ಪುಟ:ಬೃಹತ್ಕಥಾ ಮಂಜರಿ.djvu/೨೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೦ ಬೃ ಹ ತ ಥಾ ಮ೦ ಜರಿ. ಒಂದು ಕೈಯೊಳು ಹಿಡಿದುಕೊಂಡು ಬರುತ್ತಾ ಹೀಗೆಂದು ಯೋಚಿಸುವನು. ನಾನೀ ಪಟ್ಟಣಕ್ಕೆ ಹೊಸಬನಾಗಿ ಬಂದಿದ್ದೇನೆ, ಬಹುಕಾಲಮಾಗಿ ಈ ಊರೊಳಿದ್ದು ಪರಿಚ ಯಸ್ಥನಾದವನಂತೆ ಯೆಲ್ಲರೂಮಾತಾಡಿಸುವರು, ಮತ್ತು ಕೆಲವರು, ಬಹು ಘನವನ್ನು ಹೊಂದಿದವನಂತೆ ಮರಾದಿಸುವರು, ಇನ್ನೂ ಕೆಲವರು, ನನ್ನ ತಾಬೇದಾರರಂತೆನಿಂತು ಮರಾದೆಯಂ ಮಾಡುತ್ತಿರುವರು. ತಮ್ಮ ಸಮಾಜಬಾಂಧವನೆಂದು ಕೆಲವರು, ಪರಮಾ ಪ್ರರಾದವರಂತೆ ಹಲವರೂ ನಿಂತು ಮಾತಾಡಿಸುತ್ತಿರುವರು. ಕೆಲವರೈ ತಂದು ನಾ ನೇನೋ ದೊಡ್ಡ ಸೈನ್ಯಾಧಿಪತಿಯೆಂದು, ತಮ್ಮ ಕಷ್ಟಂಗಳಂ ಹೇಳಿಕೊಂಡು ತಮ್ಮ ಜೀವನಂಗಳಂ ಹೆಚ್ಚಿಸಿಕೊಡಬೇಕೆಂದು ಪ್ರಾರ್ಥಿಸುತ್ತಾರೆ. ನಾನೇ ಹೇಳಿದ್ದೇನೆಂದು ಸೈನ್ಯಾಧಿಪತಿಯ ಉದ್ಯೋಗದ ಕವಚಮಂ ಹೊಲದು ತಂದು ಒರೂಂ ತೊಡಿಸಿ ಹೋದನು. ಮತ್ತೊಬ್ಬನು ಚಿನ್ನ ದನಾಣ್ಯಮಂತಂದುಬಲಾತ್ಕರಿಸಿ ಕೊಟ್ಟು ಹೋದನು. ಮತ್ತೊಬ್ಬನು ಕತ್ತಿಯಂ ತಂದಿತ್ತನು. ಈ ಜನರಾರೂ ಇದರ ಬೆಲೆಯನ್ನೆ ಕೇಳಿ ದವರಾಗಲಿಲ್ಲ. ಇದೇ ನೀದೇಶದ ಮಾದೆಯೋ ಅಲ್ಲದೆ, ನಾನೇನೋ ಅಧಿಕಾರಿ ಯಾದವನೆಂದು ಭಾವಿಸಿ, ಇಂತುಪಚರಿಸುವರೋ, ಇದು ಯಾವದೂ ಅಲ್ಲದೆ ಸ್ವಪ್ನಾವಸ್ಥೆಯೋ, ಯಾವದೂ ಗೊತ್ತಾಗದು. ಇದೂ ಅಲ್ಲದೆ ಇಬ್ಬರು ಹೆಂಗಸರು ಬಂದು ಅವರೊಳೋರ್ವಳು ತನ್ನ ಗಂಡನೆಂತ ಮತ್ತೋರ್ವಳು ಭಾವನೆಂತಲೂ, ಹಿಡಿದುಕೊಂಡು ಹೋಗಿ ಬಲಾತ್ಕಾರದಿಂದ ಮನೆಯಂ ಹೊಗಿಸಿ ಭೋಜನಾದಿಗಳಂ ಮಾಡಿಸಿದರು, ಅಲ್ಲದೆ ಗಂಡನೆಂದು ಭಾವಿಸಿದ್ದವಳು ತನ್ನನ್ನು ಬೆರತು ರತಿಸುಖಮಂ ತಾಳುವಂತೆ ಬಲಾತ್ಕರಿಸಿದಳು. ಮತ್ತಿಬ್ಬರು ಸುಂದರಿಯರೆತಂದು ತಮ್ಮ ಪರಮಾ ಪ್ರನಂತೆ ಔತನಕ್ಕೆ ಬಲಾತ್ಕರಿಸಿದರು. ಇವರುಗಳು ಪ್ರತ್ಯಕ್ಷವಾಗಿಯೇ ನೋಡು ತಿರವೆನಲ್ಲದೆ ಭ್ರಾಂತಿಯಿಲ್ಲವು, ಇವುಗಳನ್ನೆಲ್ಲಮಂ ನೋಡಿದರೆ ಈ ಊರೊಳಿರು ವದೇ ಪ್ರಯಾಸವಾಗಿ ತೋರುವದು, ಕಳುಹಿಸಿದ ಸೇವಕನು ಇಷ್ಟು ಹೊತ್ತಾದರೂ ಹಡಗವು ಹೊರಡುವದು ಗೊತ್ತು ಮಾಡಿಕೊಂಡು ಬರಲಿಲ್ಲ ಎಂದು ಯೋಚಿಸುತ್ತಾ ಅಲ್ಲಲ್ಲಿ ಆ ಸೇವಕನನ್ನು ಹುಡುಕುತ್ತಾ ಬರುತ್ತಿದ್ದನು. ಅತ್ತಲಾ ಮಣಿಪುರದ ಜೈಷ್ಣವದನ ಸುಂದರಂ ಭೋಜನವಂ ಮಾಡಿ, ಆ ಮನೆಯ ಯಜಮಾನನೊಂದಿಗೆ ಹಸ್ತಕಂಕಣಗಳಂ ತಂದುಕೊಡುವಂತೆ ಹೇಳಿ ಹೊರ ಟವನು, ಶೀಲವಂತನೆಂಬ ಸ್ವರ್ಣಕಾರನ ಮನಗಾಗಿ ಮತ್ತೊಂದು ಮಾರ್ಗದೊಳು ಹೊರಟುಹೋದನು. ಶೀಲವಂತನೆಂಬ ಅಕ್ಕಸಾಲಿಗರವನು ಕೊಡಬೇಕಾಗಿದ್ದ ಸಾಲ ಕಾಗಿ ಕೇಳಲು ಬಂದವನು, ಅಯ್ಯಾ ಶೀಲವಂತನೇ ! ನೀನು ಕೊಡಬೇಕಾದ್ದ ಹಣವು ಸಮಯಕ್ಕೆ ಉಪಯೋಗಿಸುವದೆಂದು ನಿನ್ನ ಮೇಲೆಯೇ ಬಿಟ್ಟಿದ್ದೆನಷ್ಟೆ ಈಗ ನನಗೆ ಸಂಭವಿಸಿರುವ ಸಮಯಮೆಂಥಾದ್ದನ್ನು ವಿಯೋ ? ನಮ್ಮ ಮನೆಯವರೆಲ್ಲರೂ ಪ್ರಸ್ತಕ್ಕಾಗಿ ನೀಲವತೀಪಟ್ಟಣಕ್ಕೆ ಹೊರಟುಹೋದರು, ಈ ಊರೊಳು ಕೆಲವಾಭರ