ಪುಟ:ಬೃಹತ್ಕಥಾ ಮಂಜರಿ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೩) ಬ ಹ ತ ಥಾ ನ ೦ 8 ರಿ . ೨೫೬ ತಂದೂ, ತನ್ನ ಕೈಯಲ್ಲಿದ್ದ ನೂಲಿನ ಹಗಮಂ ಆತನಗೆ ಕೊಡಲು ಈ ಮೂರ್ಖನೇ ! ಹಣದ ಚೀಲವಂ ತರುವಂತೆ ಕಳುಹಿದರೆ ಈ ಹಗ ವಂ ತಂದೆಯಾ ಇದೇಶಕ್ಕೆ ತಂದೆ ಕಾಲವನ್ನರಿಯದೆ ಹಾಸ್ಯಮಂ ತೋರುವಿಯಾ ಹಣದ ಚೀಲಮೆಲ್ಲಿ ಕೊಡು, ಎನಲು ಆ ಸೇವಕಂ ಸ್ವಾಹಾ ! ಹಾಗಂದರೆ ಏನು ನನಗೆ ಹಣಮಂ ತರುವಂತೆ ಹೇಳಿದಿರಾ ಹವಂ ಮಾತ್ರ ತರುವದಾಗಿ ಹೇಳಿ ಒಂದು ವರಹವಂ ಕೊಟ್ಟು ಕಳುಹಿದಿರಿ ಎನಲು, ಛೇ ದುಷ್ಟನೇ ! ನನ್ನನ್ನು ಈ ನಿರ್ಬಂಧದೊಳು ಸಿಕ್ಕಿಸಬೇಕೆಂದು ಇಂತು ಮಾಡುತ್ತೀಯೋ ಎಂದು ಕಂಗಳಂ ಕೆಂಪಗೆಮಾಡಿಕೊಂಡು ಛೇ ವಾಸಿಯೇ ನನ್ನೆದುರಿಗೆ ನಿಲ್ಲಬೇಡ, ಹೋಗು, ಮನಯಂ ಸೇರಿದಮೇಲೆ ನಿನಗೆ ತಕ್ಕ ಶಿಕ್ಷೆಯಂ ಮಾಡಿಸುವನು ಎಂದು ತನ್ನ ಕೈಯಲ್ಲಿದ್ದ ಹಗ್ಯದಿಂದ ಹೊಡೆಯುವದಕ್ಕೆ ಕೈಯೆತ್ತಲು, ಸಾಮಾ, ತಾವು ಪಾಲಕರು, ಹೊಡೆಯಲೂ ಬಹುದು ನಾನು ಪೆಟ್ಟು ಗಳಂ ತಿನ್ನಲೂ ಬಹುದೆಂದು ಹೇಳುತ್ತಿರಲು, ಅವನಂ ನೋಡಿ ಕಟಕಟನೆ ಹಲ್ಲುಗಳಂ ಕಡಿಯುತ್ತಿರುವ ಸಮಯಕ್ಕೆ ತನ್ನ ಗಂಡನಂ ಹುಡುಕಿಕೊಂಡು ಬರುತ್ತಿದ್ದ ಆನಂದವಲ್ಲಿಯು ನೋಡಿ ತನ್ನ ತಂಗಿಯೊಳು ಎಲ” ತಂಗಿಯೇ ! ಇದೋ ನೋಡು ನನ್ನ ಕಾಂತನು ತನ್ನ ಕೃತ್ಯನೊಳು ಕಾದಾಡುವ ರೀತಿಯಂ. ಈತನನ್ನು ನೋಡಿದರೆ ಹುಚ್ಚನಂತೆಯೇ ಕಾಣುತ್ತಾನೆ, ಅಯ್ಯೋ ನನ್ನ ದೆಸೆಯ ಕಡೆಗೆ ಹೀಗಾದುದೇ, ಮುಂದೆಂತಿಹುದೋ ಕಾಣಲಾಗದು ಎಂದು ಹೇಳುತ್ತಾ ತನ್ನ ವಿದ್ಯ: ಮಾನವಂ ಕಂಡು ಶೋಕಿಸುತ್ತಿರುವ ಅಕ್ಕ ನಂ ಕುರಿತಾ, ಬಿಂಬಾಧರೆಯು ಅಮ್ಮಾ ನೀನೇತಕಿ೦ತು ಚಿಂತಿಸುವೆ ? ಉಪಾಯವಾಗಿ ಭಾವನಂ ಮನೆಗೆ ಕರೆದುಕೊಂಡು ಹೋಗಿ ಮಂತ್ರಜ್ಞರಿಂದ ತಕ್ಕ ಚಿಕಿತ್ಸೆಯಂ ಮಾಡಿಸೋಣ ಗುಣವಾಗುವದು ಎಂದು ಹೇಳುತ್ತಾ ಸಮಾಪಕ್ಕೆ ಬಂದಳು, ಆ ಮದನಸುಂದರಂ ತನ್ನ ಕಾಂತೆಯನ್ನೂ ಅವಳ ತಂಗಿಯ ಜೊತೆ ಯೊಳಿರುವ ತನ್ನ ಸ್ನೇಹಿತರನ್ನೂ ನೋಡಿ ಈ ಪಾಪಿಯಾದವಳು ತಾನು ಮಾಡಿದ ತಪ್ಪಿಗೆ ಮನ್ನಣೆಯಂ ಕೇಳಿಕೊಳ್ಳುವದಕ್ಕೆ ಬಂದಳೆಂದು ಯೋಚಿಸಿ ಅವಳ ಕಡೆಗೆ ತಿರುಗಿನೋಡದೆ ಹಿಂತಿರುಗಿದವನಾಗಿ ನಿಂತುಕೊಂಡಿರಲು ಆತನ ಬಳಿಗೆ ತಂದು ನಿಂತು ಕೊಂಡು ಆನಂದವಲ್ಲಿಯೂ ಎಳ್ಳೆ ಕಾಂತನೇ ! ನಾನೇಪರಾಧಮಂ ಮಾಡಿದೆ ನೆಂದು ನನ್ನೊಳಿಂತು ಕೋಪಾಕ್ರಾಂತನಾಗಿರು, ಮನೆಗೆ ಬಂದು ಭೋಜನಮಂ ಮಾಡುತ್ತಿರಲು ನಾನೆಷ್ಟು ಬಗೆಯಾಗಿ ಪ್ರಾರ್ಥಿಸಿದರೂ ಮಾತಾಡದೆ ಯಾರು ಮರಿಯದಂತೆ ಸೇವಕನೊಡಗೊಂಡು ಹೊರಟುಬರುವಂಥಾ ಅಪರಾಧವಂ ಮಾಡಿ ದೇನು ತಪ್ಪಿತವನ್ನು ನನ್ನ ಮಗುವಿಗೆ ಹಾಕಿ ತಕ್ಕ ಶಿಕ್ಷೆಯಂ ಮಾಡಬಾರದಾ ಗಿತ್ಸೆ. ಕಾರಣವಿಲ್ಲದೆ ಕೋಪಾಕ್ರಾಂತರಾಗಿ ನನ್ನ ನಿ೦ತು ನಿರಾಕರಿಸಬಹುದೆ, ಎಂದು ವಿನಯಳಾಗಿ ಪ್ರಾರ್ಥಿಸುವ ತನ್ನ ಕಂತೆಯ ಮುಖಮಂ ನೋಡದೆ