ಪುಟ:ಬೃಹತ್ಕಥಾ ಮಂಜರಿ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಬ್ರ ಹ ತ ಥಾ ಮ೦ಜರಿ, ಬರ ಭೂಷಿತಳಾಗಿ, ರಾಯನ ಬರುವಿಕೆಯ ನಿರೀಕ್ಷಿಸುತ್ತಿದ್ದವಳು ಅಂತೆಯೇ ಅಂತಃಪುರವಂಸಾರಿ ತನಗಾಗಿ ಪರುಠವಿಸಿರ್ದ ಮಂಚಾರೂಢಳಾಗಿ ಎರಡು ಮಂಚಗಳ ಮಧ್ಯಭಾಗದೊಳು ದಿವ್ಯ ತರವಾದ ಚಿತ್ರದ ಪರ್ದೆಯಂ ಬಿಡಿಸಿ ಮನಧಾರಿಣಿಯಾಗಿ ಕುಳಿತುಕೊಳ್ಳಲು ಈ ಪರಿಯನ್ನರಿತಾ ವಿಕ್ರಮಾರ್ಕಾವರಿ ದ್ರನು ಭೇತಾಳನಂ ಸ್ಮರಿಸಲು ಆ ಭೂತಾಧಿಪತಿಯಾದ ಭೇತಾಳನು ಪ್ರತ್ಯಕ್ಷನಾಗಿ ನಿಂತು ಸ್ವಾಮಿ ಮಹಾರಾಜರೇ ? ಕಾರ ಮನ್ನಾ ಜ್ಞಾಪಿಸಬೇಕೆಂದು ವಿಜ್ಞಾಪಿಸೆ ವಿಕ್ರಮಾದಿತ್ಯರಾಯಂ ಅಯ್ಯಾ ಮಹಾನುಭಾವನೆ ಈ ಮರುಮಂದಿರಂ ನಿನ್ನ ಸಹಾಯದಿಂದ ಸ್ವಾಧೀನಮಾಡಿಕೊಂಡು ಸುಖಿಯಾದೆನು, ಈಕೆಯೆರಳು ನಿಂತಿರುವಳು ಈಕೆಯು ಈ ಮುವ್ವರಿಗಿಂತಲವಿ ಚದುರೆಯೆಂದು ತೋರುವದು, ಅದರೂ ಗರ್ವಿತೆಯಾದವಳಲ್ಲವು ಆದ್ದರಿಂದ ಉಫಾಯವಾಗಿ ಈಕೆಯಂ ಪರಾ ಭವಮಂ ಹೊಂದಿಸಿ ನನ್ನ ಕೈವಶಳಂ ಮಾಡಬೇಕೆಂದು ರಹಸ್ಯದೊಳರೆದು ಕಳುಹಿ ಆ ಅಂತಃಪುರದ ಗೋಡೆಗಳಂ ನೋಡಲು ವಿಧವಿಧವಾದ ಪಕ್ಷಿಗಳ ರೂಪಗಳಂ ಅನೇಕ ವಿಧಂಗಳಾದ ಮೃಗರೂಪಂಗಳಂ ಚತುರಂಗ ಬಲದಾಕಾರಂಗಳಂ ಬಹು ಚಿತ್ರವಾಗಿ ಸಜೀವಭಾವಮಂ ಗೊಳಿಸಿ ಚಿತ್ರಿಸಿರುವದಂನೋಡಿ ಆ ಚಿತ್ರ ಪ್ರತಿಮೆಗೆ ಲೋಳೂರ ಸೇನಾ ನಾಯಕನಂ ನೋಡಿ ಎಲೈ ಸೈನ್ಯಾಧಿಪತಿಯೇ ಹೊತ್ತು ಹೋ ಗುವಂತೆ ಮಹದಾಶ್ಚರೀಕರವಾಗಿರುವದೊಂದು ಕಥೆಯಂ ಹೇಳೆಂದಾಜ್ಞಾಪಿಸಲು ಭೇತಾಳನಾ ಚಿತ್ರ ಪ್ರತಿಮೆಯೊಳು ಸೇರಿ ಕಥೆಯಂ ಹೇಳಲಾರಂಭಿಸಿದನದೆಂತೆನೆ. ಎಲೈ ವಿಕ್ರಮಾರ್ಕಾವನೀಂದ್ರನೇ | ಲಾಲಿಸು ಈ ಭರತಖಂಡದೊಳು ಜ್ಯೋತಿ ಪ್ರತೀ ಎಂಬುವದೊಂದು ಪ್ರಸಿದ್ದ ಪಟ್ಟಿಣಮಿರ್ದುದು, ಆ ಪಟ್ಟಣವೆಂ ಚಂದ್ರಜ ನೆಂಬ ಮಹಾರಾಯನು ಪರಿಪಾಲಿಸುತಿರ್ದಂ, ಆತನು ಧೈರದಲ್ಲಿ ಹಿಮವಂತನನ್ನೂ ಶೌರದಲ್ಲಿ ಚಂದ್ರಚೂಡನನ್ನೂ ಪರಾಕ್ರಮದಲ್ಲಿ ಶ್ರೀರಾಮಮೂರ್ತಿಯನ್ನೂ ಸಕಲ ಸಂಪತ್ತಿನಲ್ಲಿಯೂ ದುರೊಧನನ ಶಾಂತದಲ್ಲಿ ಹರಿಶ್ಚಂದ್ರಮಹಾರಾಯನನ್ನೂ ಚಂದ್ರನನ್ನೂ ಮನೋ ದೃಢದಲ್ಲಿ ಬಲಿಚಕ್ರವರ್ತಿಯನ್ನೂ ನೀತಿಯಲ್ಲಿ ಮನುಚಕ್ರವ ರ್ತಿಯನ್ನೂ ಜೈಸಿರುವನಾಗಿಯೂ, ಪರಸ್ತ್ರೀಮಖಾವ ಲೋಕನವಂ ಸ್ವಪ್ನದಲ್ಲಾದ ರೂ ಸ್ಮರಿಸದವನಾಗಿಯ. ಶಮದಮಾದಿಗಳಿಂದೊಪ್ಪತ್ತಾ ಸರೊತ್ತ ಮ ಮಹಾ ರಾಯನೆಂದು, ಯಶಸ್ಸಂ ಹೊಂದಿ ಪ್ರಜಾರಂಜನೈಕ ಪರನಾಗಿ ರಾಜ್ಯಭಾರಮಂ ಮಾಡುತ್ತಾ ಬರುತ್ತಿರೆ ಪ್ರಜೆಗಳೆಲ್ಲರೂ ದೈವಭಕ್ತಿ ಯುಕ್ತರಾಗಿಯ ವರ್ಣಾಶ್ರಮ ಚಾರ ತತ್ಪರರಾಗಿಯೂ ಸ್ವಧರ್ಮ ವ್ಯಾಪಾರಲಬ್ದ ಲಾಭ ಸುಖಿಗಳಾಗಿಯ ಬಾಳು ತಿದ್ದರು. ಆತನ ದೇಶದೊಳು ಕಳವು ಪಾದರ ಮಳಿಸು ಬಂದಿದಳ ಉಳ ಪಳವನ್ನಾ ಯ ಆರಡಿಗಳೆಂಬುವದೇ ತಲೆದೋರದೆ ಕಾಲಕಾಲಕ್ಕೆ ವರ್ಷಂಗಳು ಸುರಿಯುತ್ತಾ ಸ್ಟೇಚ್ಛೆಯಾಗಿ ಭೂಮಿಗಳು ಬೆಳೆಯುತ್ತಾ ನದೀತಟಾಕಕಾಸಾರ ಸರೋವರಂಗಳು