ಪುಟ:ಬೃಹತ್ಕಥಾ ಮಂಜರಿ.djvu/೨೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೮೪ " ಹ ತ ಥಾ ನ ೦ 8 ರಿ . ದು ಹೇಳಿ ಕಳುಹೆ ಅತಂ ಸ್ನಾನವಂ ಮಾಡಿ ದಿವ್ಯತರವಾಗಿ ಮಾಡಿಸಿದ್ದ ಷಡ್ರಸಾನ್ನ ದುಂ ಭುಂಜಿಸಲು ಗಂಧ ಪುಷ್ಟ ತಾಂಬೂಲಗಳಿಂದುಪಚರಿಸಿ ಸ್ವಲ್ಪಕಾಲಂ ಆತ ನಿಗೆ ಹಿತವಾದ ಕೆಲವು ರಾಗಂಗಳಿಂ ಪದಂಗಳಂ ಹಾಡುತ್ತಲಿರ್ದು ಅಂತೆಯೇ ರಾಜನಂದನಂ ಮುಲುಗಲು ಆತನ ಪಕ್ಕದೊಳು ಮಲಗಿ ಹಾಸ್ಯ ಮಾಡುತ್ತ ಮುಖ ಚುಂಬನ ನಖಕ್ಷತ ದಂತಗಳೇ ಮೊದಲಾದ ಬಾಹ್ಯ ಸುರತ ತಂತ್ರದಿಂ ಅನಂದಗೊಳಿ ಸುತ್ತ ಅಂತೆಯೇ ವಿಧವಿಧವಾದ ಬಂಧಂಗಳಂ ತೋರುತ ಮನ್ಮಥಯುದ್ಧ ಪ್ರಾವೀ ಇತೆಯಂ ತೋರಿ ಕೇಳೀ ವಿಳಾಸದೊಳು ತೃಪ್ತನಂ ಮಾಡಿದಳು. ಅದೇ ಪ್ರಕಾರ ಮಾಗಿ ಆತನಂ ಎಡೆಬಿಡದೆ ಸದಾ ವಿನೋದವಾಗಿ ಕಾಲಮಂ ಕಳೆಯುವಂತೆ ಮಾ ಡುತ್ತಾ ಬಂದಳು, ಆ ರಾಜಕುಮಾರನಾದ ಚಿತ್ರವನು ರಾತ್ರಿಯಾಗೆ ಯಥಾಪ್ರಕಾರ ವಾಗಿ ತುಲಸೀತೋಟದಲ್ಲಿ ಆ ಗಿಡಗಳ ಮಧ್ಯದಲ್ಲಿನ ಮ್ಮತ್ತಿಗೆಯ೦ತಂದು ಮುನೀಂದ್ರ ನೀಂ ಕೊಡಲ್ಪಟ್ಟಿರ್ದ ಶಿಲೆಯನ್ನದರೊಳಿರಿಸಿ ಭದ್ರಪಡಿಸಿ, ಮಾರನೆಯ ದಿನದೊಳೆದ್ದು ಶುಚಿಯಾಗಿ ಆ ಭದ್ರಪಡಿಸಿದ ಶಿಲೆಯಂ ತೆಗೆದು ನೋಡಲು, ಅದರಡಿಯೊಳು ಆ ಶಿಲೆ ಯ ತೂಕದಷ್ಟು ದಿವ್ಯವಾದ ಸುವಣ೯ವು ಅಂದರೆ ( ೧೦ ಹತ್ತು ತೊಲೆ ಭಂಗಾ ರವು ) ದೊರಯಲು ನೋಡುತಲಾ ವಾರನಾರಿಯು, ಅವಳ ತಾಯಿಯ, ಪರ ಮಾಶ್ಚರ ಪರವಶರಾಗಿ, ಈತಂ ತರುವ ಪದರ್ಥಗಳು ಒಂದಕ್ಕಿಂತಲೂ, ಮತ್ತೊ೦ ದು ಅಮಂಗಳಾದವಲ್ಲಾ ಎಂದು ಮೆಚ್ಚುತ್ತಾ ಅಲ್ಪ ಕಾಲದೊಳಗಾಗಿಯೇ ಇದಂ ಅಪಹರಿಸಿ ಇವನಂ ತೊರೆಯಬೇಕೆಂದು ಯೋಚಿಸಿದವರಾಗಿ, ಆ ಭಾವ ಹೊರದೋ ರದೆ ಯಥಾಪ್ರಕಾರವಾಗಿ, ಉಪಚರಿಸುತ್ತಾ ಬಂದರು. ಹೀಗಿರುತ್ತಾ ಒಂದು ದಿನದೊಳು ಆ ಶಿಲೆಯಂ ಅಪಹರಿಸಬೇಕೆಂದು ಯೋಚಿಸಿ ಎಲೈ ರಾಜಾ ಜನೇ ! ಇಂದಿನ ರಾತ್ರೆಯೊಳು ಉದ್ಯಾನವನದೊಳು ಚಂದ್ರಿಕೆ ಹೋತ್ಸವವಂ ನಿನ್ನೊಡಗೂಡಿ ಹೊಂದಬೇಕೆಂದು ಅಪೇಕ್ಷೆಯುಂಟಾಗಿರುತ್ತದೆ. ಇದಲ್ಲ ನೀ೦ ನೆರವೇರಿಸಿ ಕೊಡಬೇಕೆಂದು ಹೇಳಿ ಒಡಂಬಡಿಸಿ ಅದಕ್ಕೆ ತಕ್ಕ ಪರಿವಾರವನಲ್ಲ ಮಂ ಅಣಿಮಾಡಿಕೊಂಡು ಹೊರಟು ಹೋಗುವಾಗೀಶಿಲೆಯಂ ಆತನು ಭೋಜನಮಾ ಡುವ ಮನೆಯೊಳೇ ಭದ್ರಪಡಿಸದ ಹೊರಡುವ ಸಂಭ್ರಮದೊಳು ಪದ್ಧತಿಯಂತೆ ದೇವರ ಬಳಿಯೊಳೇ ಇಟ್ಟು ಹೊರಟು ಬರಲು ಈ ಸಂರ್ಭಮಂ ತಿಳಿಯುವಂತೆ ಮೊದಲೇ ಏರ್ಪಾಟು ಮಾಡಿದ್ದಳಾದ್ದರಿಂದ ಅದು ತಿಳಿದ ಒಡನೆ ಎಲ್ಲರೂ ಜೊತೆಯೊಳು ಸ್ವಲ್ಪ ದೂರ ಹೋಗಿ ಬೇಕಾದುದಂ ತಾರದೆ ಮರೆತವಳಂತೆ ಅಭಿನಯಿಸಿ ರಾಜಕುಮಾರನಂ ಕುರಿತು ಎಲೈ ಪ್ರಿಯನೇ ನನ್ನ ಕೈ ಪೆಟ್ಟಿಗೆಯನ್ನೇ ಮರೆತು ಬಂದೆನು. ಅದರಲ್ಲಿ ಆಭರಣಂಗಳೂ ಸುಗಂಧದ್ರವ್ಯಗಳೂ ಇದ್ದವು. ಆದ್ದರಿಂದ ಹೋಗಿ ಬೇಗನೆ ತರು ತೇನೆ ಎಲ್ಲರೂ ಇಲ್ಲಿ ನಿಂತಿರುವರಾಗಿ ಎಂದುಹೇಳಿ ಅತಿವೇಗದಿಂದ ಬಂದು ಆಶಿಲೆಯಂ ತೆಗೆದು ತನ್ನ ಮನೆಯೊಳು ಭದ್ರಪಡಿಸಿ ಅಲ್ಲಿಂ ಭರದಿಂದ ಬಂದು ಜೊತೆಯಂ ಸೇರಿ