ಪುಟ:ಬೃಹತ್ಕಥಾ ಮಂಜರಿ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ್ ಥಾ ದು ೦ 8 ರಿ . ೨೮೩ ರಾಜಕುಮಾರನಭವಿತವ್ಯತೆಯಂಕಂಡವನಾಗಿ ಅವನೊಳು ಕರುಣೆಯನ್ನಾ ಂತು ಎಲೈ ರಾಜನಂದಸನೇ ನಿನಗೀಶಿಲೆಯೊಂದನ್ನು ಕೊಡಬೇಕೆಂದು ಸಂಕಲ್ಪ ಹುಟ್ಟಿದುದು. ಇದು ಪ್ರರಿಗ್ರಹಿಸುವನಾಗು. ಈಶಿಲೆಯಂ ಪ್ರತಿನಿತ್ಯವೂ ರಾತ್ರಿಯ ಪೂರೈಯಾಮದೊಳಗಾ ಗಿಯೇ ತುಲಸೀವನ ಮೃತ್ತಿಕೆಯೊಳಿಟ್ಟು ಬೆಳಗೆದ್ದು ಶುಚಿರ್ಭೂತನಾಗಿ ಈ ಶಿಲೆಯಂ ಶುಚಿರ್ಭೂತನಾಗಿ ತೆಗೆದರೆ ಇದರಡಿಯೊಳೀಶಿಲೆಯ ತೂಕದ ಸುವರ್ಣವು ಸಿಕ್ಕುವದು, ಅದು ಕೊಂಡವನಾಗಿ ಅದರೊಳರ್ಧಮಂ ಧರ್ಮಕಾರದೊಳು ವಿನಿ ಯೋಗಮಂ ಮಾಡಿ ಮಿಕ್ಕ ಅರ್ಧಭಂಗಾರಮಂ ನಿನ್ನ ಸ್ವಂತ ಉಪಯೋಗಕ್ಕೆ ಬಳ ಸಿಕೊಳ್ಳುತ್ತಾ ಜೀವನಮಂಮಾಡು ಎಂದರೆದಾಶಿಲೆಯಂ ತನ್ನ ಕಮಂಡಲದಿಂದ ತೆಗೆದು ಕೊಡಲು ಆ ಚಿತ್ರವರಂ ಮಹಾ ಪ್ರಸಾದವೆಂದು ತನ್ನೆರಡು ಕೈಗಳಿಂಕೊಂಡ ವನಾಗಿ, ಮಿತಿಯಿಲ್ಲದ ಸಂತೋಷಮಂ ಹೊಂದಿ, ಅಲ್ಲಿಂ ಹೊರಟು ಗ೦ಧೇಭ ನಗರಕ್ಕೆ ಬಂದು ಆ ವಾರಾಂಗನೆಯ ಬಾಗಲಿಗೆ, ಬರುವಷ್ಟರಲ್ಲಿಯೇ ಮಹಡಿಯಮೇಲೆ ಕುಳಿತಿ ರ್ದವಳು ದೂರದಿಂ ನೋಡುತ್ತಲೇ ಏನೋಸಂಪಾದಿಸಿಕೊಂಡು ಬಂದಿರುವನಂತೆ ಕಾಣು ತಾನೆ,ಉಪಾಯವಾಗಿ ಅದನೆಲಮಂಸಂಗ್ರಹಿಸಿ, ವಿಸರ್ಜಿಸೋಣವೆಂದು ನಿಶ್ಚಯಿಸಿದವ ೪ಾಗಿ ಅಲ್ಲಿಂದತಿ ಭರದೊಳಿಳಿದೈತಂದು ಮನೆಯಬಾಗಲಿಗೆ ಒಂದಾಚಿತ್ರವರ ನಂ .