ಪುಟ:ಬೃಹತ್ಕಥಾ ಮಂಜರಿ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ ಜರಿ, ಜೀಕಾಗಿರುವದು, ಆದ್ದರಿಂದ ಈ ಹೊತ್ತಿಗೆ ಇಲ್ಲಿಯೇ ಆಗಲಿ, ತಕ್ಕ ಸ್ಥಳವೂ ಜನರೂ ಸಿದ್ಧವಾಗಿಯೇ ಇರುವರೆಂದೆರೆದು ಆತನಂ ಸಮ್ಮತಗೊಳಿಸಿ ಬೇರೆಡೆಯೊಳು ತಕ್ಕ ಜನಂಗಳಂ ಸಿದ್ಧಗೊಳಿಸಿ ದಿವ್ಯತರವಾದ ರುಚಿಕರವಾದ ಭೋಜನ ಪದಾರ್ಥ ಮಂಮಾಡಿಸಿ ಅತನಂ ಸನ್ನಿ ನಭೋಜನಂಗಳಂ ಮಾಡಿಸಿ, ಸಂತೋಷಗೊಳಿಸಿ ದಿವ್ಯ ಗಂಧ ಪುಷ್ಟ ತಾಂಬೂಲಂಗಳಿಂದುಪಭೋಗಂ ಗೊಳಿಸಿ ಆತನೊಳು ಹಂಸತೂಲಿಕಾ ತಲ್ಪದೊಳು ಸೇರಿ, ರತಿ ತಂತ್ರಕುಶಲಳಾದ್ದರಿಂದ ಮದನ ಕೇಳಿಯೊಳಾತನಂ ಮರುಳು ಮಾಡಿ, ತನ್ನೊಳು ಸಿಲುಕಿದ ಮನಮುಳ್ಳವನಂತೆ ಮಾಡಿಕೊಂಡು ಪ್ರತಿದಿನದಲ್ಲಿಯೂ ಆತನಿಗೆ ಬೇಕಾದ ಸ್ನಾನ ಭೋಜನ ಶಯನ ವಗಾನಂಗಳಿಂದ ತೃಪ್ತಿಗೊಳಿಸುತ್ತಾ ಸರ್ವದಾ ನಗುತ್ತಿರುವಂತೆ ಹಾಸ್ಯ೦ಗಳಾಡುತ್ತಾ ಆಗ ಆತನ ಬಾಯಿ ಇಂದ ಕೆಳಗೆ ಬೀಳುವ ರತ್ನ೦ಗಳಂ ಆತನರಿಯದಂತೆ ಆರಿಸಿಕೊಳ್ಳುತ್ತಾ ಅದe ಮಾರಿ ವಿಶೇಷ ಧನ ಮc ಹೊಂದುತ್ತಾ ಆತನಂ ಬಿಡದೆ ಸರ್ವದಾ ಮನೆಯೊಳೇ ಇಟ್ಟುಕೊಂಡು ಸುಖಿ ಸುತ್ತಾ ಬಂದಳು. ಹೀಗಿರುತ್ತಿರುವ ಕಾಲದೊಳಾ ವೇಶ್ಯಾಸುಂದರಿಯ ತಾಯಿ ಯಾದ ವೃದ್ದಾಂಗನೆಯು ತನ್ನ ಮಗಳಂ ಕುರತು, ಎಲೆ ಮರುಳು ಮಗಳೇ ! ಬಹು ಕಾಲಮಾಗಿ ನೀಂ ನಿನ್ನ ಎಟನೊಳು ಸೇರಿ ರತಿ ಯಂ ಗೈಯ್ಯುತ್ತಿದ್ದರೆ, ನಿನ್ನ ಯವ ನವ ವೃಥಾ ಜೋಗುವದಲ್ಲ. ನಮ್ಮ ಜಾತಿಧರ್ಮಕ್ಕೆ ವಿರೋಧವಂ ನಡಿಸುವಿಯಾ ಹೀಗೆ ಮಾಡುವದರಿಂದ ನಿನ್ನ ವಿದ್ಯಾ ಬುದ್ಧಿ ಚಮತ್ಕಾರಂಗಳೆಲ್ಲ ಬೂದಿಯಲ್ಲಿ ಹೋಮ ಮಾಡಿದಂತಾಯಿತು, ಧನಿಕನಾದ ಏಟಿನಂ ಸೇರಿ ತನ್ನ ಬುದ್ಧಿಯನೆಮಂ ಪ್ರಯಮಾಡಿ, ತನ್ನ ಮೆಲ್ಕುಡಿ, ಮಂದಹಾಸ ಸರಸೋಕ್ತಿಗಳಿಂದಲೂ ಅಂಗಚೇಷ್ಟೆ ಬಹಿಸ್ಸುರತಾದಿ ವಿನೋದ ಕೇಳಿಯಿಂದಲೂ ಅವನ ಮನಸ್ಸು ಎಲ್ಲಿಯೂ ಚಲಿಸದಂತೆ ಮಾಡಿ, ಅವನ ಸರ್ವಸ್ವಮಂ ಹೀರಿದರೂ ಅವನಂ ತೊರೆಯದೆ ಮನೆಯ ಕೆಲಸಂಗ ಲೊಳು ಸಿಲುಕಿಸಿ ಕನ್ನಡಿಯ ಗಂಡಿನಂತೆ ತನ್ನ ಚೇಷ್ಟೆಗಳಿಂದ ಮೋಹಗೊಳಿಸುತ್ತಾ ಮತ್ತೊಬ್ಬ ಧನಿಕನಂ ಅವನಂತೆ ಮಾಡಲು ಅದೇ ರೀತಿಯೊಳು ಯತ್ನಿಸುತ್ತಾ ಬಂದ ವರನೆಲ್ಲರಂ ಪರಸ್ಪರ ವಿರೋಧಂ ಸಂಭವಿಸದಂತೆ ಉಪಾಯಂಗಳಂ ಕಲ್ಪಿಸಿಕೊಳ್ಳುತ್ತಾ ದ್ರವ್ಯಾರ್ಜನಾಪರಳಾಗದೆ ನೀನೇತಕಿಂತು ಮರುಳಾದೆ, ಈ ನಿನ್ನ ಬಟನಂ ತೊರೆಯು ವದಕೊಂದುಪಾಯಮಂ ಪೇಳುವೆನು ಕೇಳು, ಈ ರಾತ್ರಿಯೊಳು ಆತನಂ ಸೇರಿ ವಿಧವಿಧವಾದ ಚುಂಬನಂಗಳಂ ಮಾಡುತ, ಅನೇಕ ವಿಧಂಗಳಾದ ಬಂಧಂಗಳಂ ಸಲುವುತ, ರತಿ ಕ್ರೀಡೆಯಂ ಅನುಭವಿಸುವ ಕಾಲದೊಳು ಇರುಷ ವಶವರ್ತಿಯಾ ಗಿರುವನು ಆ ಕಾಲದೊಳು ಲಾಲಿಸುತ ಆತನ ಬಾಯಿಂದ ರತ್ನ೦ಗಳು ಬೀಳಲು ಕಾರಣಮಂ ತಿಳಿದುಕೊಂಡವಳಾಗು ಅನಂತರ ಅದಕ್ಕೆ ತಕ್ಕು ಪಾಯಮಂ ಯೋಚಿ ಸುವೆನೆನಲು, ಆ ವೇಶ್ಯಾರಮಣಿಯು ಆ ದಿನದ ರಾತ್ರಿಯೊಳು ತನ್ನ ಪ್ರಿಯನೊಳು ಪರಮ ಚಮತ್ಕಾರವಾಗಿ ಚುಂಬನಾದಿಗಳಂ ವಿಧವಿಧವಾದ ಬಂಧಂಗಳಂ ನಡೆ