ಪುಟ:ಬೃಹತ್ಕಥಾ ಮಂಜರಿ.djvu/೨೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ಹ ತ್ ಥಾ ನ ೦ 8 ರಿ. ೨೯೫ ದಂತೆ ಆ ಭೋಗವತಿಗೆ ಕಾಣಿಸುವಂತೆ ಗೈದು ತಾನೇ ಆ ರೂಪದಂತೆ ಸುಂದರರೂ ಪನಾಗಿ ಎಕ್ರಮಾದಿತ್ಯ ಮಹಾರಾಯ ನಮುಂಗಡೆಯೊಳು ಬಂದುನಿಂತು ಕೈಗಳ೦ ಜೋ ಡಿಸಿಕೊಂಡು ಸ್ವಾಮಿಾ ಭೂಮಿಾಂದ್ರರೇ ! ತಾವು ಮಹನೀಯ್ಯರಾದ ಶಕಪುರುಷರು. ನಾನಾದರೋತೃಣಕ್ಕಾದರೂ ಹೋಲಿಸಲು ಯೋಗ್ಯಳಾದವಳಿಲ್ಲ, ನನ್ನ ೦ ಇಂತು ಮ ರಾದೆಯಿಂದ ಕೇಳಿಕೊಳ್ಳುವದು ಯುಕ್ತವಲ್ಲ. ತಮ್ಮಾ ಜ್ಞಾನುಸಾರವಾಗಿ ತಮ್ಮ ಚರಣಸೇವೆಯಂ ಮಾಡಿ ನಾಂ ಧನ್ಯಳಾಗುವೆನು. ಎಂದೊರೆದು ಕಥೆಯಂ ಹೇಳಲು ಉಪಕ್ರಮಿಸಿದುದು. ಈ ಪರಿಯನೆಲ್ಲಮಂ ನೋಡುತ್ತಾ ಭೋಗವತಿಯು ಪರಮಾಶ "ಪರವಶಳಾಗಿ ಈ ರಾಜನು ಸಾಮಾನ್ಯರಾಜ ಪ್ರರುಷನಲ್ಲ. ಈತನೊಳೇನೋ ದು ಹಾಸಿದ್ದ ಕ್ರಿಯಾಶಕ್ತಿಯು ಇರುವದು. ಅಲ್ಲದಿರ್ದೊಡೆ ಇಂಥಾ ಘಟನಾಘಟನ ಸಾ ಮರ್ಥ್ಯವುಇರಲಾರದು ಎಂದು ನಿಲ್ಲಿಸಿ ಮತ್ತೊಂದು ಕಥೆಯಂ ಹೇಳುತ್ತಿರುವದಂ ಕೇಳಿ, ರಾಜರಾಜನೇ ! ಆ ಇರ್ವರು ರಾಜಾ ಜರು ತಂದೆತಾಯಿಗಳಂಬಿಟ್ಟು ಬಂದವ ರು ಒರ್ವಂ ತನ್ನು ಕಾಂತೆಯಂ ಶಿಲೆಯಂ ಮಾಡಿಸಿಕೊಂಡು ಸೂಳೆಯರ ಪಾಲಾದನು. ಮತ್ತೋರ್ವ೦ ದೀಪಾಂತರದೊಳು ಜನಸಹಾಯ ರಹಿತನಾಗಿ ಜೀವಿಸಿದ್ದ ರೂಸತ್ತವನಂತೆ ಆಗಿ ಜ್ಞಾನಶೂನ್ಯನಾದಂ. ಇವರಗತಿ ಏನಾದುದೋ ಆ ಕಥೆಯನ್ನೇ ಮುಂದಕ್ಕೆ ಹೇ ಳಿಸಬೇಕೆಂದು ಕೈಗಳಂಜೋಡಿಸಿಕೊಂಡು ಪ್ರಾರ್ಥಿಸುತ್ತಾ ಬರಲು ಕ್ರಮಾರ್ಕಂ ಅದೇ ಕಥೆಯಂ ಹೇಳೆಂದಾಜ್ಞಾಪಿಸಲು ಪೇಳಲಾರಂಭಿಸಿದನು. ಮರನೆ ಯಾಮದೊಳು ಚಿತ್ರಾರ್ಪಿತ ಸ್ತ್ರೀ ಎಗ್ರಹಂ ಹೇಳುವ ಕಥೆ. - ಲಾಲಿ ದಯಾಸಮುದ್ರನಾದ ವಿಕ್ರಮಾದಿತ್ಯ ರಾಜೇಂದ್ರನೆ ! ಪರಮ ಪಾಪಿ ಯಾದ ವಾರನಾರೀ ಸವಾನ್ನ ಭೋಜನದಿಂದ ಮತ್ತನಾಗಿ ದೈವಾಂತರ ಮಧ್ಯದೊಳು ಏಕಾಕಿಯಾಗಿ ಬಿದ್ದಿರ್ದ ರಾಜಾ ತ್ಮ ಜನಾದ ಚಿತ್ರವರಂ ರಾತ್ರೆಯೊಳೆಲ್ಲಾ ಜ್ಞಾನಮಿ ಇದೆ :ರ್ದವಂ ಪ್ರಾತಃಕಾಲ ಸೂಚಕವಾದ ಮಂದಮಾರುತಂ ತಣ್ಣನೆ ಬೀಸುತ್ತಾ, ಒರಲು ಮತ್ತ ಪದಾರ್ಥವು ಆ ಸಮಯಕ್ಕೆ ಜೀರ್ಣವಾಗಿ ಹೋಗಿರಲು ಪ್ರಜ್ಞೆಯಂ ತಾಳಿ, ಕಂಗಳಂ ಬಿಟ್ಟು ನೋಡಿ ಸುತ್ತಲೂ ಸಮುದ್ರದಿಂದ ಸುತ್ತಲ್ಪಟ್ಟಿರ್ದ ದ್ವೀಪ ಮಾಗಿ ಕಾಣಬರೆ ಅಂತೆಯೇ ಎದ್ದು ಕುಳಿತು ದಿಗ್ಟಾಂತನಂತೆ ಸುತ್ತಲೂ ನೋಡಿ, ಇದು ದ್ವೀಪಾಂತರವೇ ಹೌದು ಎಂದು ನಿಶ್ಚಯಿಸಿದವನಾಗಿ, ಅಯ್ಯೋ ಆ ಪರಮ ಪಾಪಿಯಾದ ಸೂಳೆಯು ಆ ಪಾದುಕೆಗಳಂ ಆಪಹರಿಸಬೇಕೆಂದು ಈ ತಂತ್ರಮಂ ಮಾಡಿವಳೇ ಹೊರತು ಬೇರೊಂದೂ ಅಲ್ಲ, ವೇಶ್ಯಾಂಗನೆಯರೊಳು ಎಂದೆಂದಿಗೂ ನಿಶ್ಚಯಮಂ ಹೇಳಬಾರದು, ನಾಂ ಯಥಾರ್ಥಮಂ ಹೇಳಿದ್ದರಿಂದಲೇ ನನಗೀಯ ವಸ್ಥೆ ಬಂದುದು, ಮೊದಲು ನನ್ನಿಂದ ರತ್ನ ರಾಶಿಗಳಂ ಹೊಂದಿ, ಮಹದೈಶ್ವರ ಸಂಪನ್ನೆ ಯಾದಳು, ಹಾಗಾದರೂ ಅಂತಃ ಕೃತ್ರಿಮವನ್ನೇ ಇಟ್ಟು ಕೊಂಡು ಹೊರಗೆ ಹಾ