ಪುಟ:ಬೃಹತ್ಕಥಾ ಮಂಜರಿ.djvu/೨೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೬ ಬೃ ಹ ತ ಥಾ ಮ೦ ಜರಿ, ರೆಯತ್ತಿರುವನಿತರೊಳಾ ಜೋಷ್ಟಮದನಸುಂದರಂ ಇವರ ಸಮಾಪವನ್ಮದಿ ತಂದೆ ತಾಯಳಂ ವಂದಿಸಿ ಮುಕುಳಿತಕರಕಂಜನಾಗಿ ತಂದೆಯೇ ಅರಿಯದೆ ನೀನಾರೋ ಎಂದು ತಿರಸ್ಕರಿಸಿದ ನನ್ನ ಅಪರಾಧವಂ ಕ್ಷಮಿಸಬೇಕು ಬಹು ಬಾಲ್ಯದೊಳೇ ತಮ್ಮ ನಗಲಿ ದೇಶಾಂತರಗತನಾದೆನು. ಎಲ್‌ಜನನೀ ನೀನೀಪುರದೊಳಿದ್ದರೂ ಅಜ್ಞಾನದಿಂದ ತಿಳಿಯದೆ ವಿಚಾರಹೀನನಾಗಿದ್ದ ನನ್ನ ಅಪರಾಧಮಂ ಮನ್ನಿಸಬೇಕೆಂದು ಪ್ರಾರ್ಥಿಸು ತಿರೆ, ಆ ಸೇವಕರೂ ಅಣ್ಣ ತಮ್ಮಂದಿರೂ ಸತಿಪತಿಗಳೂ ಪರಸ್ಪರಾಲಿಂಗನ ಸರಸಪೂರ ಕಕಥಾಪ್ರಸಂಗ ಲೋಲರಾಗಿರುವದಂ ಕಾಣುತ್ತಾ ರತ್ನಾಂಗದ ಮಹಾರಾಯಂ ನಿಲ್ಲು ವದಕ್ಕೆಡೆಯಿಲ್ಲದೆ ಉಕ್ಕುತ್ತಿರುವ ಹರ್ಷವುಳ್ಳವನಾಗಿ ಆ ಸತ್ಯವಿಜಯನಂ ಸಮಾ ಸಕ್ಕೆ ಕರೆದು ನಿಲ್ಲಿಸಿಕೊಂಡು, ಎಲೈ ಮಹನೀಯ್ಯನೇ ! ನೀನು ನೋಡಬೇಕಾದವರ ಎಲ್ಲರಂ ನೋಡಿದೆ. ಅವರೊಂದಿಗೂ ಸೇರಿದವನಾದ ನಿನ್ನ ನೀವರೆಗಂ ಭಾಗ್ಯಹೀನನೆಂ ದರಿತಿದ್ದೆನು. ನಿನ್ನಂಥಾ ಪ್ರಣ್ಯಶಾಲಿಯು ಸೃಷ್ಟಿಯೊಳೆಲ್ಲಿಯೂ ಇಲ್ಲವು, ಮುಂದೂ ಜನಿಸುವದಿಲ್ಲ ಎಂದು ಪ್ರೊತ್ಸಾಹಗೊಳಿಸಿ ಆ ಮದನಸುಂದರರಿರೈರನೊಂದೆಡೆಯೊಳು ಸೇವಕರನೊಂದೆಡೆಯೊಳಂ ನಿಲ್ಲಿಸಿ ಬ್ರಹ್ಮದೇಶದ ಮದನಸುಂದರನಂ ಕುರಿತು ಎಲೆ, ಈ ವೃದ್ದ ಸತ್ಯವಿಜಯನಂ ನೋಡಿ ನೀಂ ನನ್ನ ತಂದೆಯೇ ಇಲ್ಲವೆಂದು ನಿರಾಕರಿಸ ಬಹುದೆ ? ಎನಲಾ ಮದನಸುಂದರಂ ನಾನಾ ಮಾತನ್ನೇ ಆಡಲಿಲ್ಲವೆನಲು, ಆ ರತ್ನಾ ಗದಮಹಾರಾಯಂ ತಾನೂ ಭಾಂತನಾದೆನೆಂದು ನಸುನಗುತ್ತಾ ಆ ಇರ್ವರನ್ನೂ ಅವರ ಸೇವಕರನಿರ್ವರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ದೂರದೂಂದೊಳು ನಿಲ್ಲಿಸಿ ಆ ಆನಂದವಲ್ಲಿಯಂ ಸಮಾಪಕ್ಕೆ ಕರೆತರುವಂತೆ ತನ್ನ ದೂತಂಗಾಜ್ಞಾಪಿಸಿದನು. ಆ ರಾಜದೂತಂ ಬಂದು ಅಮ್ಮಾ, ಆನಂದವಲ್ಲಿಯೇ! ಮಹಾರಾಯರು ತಮ್ಮ ಸಮಾಪಕ್ಕೆ ಕರೆತರುವಂತೆ ಆಜ್ಞಾಪಿಸಿದ್ದಾರೆನೆ, ಹಾ ವಿಧಿಯೇ! ಇದೇನು ನನಗೆ ಇಬ್ಬರು ಗಂಡಂದರಾದರಲ್ಲೂ ನಾನು ಮದುವೆಯಾದದ್ದು ಒರ್ವನನ್ನೇ, ಈಗ ನೋಡಿದರೆ ಇಬ್ಬರಾಗಿ ಕಾಣುತ್ತಿರುವರೇ ಇದೆಂ ಸೈಮೋ ಅಲ್ಲದಿರ್ದೊಡೆ ನಾನೂ ಭ್ರಾಂಶ ಳಾಗಿ ಆವರಂತ ಮನೋವಿಕಾರಳಾದೆನೋ ತೋರದಲ್ಲಾ! ಎನುತ ಚಿಂತಾಪರವಶಳಾಗಿ ನಿಂತಿರ್ದವಳ ಕಿವಿಗಳಲ್ಲಿಯೇ ಆ ಮಾತು ಬೀಳದೆ ಸುಮ್ಮನೆ ನಿಂತಿರಲು, ಮರಳಿ ರಾಜದೂತನು ಅಮ್ಮನವರೇ ಏತಕಿಂತು ನಿಂತಿರುವಿರಿ? ಮಹಾರಾಜರು ತಮ್ಮ ಸಮಿ ಪಕ್ಕೆ ಬಂದು ನಿಲ್ಲುವಂತೆ ಆಜ್ಞಾಪಿಸಿರುವರೆಂದು ಹೇಳಲು, ಅದಂ ಕೇಳುತ್ತಾ ಭರದಿಂ * ರಾಯನೆಡೆಗೈದಿ ಮುಕುಳಿತ ಕರಕಮಲಳಾಗಿ ನಿಂತು ಸ್ವಾಮಿ ಮಹಾರಾಯರೇ ಆಜ್ಞಾಪಿಸಬೇಕೆನೆ ರಾಯಂ ನಿಂತಿರುವೀ ಇರ್ವರೊಳು ನಿನ್ನೊಂದಿಗೆ ಕುಳಿತು ಇಂದು ಭೋಜನಮಂ ಮಾಡಿದವನಾರು ಎಂದು ಪ್ರಶ್ನೆ ಮಾಡಲು, ಸ್ವಾಮಿ ಈ ಇರ್ವರಂ ನೋಡಿದರೆ ನನ್ನ ಪತಿ ಇಂಥಾವನೆಂದೇ ನಿಶ್ಚಯಿಸಲಾರದೆ ಆಗಿದೆ, ಇವರಿಬ್ಬರೂ ಏಕಕಾರರಾಗಿ ಭೇದವೇ ಕಾಣದವರಾಗಿ ತೋರುತ್ತಿರುವರು, ಎಂದನುಮಾನಿಸುವ ಈತ