ಪುಟ:ಬೃಹತ್ಕಥಾ ಮಂಜರಿ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆ ಹ ಥಾ ನ ೦ 8 ರಿ, ಧುದಕಲಭವು ಕೆಲವು ಹೆಜ್ಜೆಗಳನ್ನಿಟ್ಟು ನಡೆದು, ಸ್ವಲ್ಪ ಹೊತ್ತು ಮುಂದೆ ಹಾ ಯದೆ ನಿಂತು, ಸುತ್ತಲೂ ನೋಡುತ್ತಾ ಮರಳಿ ಅಂತೆಯೇ ಮಾಡುತ್ತಾ ಆ ರಾಜ ನಂದನರು ಕುಳಿತಿರ್ದ ಪ್ರದೇಶಂಗಳನೆಲ್ಲವ ಬಿಟ್ಟು, ದೂರದೊಳು ಕುಳಿತಿರ್ದ ಆ ಮಣಿವರ್ಮನೆಂಬ ರಾಜಕುಮಾರ ನಡೆಗೇ ತಂದು ತನ್ನ ಕರದೊಳಿದ್ದ ಆ ಪುಷ್ಟ ಮಾಲಿಕೆಯಂ ಆತನ ಕಂಠದೊಳು ಹಾಕಿ ತನ್ನ ಸೊಂಡಿಲದಿಂದಾತನಂ ಎತ್ತಿ ತನ್ನ ಮೇಲೆ ಕುಳ್ಳಿರಿಸಿಕೊಂಡು ಹೊರಡಲು, ಮಂತ್ರಿ ಮೊದಲೇ ಪರುಠವಿಸಿರ್ದ ಚತು ರಂಗಬಲವೂ ಆತನಂ ಸುತ್ತೂ ಆವರಿಸಿಕೊಂಡು ಮರ್ಯಾದೆಯಂ ಮಾಡಲು, ಮಂತ್ರಿ ಸೇನಾಪತಿ ದಂಡನಾಯಕ ಪ್ರಕೃತಿಯಾದವರು ತಮ್ಮ ತಮ್ಮ ಮರ್ಯಾದೆ ಗಳಂ ತೋರುತಾತನಂ ರಾಜಮಂದಿರಮಂ ಸಾರಿಸಿ, ರಾಜಮಹಿಮೆಯಾಜ್ಞಾನುಸಾರ ಮಾಗಿ ಅಂದಿನೊಳು ಸ್ನಾನಭೋಜನಾದಿಗಳಂ ಮಾಡಿಸಿ ಮರುದಿನದೊಳೇ ಮಹದು ಕೃವದೊಂದಿಗೆ ಆ ರಾಜನಂದನೆಯಾದ ರಾಜವದನೆಯನ್ನು ಮದುವೆಯಂ ಮಾಡಿ ಕೊಡಲು, ಆಕೆಯ ಪಾಣಿಗ್ರಹಣಮಂ ಮಾಡಿಸಿ ನೆರದಿರ್ದ ಸಕಲಜನಂಗಳಿಗೂ ವಿಶೇಷವಾಗಿ ಮಾನಸನ್ಮಾನಂಗಳಂ ಮಾಡಿಸಿ, ಎಲೈ ರಾಜಾಜನೇ ! ನೀನಿಂದು ನಮ್ಮ ಮಗಳ ಮದುವೆಯಂ ಮಾಡಿಕೊಂಡದ್ದರಿಂದ ನನ್ನ ಮನಂ ಸಂತೋಷ ಗೊಂಡುದು, ಮಗನಾದರೂ ನೀನೇ, ಅಳಿಯನಾದರೂ ನೀನೇ, ಗಂಡು ರಕ್ಷಕರಿಲ್ಲದ ನನ್ನ ಸಂರಕ್ಷಿಸಬೇಕೆಂದು ಉಪಚಾರಮಂ ಪೇಳುತ್ತಿರುವ ರಾಜಮಹಿಷಿಯ ಚರಣಂ ಗಳೊಳು, ಸಾಷ್ಟಾಂಗಮಾಗಿ, ಅಮಾ ! ತಾಯಿಯಾದರೂ ನೀವೇ, ತಂದೆಯಾದ ರೂ ನೀವೇ, ನಿಮ್ಮ ಚರಣಸೇವೆಯಿಂದ ನಾ೦ ಧನ್ಯನಾಗುವನು, ತವಾಜ್ಞೆಯಂ ಎಳ್ಳಷ್ಟಾದರೂ ಮಾರಿ ನಡಿಯುವನಲ್ಲವೆಂದೊರೆದು, ಮಂತ್ರಿಗನುಸಾರವಾಗಿ ಪ್ರಜಾ ರಂಜಕನಾಗಿ ರಾಜ್ಯಭಾರವಂ ಮಾಡುತ್ತಾ ತನ್ನ ಪೂರ್ವಸ್ಥಿತಿಯನ್ನೇ ಮರೆತು ರಾಜ್ಯ ಪ್ರಾಪ್ತಾಹಾದವಂತನಾಗಿರ್ದ೦. ಅತ್ತಲಾ ಅಗ್ರಹಾರದೊಳಿರ್ದಾತನ ತಮ್ಮನಾದ ಚಿತ್ರವರ್ಮನೆಂಬುವನು ಪದಾರ್ಥoಗಳಂ ತರುವದಕ್ಕಾಗಿ ಪೇಟೆಗೆ ಹೋಗಿರ್ದ ತನ್ನ ಅಣ್ಣನು ಮಧ್ಯಾಹ್ನ ವಾದರೂ ಬಾರದೆ ಹೋಗಲು ಕಾರಣವಂ ತಿಳಿಯದೆ ಹುಡುಕುತ್ತಾ ಬಂದು ಊರೊಳೆಲ್ಲಾ ಕಂಡವರನ್ನು ಕೇಳುತ್ತ ಕಂಡಕಡೆ ಯೊಳೆಲ್ಲಾ ಹುಡುಕಿ ಹುಡುಕಿ, ಸಾಕಾಗಿ ಬೇಸತ್ತು, ಆಯ್ಯೋ ಪಾಪಿಯಾದಾವ್ಯಾಧನ ಮಾತುಗಳು ನಿಜವೆಂದು ನಂಬಿ, ಆ ಪಕ್ಷಿಮಾಂಸಮಂ ಬೇಯಿಸಿಟ್ಟಿದ್ದರಿಂದ ಹುಚ್ಚು ಹಿಡಿದು ದೇಶಾಂತರಗತನಾದನು, ನನಗೆಂತು ದೊರೆಯುವನು, ಎಲ್ಲಿ ಹುಡುಕಲಿ, ನನ್ನ ಗತಿ ಏನಾಗುವದೋ ಎಂದು ವಿಧ ವಿಧವಾಗಿ ಚಿಂತಿಸುತ್ತಾ ಸಾಯಂಕಾಲಕ್ಕೆ ತಾಳಿದಿರ್ದ ಬ್ರಾಹ್ಮಣನ ಮನೆಯಂ ಸರಿ, ಆ ಮನೆಯಲ್ಲಿ ಯಾಚಿಸಿ, ಭೋಜನ ಮಂಮಾಡಿ, ಆ ರಾತ್ರಿಯಲ್ಲಿಯೇ ಇದ್ದು ಮಾರನೆದಿನ ಮಲ್ಲಿಂ ಹೊರಟು ಅಣ್ಣನಂ ಹುಡುಕುತ್ತಾ, ಅನೇಕ ಪುರ ಗ್ರಾಮ ವನ ನದೀ ದೇಶಂಗಳಂ ಸಂಚರಿಸುತ್ತಾ, ತನ್ನ