ಪುಟ:ಬೃಹತ್ಕಥಾ ಮಂಜರಿ.djvu/೨೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ್ರ ಹ ಥಾ ನ ೦ ರಿ. ೨೯೩ ಶಾ ತಮ್ಮ ಕುಚಂಗಳಂ ಆತನೆದೆಯೊಳಿಟ್ಟ ಅಪ್ಪುತ್ತ ತುಟಿಯಂ ಕಚ್ಚುತ, ಹೀಗೆ ನಿಮ್ಮಿ ಷಮಾತ್ರದೊಳಾ ರಾಜಕುಮಾರನಂ ಬೆರಗುಮಾಡಿ, ಅಂತೆಯೇ ಸಣೇಶನೇ ಏಳು, ಹೊತ್ತಾದುದು ಅಡಿಗೆಯು ಸಿದ್ಧವಾಗಿಹುದು, ಸ್ನಾನ ಭೋಜನಾದಿಗಳಂ ಮಾಡಿ, ಸ್ವಲ್ಪ ವಿಶ್ರಾಂತಿಯಂ ಹೊಂದು ಬಹು ದಣಿದಿರುವೆಯೆಂದು ಕಪಟ ನಟನೆಯಂ ನಟಿಸು ಸುತ ಬಲುಮೆಯಂ ತೋರುತ್ತ ಬರಲು, ಪಾಯಸ್ಥನಾದರಿಂದ ಕಾಮ ಮದಾಂಧನಾಗಿ ಅವಳ ಕೃತ್ರಿಮಭಾವವನ್ನರಿಯದೆ ಸಹಜವಾದ ಪ್ರೀತಿಯಂ ತೋರುವಳೆಂದರಿತು ಸಂತೋಸಿಸ್ವಾಂತನಾಗಿ ಅಲ್ಲಿಂ ಹೊರಟು ಬಂದು ಸ ನ ಭೋಜನಾದಿಗಳಂ ಮಾ ಡಿಕೊಂಡು ವಾರಾಂಗನೆಯು ಶಯಾ ಗೃಹಮಂಸಾರಲು, ಆ ಕಾಲಕ್ಕೆ ತನ್ನ ಭೋ ಜನಾದಿಗಳಂ ತೀರಿಸಿಕೊಂಡು ದಿವ್ಯಾಲಂಕಾರ ಮಾಡಿಕೊಂಡವಳಾಗಿ, ಗಂಧ ಪುಷ್ಟ ತಾಂಬೂಲಗಳಂ ಅಣಿ ಗೊಳಿಸಿಕೊಂಡು ಕಾದಿರ್ದವಳು, ಕೈ ಹಿಡಿದೆಳದು ಮಂಚ ದೂಳು ಕುಳ್ಳಿರಿಸಿ, ಆತನ ತೊಡೆಯಮೇಲೆ ತ೦ ಕುಳಿತು ಗಂಧಪ್ರಹ್ಲಾದಿಗಳಿಂದಾ ತನಂ ಭೂಷಿಸಿ ದಾಂಬೂಲಮಂ ಸವಿಯಲೀಯು ಹಿತವಾಗಿಯೂ ಮೃದುವಾಗಿ ಯ ಪ್ರಿಯೋಕ್ತಿಗಳಿಂದ ಸಂತೋಷಿಸುತ್ತಾ ಹಂಗಳಂ ಸಲುಫುತ್ರ ಮಂದಹಾ ಸನ ಸಂಯುತಳಾಗಿ ಚುಂಬನಾದಿಗಳಂ ಗೈಯುತ್ತಾ ಆತನಂ ಪರವಶನಂ ವಾಡಿ, ಎಲೈ ಪ್ರಾಣೇಶನೆ ! ಇಷ್ಟು ದಿನಗಳೂ ಹೋಗಿ ಯಾವ ಶ್ರೇಷ್ಠವಾದ ಪದಾರ್ಥಮಂ ತಂದಿ ಕುವಿರಿ, ಅದರಿಂದೇನು ಸುಖಂಗಳಾಗವೆಂದು ಮರ್ಮೊಾಟನದ ಮಾತುಗಳ ನ್ನಾಡುತ್ತಾ ಬರಲಾ ಕಾಮಾಂಧಂ, ಇವಳ ದುಷ್ಟಭಾವವನ್ನರಿಯದೆ ತನಗೆ ಮುಂದಾ ಗುವದಂ ಯೋಚಿಸದೆ ಹೇಳುತ್ತಾ ಬಂದನು. ಎಲೈ ಪ್ರಾಣಪದಕವೇ ! ಕೇಳು ನಿನ್ನಿಂದ ಸಮ್ಮತಿಗೊಂಡು ಹೊರಟವ೦ ಹಿಮಾಲಯಕ್ಕೆ ಹೋಗಿ ಅಲ್ಲಿ ತಪೋಧನನಾ ಗಿರ್ದ ಮೊದಲು ನಮಗೆ ಸುವರ್ಣದ ಪ್ರಗತಿಯನ್ನ ನುಗ್ರಹಿಸಿದ ಮುನೀಂದ್ರನ ಆಶ್ರ ಮಕ್ಕೆ ಹೋಗುವಲ್ಲಿ ಆ ತಾಪಸೇಂದ್ರಂ ಪರಲೋಕಾತಿ ಥಿಯಾದನೆಂದು ಅವರ ಶಿಷ್ಯ ರಿಂದ ಕೇಳು ಅಯ್ಯೋ ನನ್ನ ಮನೋರಥಂ ಕೈಸಾಂದೆ ಹೋದುದೇ ಎಂದು ಚಿಂತಿ ಸುತ್ತಲಿರುವ ಕಾಲದೊಳು ಅವರ ಶಿಷ್ಯರಿಂದ ಈ ಪಾದುಕೆಗಳು ಪ್ರಾಪ್ತಿಯಾಗೆ ಕೊಂಡ ಬಂದೆನೆಂದೂ ಈ ಪಾದುಕೆಗಳಂ ಕಾಳಿಗೆ ತೊಟ್ಟು ಯಾವ ಪ್ರದೇಶಕ್ಕೆ ಹೋಗಬೇ ಕೆಂದು ಸ್ಮರಿಸಿದರೆ ಆ ಕ್ಷಣಕ್ಕೆ ಆ ಬಳಿಯ೦ ಸೇರಿಸುವದು, ಮರಳಿ ಹಿಂತಿರುಗಿ ಬರ ಬೇಕೆಂದು ಸ್ಮರಿಸಿದರೂ ಅಂತೆಯೇ ಆಗುವದೆಂದೂಅದರ ವ ಹಿಮೆಯ ನ್ನು ಹೇಳಲು ಳೆದಾ ಮೋಸಗಾರಳು ಇವನಂ ಕಾಡುಪಾಲುಮಾಡಿ ಈ ಪಾದುಕೆಗಳಂ ಅಪಹರಿಸದೇ ಕೆಂದು ಯೋಚಿಸಿ ಎಲೈ ಪ್ರಾಣಕಾಂತನೇ ! ನಿನ್ನ೦ ಸೇರಿದ್ದರಿಂದ ನನಗೊಂದು ಕಾರ ಮಂಕೈಗೂಡಿಸಿಕೊಡು, ನಾಂ ಧನ್ಯಳಾಗುವೆ. ರತ್ನ ದ್ವೀಪದೊಳು ಮೋಕ್ಷದಾರಿ ಬಿಕೆಯಂ ಪೂಜಿಸಿದವರಿಗೆ ಮೋಕ್ಷ ಮೇ ಸಂಭವಿಸುವದೆಂದು ಅನೇಕ ಪುರಾಣಂ ಗಳು ಹೇಳುತ್ತವೆ ನನಾ ದೇವಿಯ ಪೂಜೆಸಿದರೆ ನನ್ನ ಮರಣಾನಂತರ ನನಗೂ ಮೊ