ಪುಟ:ಬೃಹತ್ಕಥಾ ಮಂಜರಿ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೫) ಬೃ ಹತ್ಯ ಥಾ ಮ೦ಜರಿ, ೨೭೩ ಬರಹಮಂತಿಹುದೋ, ಅಂತಾಗುವದೇಹೊರತು ಅದಂ ಮಾರುವದಕ್ಕೆ ಯಾರಿಗೆತಾನೇ ಸಾಧ್ಯವು? ಅವರು ಯೋಗ್ಯರಾಗಿ ಬಾಳುವಂತಿಹುದೋ, ಅಯೋಗ್ಯರಾಗಿ ನಾಶರಾ ಗುವಂತಿಹುದೋ ಕಾಣಲರಿಯದು, ವೃಥಾ ಚಿಂತಾಕ್ರಾಂತರಾಗಿ ದೇಹಾಯಾಸಂ ತಾಳಲಾಗದೆಂದು ಸಮಾಧಾನಮಂ ಹೇಳಿ, ಸುಖಸಲ್ಲಾಪಗಳಿ೦ ರಾತ್ರಿಯಂ ಸುಖ ಮಾ ಕಳೆದು ಕೆಲದಿನಗಳ ನಂತರವಾಸುದತೀಮಣಿಯು, ತನ್ನ ನಂದನರಿ ಊರ ಕರೆದು ಬಳಿಯೊಳು ಕುಳ್ಳಿರಿಸಿಕೊಂಡು, ಎಲೈ ಸುಕುಮಾರರೇ ನೀವೀವರಿಗೂಬಾ ಲರಾಗಿರುವದರಿಂದಹೇಗಾಡಿದರೂ ಸರಿಯಾಗಿತ್ತು, ಈಗಪ್ರಾಪ್ತ ವಯಸ್ಕರಾಗಿರುತ್ತೀರಿ ನಿಮ್ಮ ಜಾತಿಪದ್ಧತಿಗಳೇ ನಿಮಗೆ ತಿಳಿಯದು, ಬ್ರಾಹ್ಮಣರೆಂದು ನೀವು ಹೊಂದಿರುವ ಅಭಿ ಪ್ರಾಯವು ನಿಜವಾದುದಲ್ಲ, ಜಾತಿಯಲ್ಲಿ ನಾವು ಕ್ಷತ್ರಿಯರು ನಮ್ಮ ರಾಜ್ಯವು, ಜ್ಯೋತಿಷ್ಮತೀ ಪಟ್ಟಣವ ನಿಮ್ಮ ತಂದೆಯು ನಳ, ಹರಿಶ್ಚಂದ್ರಾದಿಮಹಾರಾಯರಿಗಿಂ ತಲೂ, ಸತ್ಯವಂತನಾಗಿಯ, ಪ್ರಜಾರಂಜಕನಾಗಿಯೂ ದೇಶಮಂ ಪಾಲಿಸುತ್ತಿರ್ದಂ, ಪ್ರಾರಬ್ಧ ಕಮ್ಮ ಬಲದಿಂದ ರಾಜ್ಯಲಕ್ಷ್ಮಿಯುಶತ್ರುಗಳ ಕೈಸಾರಿ, ಈದುರವಸ್ಥೆಯು ಪ್ರಾ ಪ್ತಿಯಾದುದು, ನೀವಾದರೋ ವಿದ್ಯಾಸಂ ಪನ್ನರಾಗಿಯೂ, ಪ್ರಾಪ್ತ ವಯಸ್ಕರಾಗಿಯೂ ಆದಿರಿ, ಇನ್ನು ಮುಂದಾದರೂ ಏವೇಕವಂ ತಾಳಿ, ನಿಮ್ಮ ಕುಲಪದ್ದತಿಯಂತ ತಕ್ಕ ಪ್ರಯತ್ನ ಮಂ ಮಾಡಿದರೆ, ಭವಿತವ್ಯತೆಯು ಭಗವಂತನ ಯತ್ನವಾಗಿರುವದು. ಯೋಗ್ಯವಾದ ನಿಮಿಾ ಕಾಲಮಂ ವೃಥಾ ಮಾಡಬಾರದೆಂದು ನಯೋಕ್ತಿಗಳಿಂದ ಬುದ್ದಿ ಹೇಳುತ್ತಾ ಬಹುದುಃಖಾಕ್ರಾಂತಳಾಗಿ ತನ್ನ ಪೂರ್ವಸ್ಥಿತಿಯಂ ಸ್ಮರಿಸಿಕೊಂಡ ಳಾದ್ದರಿಂದ ಪಾರವಿಲ್ಲದೇ ಶೋಕಿಸುತ್ತಾ ಒರಲಾ ಇದ್ದರೂ ಆಕೆಯಂ ಕುರಿತು, ಅಮ್ಮಾ ! ಇವರಿಗೂ ನಮ್ಮ ಜಾತಿಯ ಮರವೇ ನಮಗೆ ತಿಳಿಯಲಿಲ್ಲ, ಇದ್ಯ ನನ್ನಾ ದರೋ ತಾತನವರು ಕಲಿಸಿದ್ದಾರೆ, ತಾವು ಹೇಳಿದ್ದರಿಂದಲೇ ಕ್ಷತ್ರಿಯರೆಂದು ತಿಳಿದವರಾದೆವು. ನಾವು ಮಾತಾಪಿತೃಗಳ ಸೇವೆಯಿಂದಲ್ಲದೆ ಮತ್ತಾವುದರಿಂದಲೂ, ಈ ಋಣವಿಮುಕ್ತರಾಗಲಾರೆವ, ತಾವು ಶೋಕಿಸಲಾಗದು, ನಾವು ವಿದ್ಯಾವಂತರಾ ಗಿಯ, ಪ್ರಾಯ ಸಮರ್ಥರಾಗಿಯೂ, ವೀರಕ್ಷತ್ರಿಯರಾಗಿಯೂ ಇದ್ದ ಮೇಲೆ ತಕ್ಕ ಪ್ರಯತ್ನ ಮಂ ಮಾಡದೆ ಹೋದರೆ ನಾವು ಪಶುಗಳೇ ಹೊರತು ಮನುಷ್ಯರಾಗಲಾ ರೆವು, ಇಷ್ಟರ ಮೇಲೆ ದೈಎಯೋಗನಂತಿಹುದೋ ಕಾಣೆವು. ಇತಃಪರಂ ತಾವು ಕಂಣೀರಂ ಹಾಕಬಾರದೆಂದು ತಾಯಿಯಂ ಸಂತೈಸಿದವರಾಗಿ ಒಂದಾನೊಂದು ಕಾಲ ದೋಳು ಇರ್ವರೂ ಕುಳಿತು ಯೋಚಿಸುತ್ತಾ ಬಂದರದೆಂತೆನೆ. ಶ್ರೀ ಉದ್ಯೋಗೀ ಪ್ರಾಪ್ಪ ಯಾದರ್ಥಂ ಯಶೋವಾಮೃತ್ಯುವಾವ್ರು ಯಾತ್ |

  • ನಿರುದ್ಯೋಗೀಲಭೇನ್ಮತ್ಯುಂ ನಯಶೋನಾರ್ಥಸಂಪದಃ |

ಎಲೈ ಅಣ್ಣನೇ ಯಾವದಾದರೂ ಒಂದು ಕಾರ್ಯಮಂ ಮಾಡಲು ಮನು ಹೈನು ಯತ್ನಿಸಿದವನಾದರೆ, ಆ ಕಾರ್ಯಮೂಲವಾಗಿ ದ್ರವವಂ ಸಂಪಾದಿಸು