ಪುಟ:ಬೃಹತ್ಕಥಾ ಮಂಜರಿ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮ ಬೃ ಹ ತ ಥಾ ನ ೦ ರಿ. ಸೇವಕನ ಕಡೆಗೆ ತಿರುಗಿ ಎಲೈ ಕಿಂಕರನೇ ! ನಾವೀದಿನದೊಳು ನಮ್ಮ ಮನೆಯ ಬಳಿ ನಿಂತು ಮಾತಾಡಿದ ಕಾರ್ಯವೇನು ಅದಕ್ಕೇ ದುಷ್ಟಳಾದ ಭ್ರಷ್ಟಾಂಗನೆಯು ಮಾಡಿದ ಕೃತ್ಯ೦ಗಳೇನು ಅದನೆಲ್ಲಮಂ ವಿಸ್ತಾರವಾಗಿ ಹೇಳೆಂದು ಆಜ್ಞಾಪಿಸಲಾ ಸೇವಕಂ ಸ್ವಾಮಿ, ನಾವೀರ್ವರೂ, ಸರ್ಣಕಾರಕನೂ, ಮಂದಯಾನೆಯ ನಾಲ್ವರೂ ಸೇರಿ ನಮ್ಮ ಮನೆಯ ಬಳಿಗೈದಿ, ಬಾಗಿಲು ತೆಗೆಯುವಂತೆ ಕೂಗಿ ದೆವು. ಬಾಗಿಲು ಹಾಕಿತ್ತು. ಅನಂತರ ಮಾರುಬಾಗಿಲು ತೆಗೆಯುವದಿಲ್ಲವೆಂದು ಹೇಳಿದರು. ಯಜಮಾನಿಯರು ಚಿಕ್ಕ ಮನೆಯಿಂದ ಇಂದಿನ ಸಮಯವಿಲ್ಲ ನಾಳೆಯ ದಿನಂ ಬರಬಹುದೆಂದು ಕೂಗಿ ಹೇಳಿದರು. ನಾವೆಷ್ಟು ಬಗೆಯಾಗಿ ಮಾತಾಡಿಸಿದರೂ ಕಡೆಗೆ ಮಾತೇ ಆಡದೆ ಹೋದರು ಎನಲು, ಎಲೈ ದುಷ್ಟ ಈ ಕಡೆಗೆ ಈ ಸಾಲ ಗಾರನಾದ ಅಕ್ಕಸಾಲಿಗನ ನಿರ್ಬಂಧದೊಳು ನನ್ನ ಸಿಲುಕಿಸಬೇಕೆಂದು ಯೋಚಿಸಿ ದ್ದೆಯಾ, ಹಣಮಂ ಕೊಟ್ಟು ಕಳುಹಿಸುವಂತೆ ನಾನೀ ಸೇವಕನಂ ಕಳುಹಿಸಿದ್ದರೆ ಕೊಟ್ಟು ಕಳುಹಿಸದೆ ಈ ಜನರ ಗುಂಪು ಸೇರಿಸಿಕೊಂಡು ಬಂದು ನನ್ನ ಮಾನನಂ ಕಳೆಯುವದಕ್ಕೆ ಬಂದೆಯ ಎನಲು ಆ ಮದನಸುಂದರನು ತನ್ನ ಸೇವಕನಂನೋಡಿ ನಿನ೦ ಹಣ ತರುವಂತೆ ನಾಂ ಕಳುಹಿಸಿರಲಿಲ್ಲವೆ ಎನಲು ಸ್ವಾಮಿಾ ! ನನ್ನನ್ನು ಈ ಹಗಮಂ ತರುವಂತೆ ಕಳುಹಿಸಿದ್ದರೇ ಹೊರತು ಮತ್ತಾವ ಕಾರ್ಯಕ್ಕೂ ನನ್ನ ಕಳುಹಿಸಲಿಲ್ಲ. ಇದು ಮೊದಲೇ ತಮ್ಮೊಂದಿಗೆ ಅರಿಕೆಮಾಡಿದೆನಲ್ಲ, ತನ್ನ ಬಳಿಯೊಳಿರ್ದ ರಾಜಸೇವಕನಂ ಕುರಿತು ನಾನಿವನೊಂದಿಗೆ ಹೇಳಿಕಳಹಿದರೂ ಇಲ್ಲ ವೆಂಗು ಬೊಂಕುವನಲ್ಲ ಇವನು ಎಂದಿಗೂ ಇಂಥಾ ಸುಳ್ಳಂ ಹೇಳುವನೇ ಎಂದು ಕೋಪಗೊಂಡು ಹೊಡೆಯಲುದ್ಯಕನಾಗೆ ಆ ಆನಂದವಲ್ಲಿಯು, ತನ್ನ ತಂಗಿಯೊ ಡನೆ ಈ ಸೇವಕಂ ಕೆಲವ್ರಕಾಲಕ್ಕೆ ಮುಂಚಿತವಾಗಿ ಮನೆಗೆಬಂದು ಹಣದ ಚೀಲವಂ ನನ್ನಿಂದ ತೆಗೆದುಕೊಂಡು ಹೋದನು. ಅದನ್ನೇನು ಮಾಡಿದನೋ ಈಗ ತಾಂ ತರ ಲೆಯಿಲ್ಲವ, ಆ ಕೆಲಸಕ್ಕೇನೇ ತನ್ನ ೦ ಕಳುಹಲಿಲ್ಲವೆಂದು ಹೇಳುತ್ತಾನೆ. ಇವನೂ ಭ್ರಾಂತನಾಗಿರುವಂತೆ ಕಾಣಬರುತ್ತದೆ. ಈಗ ಮಾಡಬೇಕಾದ ಕಾರ್ಯವೇನೂ ತೋರದು. ಆದರೆ ಉಪಾಯವಾಗಿ ಈತನಂ ನಿರ್ಬಂಧದಿಂದ ಕರೆದುಕೊಂಡು ಹೋಗಿ ಮನೆಯಂ ಸೇರಿಸಿ ಚಿಕ್ಕಮನೆಯೊಳು ಕೂಡಿ ಬಾಗಿಲು ಭದ್ರಗೊಳಿಸಿದ ಮೇಲೆ, ಈ ಊರೊಳು ಪ್ರಸಿದ್ಧನಾಗಿರುವ ಮೂರ್ತಿವಂತನೆಂಬ ಮಂತ್ರನಂ ಕರೆಯಿಸಿರುವರಷ್ಟೆ, ಆತನಿಂ ಚಿಕಿತ್ಸೆಯಂ ಮಾಡಿಸೋಣವೆನಲಾ ಬಿಂಬಾಧರೆಯು, ಆಕ್ಕಾ ! ಆ ಮಂತ್ರಮೂರ್ತಿ ಇಲ್ಲೇ ಬಂದಿರುವನೆನಲು, ಆತನಂ ಕುರಿತು ಅಯ್ಯಾ ನೀವು ದೊಡ್ಡ ಮನಸ್ಸು ಮಾಡಿ ಬುದ್ದಿ: ವಿಕಲನಾಗಿರುವೇ ನನ್ನ ಪತಿಯಂ ಮುನ್ನಿ ನಂತೆ ಮಾಡಿದವರಾದರೆ ತಮ್ಮ ಪ್ರಯಾಸವು ಎಫಲವಾಗಲಾರದೆನಲಾ ಮಂತ್ರ ಜ್ಞನು ನೀವು ಯೋಚಿಸಬೇಡಿ, ನನಗಿದೇನೂ ದೊಡ್ಡ ಕಾರ್ಯವಲ್ಲ, ಇಂಥಾ