ಪುಟ:ಬೃಹತ್ಕಥಾ ಮಂಜರಿ.djvu/೨೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೪ - ಬ ಹ ತ್ ಥಾ ಮ೦ ಜರಿ , ಯಲು ಎಲೆ ಕಿಂಕರ ! ನಿನ್ನ ರೀತಿಯು ಎಂದಿಗೂ ಒಂದೇಯಾಯ್ತು. ಪ್ರಯಾಣ ಕಾಗಿ ಹಡಗವಂ ಗೊತ್ತು ಮಾಡಿಕೊಂಡು ಬರುವಂತೆ ಹೇಳಿ ಕಳುಹಿದೆನಲ್ಲಾ, ಅದನ್ನೇ ಮರತೆಯೋ, ನೀನೀ ಊರೊಳೇ ಇರಬೇಕೆಂದು ಯೋಚಿಸಿ ಹೀಗೆನಾಡು ವಿಯೋ ನಿನ್ನ ಮನೋಗತವೇನು ? ನಾನಾದರೋ ಮಹದಿಹನಕವಾದೀ ಪಟ್ಟಣದೊಳು ಒಂದು ನಿಮಿಷವಾದರೂ ಇರಬಾರದೆಂದು ನಿಶ್ಚಯಗೊಂಡಿಹೆನು, ಈ ಪುರದ ನಾರಿಯರಾದರೋ ಘೋರತರವಾದ ಪಿಶಾಚಕೃತ್ಯ ಮುಳ್ಳವರು, ಪ್ರರುಷ ರಾದರೋ ಹೇಳಲು ಬಾರದ ಚರಿತರು ಎಂದೆನಲು, ಸ್ನಾಮಾ ನೀವು ನನ್ನ ಕೈಗೆ ಬೀಗದಕೈಗಳಂ ಕೊಟ್ಟ ಹಣಮಂ ತರುವಂತೆ ಹೇಳುವಕಾಲದಲ್ಲಿ ಆ ನಾವೆಯು ಹೊರಡುವ ಸಮಾಚಾರಮಂ ತನ್ನೊಳು ವಿಜ್ಞಾಪನೆಯಂ ಮಾಡಿದ್ದೆನು. ತಾವಾ ಗಲೇ ಪ್ರಯಾಣಸನ್ನದ್ಧರಾಗಿದ್ದರೆ ಇಷ್ಟು ಹೊತ್ತಿಗೆ ರೇವಿನಬಳಿಯ೦ ಸೇರುತ್ತಿ ದೈವ, ತಾವು ನೇಮಿಸಿದ ಕೆಲಸವನ್ನೇ ಮರೆತು ನನ್ನನ್ನೆ ಹಾಸ್ಯಗಾರನೆಂದು ಎಗತಾಳಿಯಂ ಮಾಡುತ್ತೀರಿ ಎಂದೀರ್ವರೂ ಮಾತನಾಡುತ್ತಾ ಆ ಮಂದಯಾ ನೆಯ ಮನೆಯಮಾರ್ಗದೊಳು ಬರುತ್ತಿರೆ, ತನ್ನ ಕೈಯಿಂ ರತ್ನ ಹಾರಮಂ ಕೊಂಡೊ ಯವಂ ಬದಲಾಗಿ ಆಭರಣಮಂ ತಂದುಕೊಡಲಿಲ್ಲವೆಂದು ಜೈಷ್ಟಮದನಸುಂದರನಂ ನಿರೀಕ್ಷಿಸುತ್ತಾ ಹೊತ್ತಾದರೂ ಬರಲಿಲ್ಲವೆಂದು ಕಾರಣಮಂ ಯೋಚಿಸುತ್ತಾ ತಲ ಬಾಗಿಲೊಳು ನಿಂತಿರ್ದಾಕೆಯ ಗಂಡನಾದ ನೀತಿ ಮರುತನೆಂಬುವ ಸರಿಹಾಸಕರವಾಗಿ ವಾತಾಡಿಕೊಂಡು ತನ್ನ ಮನೆಯ ಮುಂಗಡೆಯಲ್ಲಿ ಹೋಗುತ್ತಿರುವ ಈಶ್ವರಂಕಂಡು ಇದೇಂ ನಾನೀಯತೆ ನಿಂತಿದ್ದರೂ ಈ ದೊಡ್ಡ ಮನುಷ್ಯನು ಮಾತಾಡದೆ ಹೋಗು ತ್ತಾನೆ. ಕೈಗೆ ಕೊಟ್ಟ ಒಡವೆಯನ್ನು ತೆಗೆದುಕೊಂಡವಂ ಬದಲು ಒಡವೆಯಂ ತಂದು ಕೊಡಲಿಲ್ಲ ಕಾರಣವೇನೋ ತಿಳಿಯುವೆನೆಂದು, ಎಲೈ ಮಿತ್ರನೇ ! ಮಾತಾಡದೇ ಹೋಗುವಿ ಏನೆ ಎಂದು ಕೂಗುತ್ತಾ ಸಮೀಪಕ್ಕೆ ಬರಲು ಆ ಕನಿಷ್ಟ ಕುಶಲತಂತ್ರಂ ತನ್ನ ಯಜಮಾನನನ್ನು ಕುರಿತು, ಸ್ವಾಮಿರಾ ! ಇತ್ತ ನೋಳ್ಳುದು ನಾವೇನೋ ಈತನೊಳು ಪದಾರ್ಥಮಂ ಕೊಂಡು ಅದರ ಕೊಡದೆ ಮೋಸಗೊಳಿಸಿದವರಂತೆ ಅಂಗಚೇಷ್ಟೆಯಂ ತೋರುತ್ತಾ ಈ ಮನೆಯಿಂದ ಬರುತ್ತಿರುವಂ, ಇದೇನೋ ಪ್ರಮಾದಂ ಬಂದಂತೆ ತೋರುತ್ತಿರುವದು ಎಂದು ಮಾತಾಡಿಕೊಳ್ಳುತ್ತಿರುವರಂ ನೋಡಿ ಎಲೈ ನಿಮ್ಮ ಪರಸ್ಕೃರ ಹಾಕ್ಕೊಕ್ಕಿಗಳು ಸಾಕು, ನಾ ನಿಂತಿದ್ದರೂ ನೀವು ನೋಡಿ ನೋಡದವರಂತೆ ಹೋಗಬಹುದೆ? ಆಭರಣಮಂ ತೆಗದುಕೊಂಡು ಬದಲಾಗಿ ಮತ್ತೊ೦ ದಂಕೊಡುವಂತೆ ಹೇಳಿ ಹೋದವರು ಇವರಿಗೂ ಬಾರದೆ ಎದುರುನೋಡುತ್ತಿದ್ದ ನನ್ನೊಳು ಮಾತಾಡದೆ ಹೋಗುತ್ತೀರಲ್ಲಾ ನನ್ನ ಕಂತೆಯ ಆಭರಣದ ವಿಷಯ ದಲ್ಲಿ ಅಸಮಾಧಾನಳಾಗಿದ್ದಾಳೆ, ಬೇಗನೆ ಬದಲು ಒಡವೆಯಂ ಕೊಡಿರಿ ಎಂದು ಮಾತಾಡುತ್ತಾ ಬರಲು, ಆ ಮದನಸುಂದರಂ ಆತನಾಡುತ್ತಿರುವ ಮಾತುಗಳಂಕೇಳಿ