ಪುಟ:ಬೃಹತ್ಕಥಾ ಮಂಜರಿ.djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


M ಬ್ರ ಹತ್ಯ ಥಾ ಮು೦ಜರಿ, ಮು೦ಜರಿ, ಬಾಯಿಂದ ಬೀಳುವಂತಾಗುವದು. ಶರೀರಸಂ ಯಾರು ತಿನ್ನುತ್ತಾರೊ ಒವರು ರಾಜ್ಯಾಧಿಪತ್ಯವಂ ಹೊಂದುವರು, ಭಾಗ್ಯಹೀನನಾದ್ದರಿಂದ ನನಗದು ಲಭಿಸದೆ ಹೋದುದೆಂದು ಹೇಳಿ ಚಿಂತಿಸುತಿರಲಾ ಚಿತ್ರವರ್ಮ೦ ಅಂಥಾ ಮಹಿಮೆಯುಳ್ಳದ್ದಾ ದ್ದರಿಂದಲೇ ಮಾಯವಾಗಿ ಹೋದುದು, ಮುಖ್ಯವಾಗಿ ಯೋಗವಿಲ್ಲದ್ದಕ್ಕೆ ಚಿಂತಿ ಸಿಫಲವೇನೆಂದರೆದು ಕೆಲವು ವರಹಂಗಳನವನಿಗಿತ್ತು ಸಂತೈಸಿ ಅವನಂ ಕಳುಹಿ, ಅದರ ತಲೆಯಂ ಕತ್ತರಿಸಿ ತಾಂ ನುಂಗಿದವನಾಗಿ ಆ ಪಕ್ಷಿಶರೀರವಂ ಬೇಯಿಸಿ ತನ್ನ ಅಣ್ಣನಾದ ಮಣಿವರ್ಮನಿಗೆ ಭೋಜನಕ್ಕಾಗಿ ಕೊಡಲವಂ ಅದನ್ನು ಭಕ್ಷಿಸಿದನು. ಈ ಪಕ್ಷಿ ಸಮಾಚಾರವನ್ನೇ ತನ್ನ ಅಣ್ಣನಿಗೆ ಹೇಳದೆ ಅವನೊಂದಿಗೆ ಅಲ್ಲಿಂದ ಹೊರಟು ಆ ದಿನ ಸೂರ್ಯಾಸ್ತಮಯ ಕಾಲದವರಿಗೂ ಪ್ರಯಾಣಮಂ ಮಾಡಿ ರಾತ್ರಿಯಾ ಗುವಕಾಲಕ್ಕೆ ಸಮೀಪವಾಗಿದ್ದ ಕಮಲಾಕರವೆಂಬದೊಂದು ಆಗ್ರಹಾರಂ ಕಣ್ಣ ಕಾಣಲವರಿರ್ವರಾ ಗ್ರಾಮಕ್ಕೆ ಪ್ರವೇಶಿಸಿ ಒಬ್ಬ ಬಾಹ್ಮಣನ ಮನೆಯೊಳು ಮುಲ ಗಲು ಸ್ಥಳವಂ ಕೇಳಿ ಆ ಮನೆಯೊಳು ಮಲಗಿ ಆ ರಾತ್ರೆಯಂ ಸುಖವಾಗಿ ನಿದ್ರೆ ಯಿಂದ ಕಳೆದರು. ಮರುದಿನದುದಯದೊಳೆದ್ದು ಅಣ್ಣನಂ ಕುರಿತಾ ಚಿತ್ರವನ೯೦ ಎಲೈ ಅಣ್ಣನೇ ನನಗೆ ಹಸಿವ ಬಹಳವಾಗಿ ಬಾಧೆಯ ಉಂಟುಮಾಡುತ್ತಿರುವದು, ಭೋಜನವಂ ಮಾಡಿಕೊಂಡವರಾಗಿಯೇ ಇಲ್ಲಿಂದ ಮುಂದಕ್ಕೆ ಹೊರಡೋಣ ಇಲ್ಲ ವಾದರೆ ಕಾಳು ಸೋತು ವಿಶೇಷ ಆಯಾಸಕ್ಕೆ ಕಾರಣವಾಗುವದೆಂದು ಯೋಚಿ ಸುವೆನು ಎನಲಾ ಮಣಿವರ್ಮ ಅದಕ್ಕೆ ಸಮ್ಮತಿಸಿ ಬೇಕಾದ ಪದಾರ್ಧಂಗಳಂ ತರುವದಕ್ಕಾಗಿ ಅಂಗಡಿಯ ಸಾಲಿಗಾಗಿ ಹೊರಟುಹೋದನು. ಆ ಮಣವಮ೯೦ ಬರುತ್ತಾ ಇರಲು ದಾರಿಯೊಳು ಗುಂಪುಗುಂಪಾಗಿ ಸಂಭ್ರಮದೊಂದಿಗೆ ಓಡಿಹೋಗು ತಿರುವವರಂ ಕಂಡು ತಾಂ ವ್ಯಾಪಾರಾರ್ಥವಾಗಿ ಕುಳಿತಿರ್ದ ಅಂಗಡಿಯ ವರ್ತಕನಂ ಕುರಿತು- ಇದೇನೆ, ಜನಗಳು ಅಸಂಭ್ರಮದಿಂ ಓಡಿಹೋಗುತ್ತಿರುವರೆನೆ ಆ ವರ್ತಕಂ ಹೇಳಲಾರಂಭಿಸಿದ. ಅಯ ಲಾಲಿಸಿರಿ ಈ ಊರಿಗೆ ಇರ್ಗಾದದೊಳು ಕನಕಾಲ ವಾಲವೆಂಬುವದೊಂದು ಪ್ರತಿಭೇದನಮಿರ್ವುದು, ಆ ವರಾಧೀಶನಾದ ಇಂದ್ರ ಧ್ವಜನೆಂಬೊರ್ವರಾಯಂ ವತ್ರರಹಿತನಾಗಿರ್ದವಂ ಅಂತೆಯೇ ಮೃತನಾದನು. ಆ ರಾಯನಿಗೆ ಬಹುಮಂದಿ ಜ್ಞಾತಿಗಳಿರುವದರಿಂದ ಆ ರಾಜ್ಯಭಾರವಂ ನಮಗಾಗಬೇಕು ತಮಗಾಗಬೇಕೆಂದು ಆರು ತಿಂಗಳಿಂದಲೂ ಕಲಹವಾಡುತ್ತಾ ಇರುವರು, ಈ ವಿಧ ದಾದುದು, ಆ ದೇಶದ ಪ್ರಜಾಸಮಾಜದವರೆಲ್ಲರೂ ಸೇರಿ ಆ ರಾಜ್ಯದ ಮಂತ್ರಿಯಂ ಸೇರಿಸಿಕೊಂಡು ಸಭೆಯಂ ಮಾಡಿದರು. ಆ ಸಭೆಯೊಳು ಮುಂದಾಗಬೇಕಾದ್ದಕ್ಕೆ ಮಹಾರಾಜರ ಪಟ್ಟಮಹಿಷಿಯರ ಅಭಿಪ್ರಾಯವ ತಿಳಿದ ಹೊರತು ಯತ್ನಿಸಲಾಗ ದೆಂದು ತೀರ್ಮಾನವಂ ಮಾಡಿದವರಾಗಿ ಆ ಮಂತ್ರಿಯಂ ರಾಜಾಂಗನೆಯರ ಅಭಿಪ್ಪಾ ಯಮಂ ತಿಳಿಯುವದಕ್ಕಾಗಿ ಕಳುಹಲು ತಮ್ಮ ರಾಜಪತ್ನಿಯರ ಸಮೀಪಗತನಾದ