ಪುಟ:ಬೃಹತ್ಕಥಾ ಮಂಜರಿ.djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ್ರ ಹತ್ಯ ಥಾ ನ ೦ ರಿ . ೨೫೧ ಣಗಳು ಬೇಕಾಗಿ, ನಾನೂ ನನ್ನ ಮಗನೂ ನಿಂತವು. ಈ ದಿನದೊಳು ಕಾರಣಾಂ ತರದಿಂದ ನನ್ನ ಮಗನಿಗೆ ರಾಜಸ್ಥಾನದಲ್ಲಿ ನಾಲ್ಕುನೂರು ವರಹಂಗಳಂ ಅಪರಾಧ ಮಾಗಿ ಕೊಡುವಂತೆ ದಂಡನೆಯಂ ವಿಧಿಸಿದ್ದಾರೆ. ಅದಕ್ಕೆ ನಾಲ್ಕು ಗಳಿಗೆ ಅವಧಿ ಯನ್ನೂ ಕೊಟ್ಟಿರುವರು, ಈ ಕಾಲದೊಳಗಾಗಿಯೇ ಅಪರಾಧ ದ್ರವ್ಯಮಂ ಕೊಡ ದಿದ್ದರೆ ಚಂಡಶಾಸನವಾದ ರಾಯಂ ಮತ್ತೇನೆಂದಾಜ್ಞಾಪಿಸುವನೋ ಎಂದು ಭಯ ಗೊಂಡಿರುವೆನಾಗಿ ನೀಂ ಕೊಡಬೇಕಾದ ದ್ರವ್ಯವನ್ನಿಕೃಣವೇ ಕೊಟ್ಟರೆ ಬಹು ಪ್ರಯೋಜನವಾಗಿರುವದು ಎಂದೊರೆಯಲು, ಆ ಸ್ವರ್ಣಕಾರಕಂ ಅಯ್ಯಾ ವರ್ತ ಕರೇ ನಿಮ್ಮ ಹಣಕ್ಕಾಗಿ ಒಬ್ಬ ದೊಡ್ಡ ಮನುಷ್ಯರಲ್ಲಿಆಭರಣಮಂ ಮಾಡಿಕೊಟ್ಟು ಅದರ ಮಲ್ಯಮಂ ಅವರಮೇಲೆಯೇ ಬಿಟ್ಟಿರುವೆನು, ಈದಿನ ಅವರು ಹಣಮಂ ತೆಗೆದು ಕೊಂಡುಹೋಗುವಂತೆ ಬಲಾತ್ಕರಿಸಿದರು. ನಿನಗಾಗಿಯೇ ಬಿಟ್ಟು ಬಂದೆನು. ನನ್ನ ಜೊತೆಯೋಲೇ ಬಂದರೇ ಹಾಗೆಯೇ ಕೊಡಿಸುವೆನು, ತೆಗೆದುಕೊಂಡು ಹೋಗುವರಾಗಿ ಎಂದು ಆ ವ್ಯಾಪಾರಿಯನ್ನೊ ಡಕೊಂಡು ಹೊರಟು ಬರುತ್ತಾ ದಾರಿಯೊಳು ಆ ಜೈಷ್ಠ ಮದನಸುಂದರನನ್ನು ನೋಡಿ ಬಳಿಗೆ ತಂದು ಸ್ವಾಮಿ ಪೂಜ್ಯರೇ ! ನಾನು ಮಾಡಿ ಕೊಟ್ಟ ಹಸ್ತಕಂಕಣಂಗಳಂ ತಮ್ಮ ಕೈಗೆ ಕೊಟ್ಟಾಗಲೇ ಅದರ ಮೌಲ್ಯಮಂ ತೆಗೆದು ಕೊಳ್ಳುವಂತೆ ತಾವು ಬಲಾತ್ಕರಿಸಿದಿರಿ. ಈ ದೊಡ್ಡ ಮನುಷ್ಯರಿಗೆ ಕೊಡುವದಕ್ಕಾ ಗಿಯೇ ತಮ್ಮಲ್ಲಿಯೇ ಇರಲಿ ಎಂದು ಹೇಳಿದ್ದೆನು. ಈಗಲೇನೋ ಈ ದೊಡ್ಡ ಮನು ಷ್ಯರಿಗೆ ಬಹು ಅವಶ್ಯವಾಗಿರುವುದೆಂದು ಬಂದಿರುವರು. ಆ ಮಲ್ಯಮಂ ಕೂಡ ಬೇಕೆಂದು ತಮ್ಮ ಕೇಳುವದಕ್ಕಾಗಿ ತಮ್ಮನ್ನೇ ಹುಡುಕುತ್ತಾ ಬಂದೆನೆನಲುಆಮದನ ಸುಂದರಂ ಎಲೈ ಶೀಲವಂತನೇ ! ಸ್ವಲ್ಪಕಾಲದ ಒಳಗಾಗಿಯೇ ಆಭರಣಮಂ ತರು ವಂತೆ ಹೋದವನು ಇಷ್ಟು ಹೊತ್ತಾದರೂ ಬಾರದೆ ಹೋಗಲು ನಿನ್ನನ್ನೇ ನಾನೂ ಹುಡುಕುತ್ತಾ ಬಂದೆನು ಸಮಯಕ್ಕೆ ತಂದುಕೊಡುತ್ತಿ ಎಂದು ನಂಬಿದ್ದೆನು. ಹೀಗೆ ಮಾಡುವದು ಯುಕ್ತವಲ್ಲ, ಒಳ್ಳೆಯದು ಈಗಲಾದರೂ ಕೊಡು ದೊಡ್ಡ ಮನುಷ್ಯ ರಿಗೆ ಮಾತುಕೊಟ್ಟು ಬಂದಿರುವೆನು. ಅವರಲ್ಲಿ ನನ್ನ ಮಾತು ಸುಳ್ಳಾಗದಂತೆ ಮಾಡುವೆನು ಎನಲು ಏನೆ ದೊಡ್ಡ ಮನುಷ್ಯರೆ, ಇದಕ್ಕೆ ಸ್ವಲ್ಪಕಾಲ ಮುಂಚಿತ ಮಾಗಿಯೇ ತಮ್ಮೊಡವೆಯಂ ತಮಗೆ ತಂದುಕೊಟ್ಟೆನು. ಆಗಲೇ ಹಣವಂ ತೆಗೆದು ಕೊಂಡು ಹೋಗುವಂತೆ ತಾವು ಬಲಾತ್ಕರಿಸಲಿಲ್ಲವೆ ? ಈಗಬೇಡಿ, ಮತ್ತೊಂದು ವೇಳೆ ಸಮಯ ವಿದ್ದಾಗ ತೆಗೆದುಕೊಂಡು ಹೋಗುವದಾಗಿ ನಾನು ಹೊರಟುಹೋಗ ಲಿಲ್ಲವೆ? ಇದೇನು ಹೀಗೆನುಡಿಯುವಿರಿ ಹಾಸ್ಯ ಮಾಡಲು ಇದು ಸಮಯವಲ್ಲ ಈ ದೊಡ್ಡ ಮನುಷ್ಯರಿಗೆ ಹಣವು ಬಹಳ ಅವಶ್ಯಕವಾಗಿರುವದು, ಜಾಗ್ರತೆಯಾಗಿ ಕೊಟ್ಟು ಕಳುಹಿಸಬೇಕೆನಲು, ಆ ಜೈಷ್ಠ ಮದನ ಸುಂದರನು ಎನ್ನೆ ದೊಡ್ಡ ಮನುಷ್ಯನೇ ! ಆ ಆಭರಣವಂ ಮಾಡಬೇಕಾದದ್ದು ಇನ್ನೂ ಸ್ವಲ್ಪ ಸಾವಕಾಶ, ತಾವಭೋಜನವಂ