ಪುಟ:ಬೃಹತ್ಕಥಾ ಮಂಜರಿ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

** ಬ, ಹ ತ ಥಾ ನ 6 ಜ 0. ವನು, 'ಒಂದುವೇಳೆ ಅರ್ಥಪ್ರಾಪ್ತಿಯಾಗದೇ ಹೋದರೂ ಕೀರ್ತಿಯನ್ನಾದರೂ ಹೊಂ ಒತ್ತಾನೆ. ಇವೆರಡೂ ಉಂಟಾಗದೆ ಹೋದರೆ ಮರಣವನ್ನು ಹೊಂದುವನು. ಯಾವ ಕರಕ ಪ್ರಯತ್ನವನ್ನೇ ಮಾಡದವನು, ಕೆಡೆಯೊಳು ಹಣವಿಲ್ಲದೆಯೂ ಕೀರ್ತಿರಹಿತನಾಗಿಯೂ ಮತನಾಗುತ್ತಾನೆಯಾಗಿ ಮನುಷ್ಯನಾಗಿ ಹುಟ್ಟಿದಮೇಲೆ ತಕ್ಕ ಕೆಲಸವನ್ನು ಪ್ರಯತ್ನಿಸದೆ ಬಿಡಲಾಗದು, ಎಂದು ತಮ್ಮನಾದ ಚಿತ್ರವರ್ಮನು ಯಶೀಕಿಸುತ್ತಾ ಬರಲು ಹೀಗೆ ಯೋಚಿಸುವ ತಮ್ಮನನ್ನು ಕುರಿತು, ಎಳ್ಳೆ ಭಾತ ವತ್ಸಲನೇ ! ನೀನು ಹೇಳುವ ಯೋಜನೆಯು ಯುಕ್ತವಾಗಿಯೇ ಇರುವದು, ಅದು ಹಗನ್ನು ವಿಯೇ ? ಶೆ<l ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮಿ ದೈವೇನದೇಯಮಿತಿಕಾ ವುರುಪಾವದಂತಿ | ದೈವಂನಿಹತ್ಯ ಕುರುಪೌರುಷ ದಾಶಕ್ಕೆ ಯತ್ನಕ್ಕ ಕೇಯದಿನಸಿದ್ಧತಿಕೋತ್ರದೋಷ81 ಲಾಭವಂ ಹೊಂದಬೇಕೆಂಬ ಪುರುಷ ಶ್ರೇಷ್ಮನು ಕಾರ್ಯಮಂ ಮಾಡಲು ಅದರ ಲಾಭವಂ ಆತಂ ಹೊಂದುವನು. ಹೀಗಿಲ್ಲದೆ ಅದೃಷ್ಟವಿದ್ದರೆ ಬರುತ್ತದೆಂದು ಯೋಚಿಸುವರು, ಪುರುಷಾಧಮರಾದವರು. ತಾನು ಮಾಡಬೇಕಾದ ಪ್ರಯತ್ನವ ಸ್ನೇನೋ ಮಾಡಿ ಸಿದ್ದಿ ಸದ ಪಕ್ಷಕ್ಕೆ ಆಗ್ಯ ತನಗೆ ಅದೃಷ್ಟವಿಲ್ಲವೆಂದು ತಿಳಿಯ ಬೇಕೇ ಹೊರತು ಸುಮ್ಮನೆ ಇರಬಾರದು, ಎಂಬ ನ್ಯಾಯವು, ಲೋಕದಲ್ಲಿ ಪ್ರಸಿ ದ್ಧಿಯಾಗಿರುವುದರಿಂದ ನಾವಂತೆ ಪ್ರಯತ್ನಿಸುವದೇ ಯುಕ್ತ ವ. ಶ್ರೀ ಸ್ಥಾನಮುತ್ಸದ್ಯಗಚ್ಛಂತಿ ಸಿಂಹಾಸ್ಯ ತುರುವಾಗಜಾಃ | ತವನಿಧನಂಯಾಂತಿಕಾಕತಿ ಕಾಪುರುಷಾಮೃಗಾಃ || ಆನೆ ಗಳೂ, ಸಿಂಹಗಳೂ, ಸತ್ಪುರುಷರಾದವರೂ ಸಹ ತಾವ್ರ ಹುಟ್ಟಿದ ದೇಶವಂ ಬಿಟ್ಟು ಅನ್ಯದೇಶವಂ ಸಾರಿ ಪ್ರಸಿದ್ದಿಯಂ ಹೊಂದಿ ಸುಖದೂಗಿ ಜೀವಿಸು ವರು, ಕಾಗೆಗಳೂ, ನೀಚರಾದ ಪ್ರರುಷರೂ, ಮೃಗಗಳೂ ತಮ್ಮ ಜನ್ಮಭೂಮಿ ಯಂಬಿಟ್ಟು ಹೊರಗೆಹೋಗಿ ಬಾಳಲಾರದೆ ಹುಟ್ಟಿದಕಡೆಯೊಳೇ ಮತಿಯಂ ಹೊಂ ದುವರು, ಆದ್ದರಿಂದ ನಾವಿಲ್ಲಿಂದಹೊರಟು ದೇಶಂಗಳೊಳು ಸಂಚರಿಸಿ ತಕ್ಕ ಪ್ರಯ ಶಂಗಳಂ ಮಾಡಿ ರಾಜ್ಯ ಮಂ ಸಾಧಿಸುವ ಪ್ರಯತ್ನ ಮಂ ಮಾಡೋಣವೆಂದು ಅಣ್ಣ ತಮ್ಮಂದಿರೀರ್ವರೂ ಮಾತಾಡಿಕೊಂಡು ಸ್ವಲ್ಪ ದ್ರವ್ಯಮಂ ಕೊಂಡು ಧನು ರ್ಭಾಣಂಗಳಂ ಪಿಡಿದು ತಂಮತಾಯಿಗಳಿಗೆ ಈ ವಾರ್ತೆಯನ್ನ ಅರುಹದೆ ಅಲ್ಲಿಂದ ಹೊರಟು ಕೆಲವು ದೂರ ದೇಶಸಂಚಾರಮಂ ಮಾಡುತ್ತಾ ಹಾಗೆಯೇ ಮಹಾ ಘೋರವಾದ ಅರಣ್ಯ ಮಂ ಹೊಂದಿ ಆ ಕಾಂತಾರದೂಳು ಎದುರಾದ ಮೃಗಗಳಂ ಕೊಳ್ಳುತ್ತಾ, ಕಂಡ ಪಕ್ಷಿಗಳಂ ಕೆಡಹುತ್ತಾ ಅವುಗಳಂ ಬೇಯಿಸಿ ಭಕ್ಷಿಸುತ್ತಾ ಹೀಗೆಯೇ ಕೆಲವು ದಿನಂಗಳು ಸಂಚರಿಸುತ್ತಿರ್ದು ಒಂದಾನೊಂದು ದಿನದೊಳು