ಪುಟ:ಬೃಹತ್ಕಥಾ ಮಂಜರಿ.djvu/೨೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* ಬ್ರ ಹ ಥಾ ನ ೦ 8 ರಿ. ಅಣ್ಣನನೆಲ್ಲಿಯುಂ ಕಾಣದೆ ಹುಚ್ಚು ಹಿಡಿದವನಂತೆ ಅನ್ನಾದಿಗಳನ್ನೊಲ್ಲದೆ ಅಲೆಯುತ್ತಾ ಬರಲು, ಅಂತೆಯೇ ಗ೦ಧೇಭ ನಗರವೆಂಬ ಸಿಂಗಾರವಾದೊಂದು ಪಟ್ಟಣಮಂ ಸಾರಿ, ಆ ಪುರ ರಾಜಮಾರ್ಗದೊಳು ಹೊರಟು ಬರುತ್ತಾ, ಒಂದು ಭವನದ ಸಧಾಂತಂದೊಳು ದಾರಿಯೊಳು ಬರುತ್ತಿರುವ ಚಿತ್ರವರ್ಮ ರೂಪಾತಿಶಯಮಂ Fಂಡು, ಮೊಹಿಸಿದವಳಾದ ವಾರನಾರೀಮಣಿಯು, ಆತಂ ಮೋಹಗೊಳ್ಳುವಂತೆ ದಿವ್ಯತರವಾಗಿ ಸುಸ್ವರದೊಳು ಒಂದು ಪದವು ಹಾಡುತ್ತಾ, ವೀಣೆಯೊಳು ಅದನ್ನ ನುಡಿಸುತ್ತಾ ಬಂದಳು. ದಾರಿಯೊಳು ಬರುತ್ತಿರ್ದವಂ ಆ ಶಬ್ದ ಮ೦ಕೇಳಿ, ಗೀತೆಯಂ ಕೇಳಿ, ಬಹುಕಾಲಮಾದುದೆಂದನುರಕ್ತನಾಗಿ ಆ ದಾರಿಯಲ್ಲೇ ನಿಂತು ಕಿವಿಗೊಟ್ಟು ಕೇಳುತ್ತಾ, ಆ ಹಾಡುಗಾರಿಕೆಗೆ ಕಾಲಮಂ ಹಿಡಿದು ತನ್ನ ಕೈಗಳಿಂದ ತಾಳಮಂ ಹಾಕುತ್ತ, ಮೂರ್ಛನಾಗತಿಯಂ ಕಂಡು, ತಲೆಯಂ ಅಲ್ಲಾಡಿಸುತ್ತಾ, ವಿಶೇಷ ಸ್ವಾರಸ್ಯಂ ತಿಳಿದಾಗ ಭಲಾ, ಶಾಬಾಸ್, ಎಂದು ಮೆಚ್ಚಿಕೆಯ ನುಡಿಗಳಂ ನುಡಿ ಮುತ್ತಾ, ತದೇಕಾಯತ್ತಚಿತ್ತನಾಗಿ ನಿಂತಿರುವವನಂ ಕಾಣುತ್ತಾ, ಅಳಿಕುಂತಳಯೆಂ ಬಾ ವೇಶ್ಯಾಂಗನೆಯು ನನ್ನ ಗಾನ ಸುಂದರಪುರುಷಂ ಭ್ರಾಂತನಾಗಿರುವನೆಂದರಿತು ಸೌಧದಿಂದ ಅತಿ ಭರದಿಂದಿಳಿದುಬಂದು ದಾರಿಯೊಳು ನಿಂತಿದ್ದಾತನಂ ಕುರಿತು ಸ್ವಾಮಿ ಪುರುಷ ಶ್ರೇಷ್ಠರೇ ! ಮನಗೆ ದಯಮಾಡಿ ಕುಳಿತುಕೊಂಡವರಾಗಿ ಗಾನಮುಂ ಕೇಳಿ ಸುಖಮಂ ತಾಳಬಹುದು, ಇದು ರಾಜಬೀದಿಯು ನಿಂತುಕೊಂಡು ಎಷ್ಟು ಹೊತ್ತಾ ದರೂ ಕೇಳುತ್ತಿದ್ದರೆ ಕಾಳು ನೋಯುವದಲ್ಲದೆ ದೂರವಾದ್ದರಿಂದ ರಾಗ ಚಮ ತ್ಕಾರವೂ ಚನ್ನಾಗಿ ಕೇಳಲಾರದೆಂದು, ಮೆಲ್ಕು ಡಿrಳಿಂದ ಬಹು ನಯಳಾಗಿ ಮಗು ಳುನಗೆಯಂ ತೋರುತ್ತಾ ನುಡಿಯಲು, ಅವಳ ಮಾತುಗಳಂ ಕೇಳುತ್ತಾ ಮೂಕ ಮುಳ್ಳವನಾಗಿ, ಅವಳ ಹಿಂದೆಯೇ ಹೊರಟು ಹೋಗಲು ಸೌಧದೊಳು ದಿವ್ಯವಾದ ವಿಶ್ರಾಂತಾಸನದೊಳು ಕುಳ್ಳಿರಿಸಿ, ಮತ್ತಷ್ಟು ಚಮತ್ಕಾರವಾಗಿ ಸಿಂಗರಮಾಗಿ ಹಾಡು ತಾ ಕೆಲಕಾಲಂ ಕಳೆದು, ಅನಂತರ ಮಂದಹಾಸ ಸಂಯುತಳಾಗಿ ಹಾಸ್ಯ ಪರಿಹಾಸೋ ಕ್ಕಿಗಳಂ ಆಡುತ್ತಲಾತನ ಮನವು ಉಲ್ಲಾಸಗೊಳಿಸುತ್ತಾ ಬರಲು, ಆ ವಾರನಾರೀ ಮಣಿಯ ಸೌಂದರ್ಯಾತಿಶಯನಂ ಅವಳ ವಿನಯ ಹಾಸೋಕ್ತಿಗಳ ಚಮತ್ಕಾರಂ ಗಳಂ ನೋಡಿ ಸಂತೋಷ ಪರವಶನಾಗಿ ಫಕ್ಕನೆ ನಕ್ಕನು. ಆ ಕೂಡಲೆ ಅವನ ಬಾಯಿಂದ ರತ್ನ೦ಗಳು ಸುರಿದುವು, ಆದಂ ಆತಂ ಕಾಣದಂತ ಆರಿಸಿಕೊಂಡವಳಾಗಿ ನೋಡಿ, ಈತಂ ಯಾರೋ ಮಹಾಪ್ರರುಷನಿರಬಹುದು, ಉಪಾಯವಾಗಿ ಸ್ವಾಧೀನ ಪಡಿಸಿಕೊಂಡರೆ ಕೆಲವುಕಾಲದೊಳಗಾಗಿಯೇ ನಾಂ ಕುಬೇರ ಸದೃಶ ಭಾಗ್ಯಶಾಲಿಯಾ ಗುವೆನೆಂದರಿತು, ಆ ರಾಜನಂದನನಂ ಕುರಿತು, ಸ್ವಾಮಿಗೆ ಮಧ್ಯಾಹ್ನ ಕಾಲಮಾ ಗುತ್ತಾ ಬಂದು, ಇಲ್ಲಿಯೇ ಸ್ನಾನಭೋಜನಾದಿಗಳಂ ತೀರಿಸಿಕೊಳ್ಳಬೇಕು, ತಾವು ಪರಸ್ಥಳದವರಂತೆ ತೋರುವದು, ಇಲ್ಲಿಂದ ಹೋಗಿ ಪ್ರಯತ್ನ ಮಂ ಮಾಡಿಕೊಳ್ಳಿ