ಕಂಡು, ಎಲೈ ಪ್ರಾಣನಾಥನೇ? ನೀನಿಷ್ಟು ದಿನಂಗಳು ಆವೆಡೆಗೈದಿರ್ದೆ! ನೀಂಪೋಗುವಾಗ ಎನಗೆ ಪೇಳದೆ ಹೋಗಬಹುದೆ ನಾನೇಂದ್ರೋಹಮಂ ಮಾಡಿದವಳೆಂದು ಭಾವಿಸಿ ಅoತೆ ಮಾಡಿದೆ, ಎಂದು ಪಶ್ಚಾತ್ಯಸ್ತತೆಯಂ ನಡಿಸುತ್ತಾ ಇಂದು ನೀಂ ಕರುಣಿಸಿ ನನ್ನ ಮನೆಗೆ ಬಂದು ದರಿಂದ ನಾ೦ ಪುಣ್ಯಶಾಲಿಯಾದೆನು, ನೀಂ ಹೇಳದೆ ಹೋದಂದಿನಿಂದ ನಿದ್ರಾಹಾರಂ ಗಳೇ ಹಿತಂಗಳಾಗಿರಲಿಲ್ಲ, ನಿನ್ನ ಹುಡುಕಿಸಿ ಸಾಕಾದೆನು. ಈ ವರಿಗೂ ನಿನ್ನ ೦ ಹುಡುಕುವಂತೆ ಕಳುಹಿಸುತ್ತಲೇ ಯಿರುವೆನು ಎಂದು ಕೃತ್ರಿಮ ಸಂತೋಷಮಂ ತೋರುತ್ತ ಕೈ ಹಿಡಿದು ಮನೆಯೊಳು ಕರೆದುಕೊಂಡು ಹೋಗಿ ಮಂಚದೊಳು ಕುಳ್ಳಿರಿ ಸಿ ಹಾಸ್ಯ ಪರಿಹಾಸೋಕ್ತಿಗಳನ್ನಾಡುತ್ತ ಬಾರಿಬಾರಿಗೂ ಆಲಿಂಗಿಸುತ್ತ ಆಗ ಮುಖ ಚುಂಬನಾದಿ ಹಿಸ್ಸುರತ ತಂತ್ರಗಳ ಸಲುಪುತ್ತ ಸರ್ವದಾ ತನ್ನೋ ಅನುರಾಗವುಳ್ಳ ವಳಾಗಿದ್ದಳೆಂಬುದಂ ತೋರುತ್ತ ಬರಲು, ಭ್ರಾಂತನಾಗಿ ಪೂರದೊಳಾದುಷ್ಕಳು ಮಾ ದುದನಮಂ ಮರೆತು ಅವಳೊಳು ಯಥಾಪ್ರಕಾರವಾದ ನಂಬುಗೆಯನ್ನಿಟ್ಟು, ತಾಂ ಹೋಗಿ ಬಂದ ಪರಿಯನೆಲ್ಲಮಂ ಅವಳು ಹೇಳಿದನು. ಕೇಳುತದನಮಂ ಮನ ಮನದೊಳು ಇವನ ಆಸ್ತಿಯೆಲ್ಲಮಂ ಸುಲುಕೊಂಡು ಕಳುಹಲು ಯೋಚಿಸುತ್ತಾ ತನ್ನ ಕೆಣಲಮಂ ನೋಡುವೆನೆಂದು ನಿಶ್ಚಿಸಿ ಹೊರಗಡೆಯೊಳು ಅಯ್ಯೋ ದೇಶಸಂಚಾರ ದಿಂದ ಕಾಲಕಾಲಕ್ಕೆ ಅನ್ಮಾ ಹಾರಂಗಳಿಲ್ಲದೆ ಎಷ್ಟು ಬಳಲಿದಿರೋ ಎಂದು ತಾಪವು ತಾಳುತ್ತ ಸ್ನಾನಭೋಜನಾದಿ ಸಾಮಗ್ರಿಗಳಂ ಅಣಿಗೊಳಿಸಿರುವೆನು, ಏಳಿ ಅಯಾಸ ಪರಿಹಾಸಮಂ ಮಾಡಿಕಂಡಸಂತರ ಸಾವಕಾಶವಾಗಿ ಕುಳಿತು ಮಾತಾಡೋಣವಂ