ಪುಟ:ಬೃಹತ್ಕಥಾ ಮಂಜರಿ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ಬೃ ಹ ತ ಥಾ ನ ೦ 8 ರಿ . ದವಲ್ಲಿಯು, ಎಲೈ ವರ್ತಕಶ್ರೇಷ್ಠರೇ ಆತನಿಗೆ ಬದಲಾಗಿ ನಾನಿರುವೆನು, ಈ ದುರ ವಸ್ಥೆಯಲ್ಲಿರುವಾತನಂ ನಿರ್ಬಂಧಿಸುವಿರಾ ಕೊಡಬೇಕಾಗಿದ್ದ ಹಣಮಂ ನಾನೇ ಕೊಡುವೆನು ನನ್ನ ಜೊತೆಯಲ್ಲೇ ಬರುವರಾಗಿ ನಾನು ಮಂತ್ರಗಾರನಾದ ಮೂರ್ತಿ ವಂತನಂ ಕರೆತರುವದಕ್ಕಾಗಿ ಹೋಗುವೆನೆಂದು ಹೇಳಿ ಹೊರಟುಹೋಗಲು, ಅಂತೆ ಯೇ ಆಗಲಿ ನೀವ್ರ ಮನೆಗೆ ಸೇರುವ ಕಾಲಕ್ಕೆ ನಾವೂ ಬರುವೆವೆಂದು ಹೇಳಿ, ಮುಂ ದಾಗಿಹೊರಟು ಬರುತ್ತಿರುವಲ್ಲಿ ಓರ್ವಳಿಂದ ಭೋಜನಕ್ಕಾಗಿ ಬಲಾವಾರಮಂ ಹೊಂದಿ ದವನಾಗಿ ಆಕೆಯೊಂದಿಗೆ ಕಲಹಮಂ ಮಾಡಿ, ಬೇಸತ್ತು ಒರುರ್ದ ಬ್ರಹ್ಮದೇ ಶದ ಮದನಸುಂದರಂ ತನ್ನ ಸೇವಕನೊಡಗೊಂಡು ಬರುತ್ತಿರಲು, ಆತನ ಕೈಗಳು ತಾನು ಮಾಡಿಕೊಟ್ಟಿರ್ದ ರತ್ನ ಕಂಕಣಂಗಳಂ ಕಂಡು, ಸಮಾಜಕ್ಕೆ ಬಂದು ಏನ್ನೆ ದೊಡ್ಡ ಮನುಷ್ಯರೇ ನಾನು ಹಣಮಂ ಕೇಳಿದರೆ ಒಡವೆಯಂ ತಂದುಕೊಡು, ಆವ ರಿಗೂ ಹಣವಂ ಕೊಡುವದಿಲ್ಲವೆಂದು ಮನಸ್ಸಿಗೆ ಬಂದಂತೆ ವ್ಯಾಜ್ಯ ಮಾಡಿದಿರಿ, ನಾಂ ಮಾಡಿಕೊಟ್ಟಿರ್ದ ಒಡವೆಯಂ ಕೈಗಿಳಿಟ್ಟು ಕೊಂಡು ಬಂದಿರುವಿರಿ ಇಂಥಾ ದೊಡ್ಡ ಮನುಷ್ಯರೆಂತಲೂ ಸುಳ್ಳು ಹೇಳಿ ಬಾಯಿ ಬಡಿಯುವಿರೆಂದೂ ನನಗೆ ತಿಳಿಯದೆ ಹೋಯಿತು, ಎಂದು ಕೇಳಲು ಆ ಮಾತುಗಳಿಗೆ ಕೊಪಾಕ್ರಾಂತನಾಗಿ ಏನ್ನ ದೊಡ್ಡ ಮನುಷ್ಯನೇ ನಿನ್ನ ನೋಡಿದಾಗ ಮೊದಲೇ ಇದರ ಬೆಲೆಯಂ ತೆಗೆದು ಕೊಂಡು ಹೋಗುವಂತೆ ನಾಂ ಹೇಳಲಿಲ್ಲವೆ ? ಅದು ವಿನಾ ಮ ,ಂದಾವೃತ್ತಿ ನಿನ್ನ ನೋಡಿದ್ದೇನೆಯೇ ? ಆಗ ಆಭ ರಣಮಂ ತೆಗೆದುಕೊಂರ್ಡ ನಲ್ಲವೆಂದು ನಿನ್ನೊಡನೆ ಹೇಳಿದ್ದೇನೆಯೇ ? ಇದೊಂದೂ ಅಲ್ಲದೆ ನಿಷ್ಕಾರಣವಾಗಿ ನನ್ನ ಅಲ್ಪ ಮನುಷ್ಯನಂ ಮಾತಾಡಿಸುವಂತೆ ನುಡಿಯುತ್ತೀಯೆ ? ನಾನು ದೊಡ್ಡವನುಷ್ಯನೆಂದು ನಿನಗೆ ಕಾಣುವುದಿಲ್ಲವೋ ? ನೀನಲ್ಲನಾದ್ದರಿಂದ ನಿನ್ನ ಅಲ್ಪಬುದ್ದಿ ಯಂ ತೋರು ತೀಯ್ಕೆ ಎನಲು, ತನ್ನ ಜೊತೆಯೊಳಿರ್ದ ತನ್ನ ಸಾಲಗಾರನಾದ ವರ್ತಕನಂ ಕುರಿತು, ಏನೋ ದೊಡ್ಡ ಮನುಷ್ಯನೇ ನೀನೇ ನನ್ನ ಜೊತೆಯೊಳಿದ್ದು ಈ ಮಹಾ ತ್ಮರಾದವರು ಮೊದಲು ನಿರಾಕರಿಸಿರ್ದ ಭಾಗವನೆಲ್ಲಮಂ ಕೇಳಿರುವಿಯಷ್ಟೆ ? ನಾನೇ ಹೀನಮನುಜನೆಂದೂ, ತಾವು ಪ್ರನಃ ನನ್ನ ನೋಡಲೇ ಇಲ್ಲವೆಂದೂ ಹೇಳುತ್ತಾ ರಲ್ಲಾ, ನೀವಾದರೂ ಕಂಡಂ ಹೇಳಿರೆನ್ನ ಲು, ಅಯ್ಯಾ ಮದನಸುಂದರರೇ ಈತ ನಾಡುವ ಮಾತುಗಳೆಲ್ಲವೂ ನಿಜ. ತಾವು ಈಗ ಮಾತ್ರ ಈ ಕೈ ಕಡಗಗಳಂ ಧರಿಸಿ ಕೊಂಡಿರುವಿರಿ ಎನಲು ಛಿ ಛೀ ಮೂರ್ಖರೇ ಈ ಪ್ರವಾಸಿಗಳೆಲ್ಲರೂ ನಿಮ್ಮಂತೆಯೇ ದುಷ್ಟರು. ಮನುಷ್ಯರ ರೀತಿಯಂ ಕಾಣದೆ, ಅವಮಾನ ಮೂಡಿಸುವದಕ್ಕಾಗಿ ಬಂದಿ ರುವಿರೋ, ನಿಮ್ಮಾರ್ವರಂ ಈಗಲೇ ತರಿದು ಬಿಸಾಡುವೆನೆಂದು ತನ್ನ ಕೈಯೊಳಿರ್ದ ಕತ್ತಿಯಂ ಒರೆಯೊಳಗಿನಿಂದ ಕಿತ್ತು ಝಳಿಪಿಸುತ್ತಲೆತ್ತಿಕೊಂಡು ಬರಲು, ನೋಡು ತಲಾ ಇರ್ವರುಂ ಪಲಾಯನಂಗೆಯ್ಯುತ್ತಿರುವ ಸಮಯಕ್ಕೆ ಸರಿಯಾಗಿ ಮಂತ್ರ