿಷ್ಯವಿದ್ದಷ್ಟು ದಿನಗಳು ಧರಿಸಿಕೊಂಡಿರ್ದ ನಂತರ ನನಗೆ ಕೊಡು, ಆಗೊ ನಿನ್ನಿ ಹಾರಮಂ ನಿನಗೆ ಕೊಡುವೆನು, ಎಂದು ಒಡಂಬಡಿಸಿ, ಆತನಿಂದಾ ಹಾರಮಂ ಕೊಂಡು ಹತ್ತು ನಿಮಿಷಗಳೊಳಗಾಗಿಯೇ ರತ್ನ ಕಂಕಣಂಗಳಂ ಅಕ್ಕಸಾಲೆಯವನ ಮನೆಯಿಂದ ತಂದುಕೊಡುವಂತೆ ಹೇಳಿ, ಭೋಜನಾನಂತರ ಮನೆಯಿಂದ ಹೊರಟ ಆ ಶೀಲವಂತ ನೆಂಬ ಸ್ವರ್ಣಕಾರನಂ ಹುಡುಕಿಕೊಂಡಾತನ ಮನೆಗಾಗಿ ಹೋಗುತ್ತಿದ್ದನು. ಇತ್ಯಲಾ ಬ್ರಹ್ಮ ದೇಶದ ಮದನಸುಂದರಂ ಹಡಗವನ್ನು ಗೊತ್ತು ಮಾಡಿಕೊಂಡು ಬರುವಂತೆ ತನ್ನ ಸೇವಕನಂ ಕಳುಹಿ ಬರುತ್ತಿರಲು, ಒಬ್ಬ ವ್ಯಾಪಾರಿಯು ಮಣಿದ್ವೀ ಪದ ಮದನಸುಂದರನಿಗೋಸ್ಕರ ತಾಂ ತರಿಸಿದ್ದ ದಿವ್ಯವಾದ ಖಡ್ಗಮಂ ತನ್ನ ಕೈಯ್ಯೋಳಾಂತು ಬರುತ್ತಾ ದಾರಿಯಲ್ಲಿ ಈತನಂ ಕಂಡು, ಇದೇನು ನಾಂ ಹುಡುಕಿ ಕೊಂಡು ಹೋಗುತ್ತಿರ್ದವರು ಈ ಮಾರ್ಗವಾಗಿಯೇ ಬರುತ್ತಿರುವರೆಂದು ತಿಳಿದು, ಈ ಮದನಸುಂದರನ ಬಳಿ ತಂದು ಸ್ನಾನಾ ಸೇನಾಧಿಪತಿಗಳಿರಾ ! ತಮ್ಮಲ್ಲಿ ನಾನು ಮೊದಲು ವಿಜ್ಞಾಪಿಸಿರ್ದ ಆಯುಧವು ಈಗ ತಾನೇ ಒಂದು ಹಡಗಿನೊಳು ಬಂದುದು ತಮಗೆ ಹೇಳಿದ್ದು ಬಹುಕಾಲವಾಯಿತು. ಸಾವಕಾಶವಾದದ್ದಕ್ಕಾಗಿ ಚಿತ್ರಕ್ಕೆ ಆಯಾ ಸಪಡಕೆಲಸವಿಲ್ಲ. ಆದರೆ ಈ ಆಯುಧದ ಗುಣಂಗಳು ಅತ್ಯಂತ ಶ್ಲಾಘನೀಯ್ಯಂಗ Yಾದವುಗಳು. ಅದರ ಬಾಯಿಯ ಹದವು ಪ್ರತಿಖಡ್ಗದಿಂದ ಕತ್ತರಿಸಿದರೂ ನಾಶವಾಗ ಲಾರದು, ಸುತ್ತಿ ಸುತ್ತಿ ನಡುವಿನೊಳು ಸಿಲುಕಿಸಿಕೊಳ್ಳಬಹುದು, ತೂಕದೊಳು ಬಹ ಭವಾಗಿ ಲಘುವಳ್ಳದ್ದು, ತಮಗೆ ವಿನಾ ಮತ್ತಾರಿಗೂ ಧರಿಸಿಕೊಳ್ಳಲು ಅರ್ಹವಾದ ಇವು ಎಂದು ಹೇಳಿ, ಆತನಕೈಗೆ ಕೊಟ್ಟು, ಸ್ಯಾಮಾ ! ಇದರೊಂದಿಗೆ ಬಂದ ಪದಾರ್ಥಗಳನ್ನು ಇನ್ನೂ ತೆಗೆದು ಒಳಗಿಡಲಿಲ್ಲ, ಹಡಗಿನಿಂದ ಬಂದವುಗಳೆಲ್ಲಾ ಹೊರಗೆ ಭಂಡಿಗಳೊಳು ಹಾಗೆಯೇ ಇಹುದು ಸಾವಕಾಶವಾಗಿ ಬಂದು ಇದರಗೆಲೆಯಂ ಆರಿಕೆಮಾಡುತ್ತೇನೆಂದು ಹೇಳಿ ಅವಸರವಾಗಿ ಹೊರಟುಹೋದನು. ಆಖಡ್ಗ ಮಂ ಕೊಂಡಾ ಮದನಸುಂದರಂ ಇದೇನೋ ಈ ದೇಶದ ರೀತಿಯು ಪರಮಾದ್ಭುತ ಮಾಗಿರುವದು, ಎಂದು ಆಶ್ಚರ್ಯಪಡುತ್ತಾ ಹಾಗೆಯೇ ಮುಂದರಿದು ಬರುತ್ತಿರಲು ಮತ್ತೋರ್ವ ಪರಿಗಂ ಬಂದು ಸ್ಮಾಮಾ ಅಜ್ಞೆಯಾದಂತೆ ಭಂಗಾರದ ನಾಣ್ಯವು ದೊರೆಯಲಿಲ್ಲ. ಎನೂರು ಮಾತ್ರ ದೊರತುದು. ಮಕ್ಕಾದ್ದು ಸಾಯಂಕಾಲಕ್ಕೆ ತಂದು ಕೊಡುವೆನು ಚಿತ್ರಕ್ಕೆ ಆಯಾಸ ಕಲಸಬಾರದು. ಇದರ ಕ್ರಯದ ಹಣವನ್ನು ತಮ್ಮ ಮಿತ್ರರಾದ ಕಾಲವಯ್ಯನವರು ನಿನ್ನೆಯದಿನವೇ ತಂದು ಕೊಟ್ಟಿ ಹರು ಅಂಗಡಿ ಯೊಳು ವ್ಯಾಪಾರಕ್ಕಾಗಿ ಅನೇಕಗೊಡ್ಡ ಮನುಷ್ಯರು ಬಂದು ಕಾದುಕೊಂಡಿರುವರು ಸಾವಕಾಶವಾಗಿ ಬಂದು ಮಾತಾಡುತ್ತೇನೆ ಅಪ್ಪಣೆಯಾದರೆಹೊರಡುವೆನೆಂದಾವರ್ತಕಂ ಹೊರಟು ಹೋದನು, ಆತನಿಂದ ಕೊಡಲ್ಪಟ್ಟ ಭಂಗಾರದನಾಣ್ಯದ ಚೀಲವಂ