ಪುಟ:ಬೃಹತ್ಕಥಾ ಮಂಜರಿ.djvu/೨೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯೨ ಬ ಹ ತ ಥಾ ಮ ೧ ಜರಿ. ಕಮಂಡಲಮಂ ತೊಳೆದು, ಕ್ರಮವಾಗಿ ವೂಜೆಗೈದು ಎಷ್ಟು ಮಂದಿಗೆ ಭೋಜ ನಮಾಗಬೇಕೆಂದು ತಿಳಿದಿರುವನೋ ಆದಂ ಸ್ಮರಿಸಿ ಆ ಕಮಂಡಲಮಂ ಮೊಗಚಿಟ್ಟರೆ ಅಷ್ಟು ಜನಕ್ಕೆ ಸಂಪೂರ್ತಿಯಾಗಾಗುವಂತೆ ನಿಖಿಲಭಕ್ಷ್ಯ ಭೋಜ್ಯಂಗಳೊಡನೆ ವ್ಯ ಪ್ಯಾನವು ಸಿದ್ಧವಾಗುವದು. ಈ ಯೋಗದಂಡಮಂ ನೆಲದೊಳೊಂದಾವೃತ್ತಿ ಎತ್ತಿ ಕುಕ್ಕಿದ ಮಾತ್ರಕ್ಕೆ ನವರತ್ನ೦ಗಳ೦, ಒಂದು ಬೊಗಸೆಯ ವರಹಂಗಳಂ ತುಂಬಿದ ತಟ್ಟೆಯನ್ನೂ ಸ್ತ್ರೀ ದೇವತೆಯೊಂದು ತಂದು ದಂಡವಂ ಡಿದಿರ್ದವನ ಮುಂದಿಟ್ಟು ಹೋಗು ವದು. ಈ ಎರಡು ಪಾದುಕೆಗಳಂ ಮೆಟ್ಟಿದವನಾಗಿ ತಾನಾವೆಡೆಯಂ ಸಾರಬೇಕೆಂದು ಚಿಂತಿಸಿದರಾಕ್ಷಣವೇ ಆ ಸ್ಥಲಂ ಮುಟ್ಟಿಸುವದು. ನಿನಗೆ ಕೊಟ್ಟ ಸುವರ್ನಪ್ರದ ಶಿಲೆ ಯು ಸೇರಿ ಗುರುಗಳೆಡೆಯೊಳಿರ್ದುದು ನಾಲ್ಕು ವಸ್ತುಗಳು, ಈ ಪಾದುಕೆಗಳ ವಿಷಯ ಮಾಗಿ ಕಲಹವು ತನಗುಂಟಾಗಿರುವದು. ಪಕ್ಷಪಾತವಿಲ್ಲದೆ ನೀಂ ಪರಿಹರಿಸಿಂಗು ಅವರಿವ್ವರೂ ಆ ರಾಜಾತ್ಮಜನಂ ಮಧ್ಯಸ್ಥಗಾರನನ್ನಾಗಿ ಗೊತ್ತು ಮಾಡಿಕೊಂಡು ಹೇಳುತ್ತಾ ಬರಲು ಆ ಚಿತ್ರವರಂ ಪಾದುಕೆಗಳ ಮಹಿಮೆಯಂ ಕೇಳುತ ತಾನದಂ ಅಪಹರಿಸಬೇಕೆಂದು ಯೋಚಿಸಿ, ಆ ಭಾವನಂ ಹೊರತೋರದೆ ಅವರಂ ಕುರಿತು, ಆಯ್ತಾ, ಮುನಿಪುತ್ರರೇ ! ನಾನೊಂದು ನ್ಯಾಯಮಂ ನೆನೆದಿರುವೆನು ಅದರಂತೆ ನೀವಿ ರರೂ ಸಮ್ಮತಿಸಿದರೆ, ಈ ವಿಷಯವಾದ ನಿಮ್ಮ ವ್ಯಾಜ್ಯ ಮಂ ಬಗೆ ಹರಿಸುವೆನನ ಅದರಂತೆಯೇ ಆಗಲೆಂದೊಡಂಬಡಲು, ಅಯಾ ಅದೋ ಅತ್ತನೋಡಿ ಎದುರಾಗಿ ಕಾಣುವ ಬಿಲ್ವವೃಕ್ಷದೊಳಗಿನ ಒಂದು ಫಲಮಂ ಮುಂದಾಗಿ ಯಾರು ತರುವರೆ ಅವರೀಪಾದುಕೆಗಳ ಹೊಂದಲಿರುವರೆಂದು ಹೇಳಿದನು. ಅಂತೆಯೇ ಆಗಲೆಂದು ಒಪಿಎ ದವರಾಗಿದ್ದರೂ ಆ ವ್ಯಕ್ಷ ದಡಿಗೈದಲು ಈ ಪಾದುಕೆಗಳೆರಡಂ ತನ್ನೆರಡು ಕಾಲುಗಳಿಗೆ ತೊಟ್ಟುಕೊಂಡು ತನ್ನ ಸೂಳೆಯ ಮನೆಯ ಬಾಗಲು ಮುಂಗಡೆಯೊಳಿರಲು ಸ್ಮರಿಸಿದಂ ಆ ಕ್ಷಣದೊಳೇ ಅಲ್ಲಿಂದವನಂ ಅಂತರಿಕ್ಷ ಮಾರ್ಗವಾಗಿ ತೆಗೆದುಕೊಂಡು ಬಂದು, ಗ೦ಧೇಭಪ್ರರದ ವಾರಾಂಗನೆಯಾದ ಅಳಿಕುಂತಳೆಯ ಮನೆಯ ತಲಬಾಗಿಲೊಳು ಇಳು ಹಿದವು. ಆ ಕೂಡ ಯಾ ವಾರಾಂಗದೆಯ ಹೆಸರನ್ನಿಟ್ಟು ಕೂಗಲು, ರಾಜನಂದ ನನ ಶಬ್ದ ಮಂದರಿತು, ಪ್ರನಕಿ ಮತ್ತೇನ೦ ಸಂಪಾದಿಸಿಕೊಂಡು ಬಂದಿದ್ದಾನೋ ಎಂದು ಅತಿಸಂಭ್ರಮದೊಳು ಬೇಗನೈ ತಂದು ಬಾಗಿಲ ತೆಗೆದು ನಿಂತಿರ್ದ ರಾಜಕುಮಾರನಂ ಮರಾದೆಯಾಗಿ ಮೃದಕ್ಕಿಗಳಿಂದ ಮನ್ನಿಸುತ್ತಾ ತನ್ನ ಅಂತಃಪುರಕ್ಕೆ ಕರೆದುಕೊಂ ಡು ಹೋಗಿ ಮಂಚದೊಳು ಕುಳ್ಳಿರಿಸಿ, ಎಲೈ ಮೋಹನಾಂಗನೇ! ನನ್ನ ಬಿಟ್ಟು ಹೋಗಿ ಬಹುದಿನಗಳಾದವು. ತಾವು ಹೊರಟು ಹೋದ ಕಾಲದಿಂದ ಎಲ್ಲಿರುವರೋ ಕಷ್ಟ ಪಡುವರೋ ಸುಖಿಯಾಗಿದ್ದಾರೋ, ಎಂಬ ಚಿಂತೆಯಿಂದ ಅನ್ನಾ ದಿಗಳು ಸದಾ ರಚಿಸದೆ ಇತ್ತು, ನಿಮ್ಮ ಸ್ಮರಿಸಿ ರಾತ್ರಿಯೊಳು ನಿದ್ದೆ ಸಹ ಬಾರದಿತ್ತು, ಅಯ್ಯೋ ಸ್ವಾಮಿಾ ನನಗಾಗಿ ನೀವಿಷ್ಟು ಕಷ್ಟಮಂ ಹೊಂದಬೇಕಾಯ್ತು ಯೆಂದು ಬಿಗಿಯಪು