ಪುಟ:ಬೃಹತ್ಕಥಾ ಮಂಜರಿ.djvu/೨೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯೬ - ಬಿ ಹೆತ್ ಥಾ ನ ೦ 8 ಕಿ. ವಿಶ್ವಾಸಮಂ ನಟಿಸುತ್ತಿರ್ದು ಕಡೆಯೊಳು ನನ್ನೊಳು ರೋಗೋತ್ಪತ್ತಿಯಂ ಮಾಡಿ, ಅದಕ್ಕೆ ತಾನೇ ಔಷಧ ಕೊಡುವವಳಂತೆ ನಟಿಸಿ, ಆ ರತ್ನ ಪತ್ನಿಯ ತಲೆಯಂ ಹೊರ ಬೀಳುವಂತೆ ಮಾಡಿ, ಕಡೆಗೆ ನನ್ನ೦ ಅಲಕ್ಷ್ಯಮಾಡಿ ಸುವರ್ಣಪ್ರದಶಿಲೆಗಾಗಿ ಅಟ್ಟಿ ದಳು, ಆದಂ ತಂದ ಬಳಿಕ ಆ ಶಿಲೆಯಂ ಅಪಹರಿಸಿ, ನನ್ನ ೦ ಬಾವಿಯೊಳು ತಳ್ಳಿಸಿ ಕೊಲ್ಲುವಂತೆ ಮಾಡಿದಳು. ಈಗಲಾದರೊ ನಾಂ ಮರಳಿ ಮನುಷ್ಯನ ಮುಖವನ್ನೇ ನೋಡದೆ ಈ ಸಮುದ್ರದ ಮಧ್ಯದಲ್ಲಿ ಸಾಯುವಂತೆ ಮಾಡಿದಳು. ಕಾಮಾಂಧರಾದ ಪ್ರರುಷರು ಕುರುಡರು ಭಾವಿಯೊಳು ಬೀಳುವಂತೆ ಇವರ ಪರಮ ಮೋಸಕರವಾದ ಕೃತ್ರಿಮ ನಟನೆಗೆ ಬೆರಗಾಗಿ ಕಡೆಯೊಳು ಭ್ರಷ್ಟರಾಗುವದೇ ನಿಶ್ಚಯ, ಲೋಕದೊಳು ಈ ಜಾತಿಜನರಂ ನಿರ್ಮಿಸುವಾಗ ವಿಧಾತೃವು ಮೋಸ ವಿಶ್ವಾಸಘಾತಕ, ವಂಚನೆ, ಮೊದಲಾದ ಪರಹಿಂಸಾ ಸ್ವರೂಪ ಭಾಗಂಗಳ ಸರ್ವಶಕ್ತಿಯನ್ನೂ ಇನ್ನೆಲ್ಲಿಯೂ ನಿಲ್ಲ ದಂತೆ ಮಾಡಿಕೊಂಡು ನಿರ್ಮಿಸಿದನೆ ಹೊರತು ಅಲ್ಲದೊಡೆ ಇನಿತು ಈ ವಿಧವಾದ ಶಕ್ತಿಯು ಬರಲಾರದು ಎಂದು ಯೋಚಿಸುತ್ತಾ ಬಹುಕಾಲಂ ಏನೂ ತೋರದೆ ಸುಮ್ಮನಿರ್ದು, ಅಯ್ಯೋ ವಿಧಿಯೇ! ನಾನಿಲ್ಲಿಂದ ಹೋಗಲು ಯಾವದಾರಿಯ ಇಲ್ಲ, ದುರ್ಮರಣವೇ ಹಿತವಾಯಿತೇ ಎಂದು ಅಲ್ಲಿಂದ ಒಂದು ದೇವಾಲಯದ ಮುಂಗಡೆಯ ಸರೋವರದ ಸೋಪಾನದ ಮೇಲೆ ಕುಳಿತುಕೊಂಡು ೬೦ತೆಯೇ ಚಿಂತಿ ಸುತ್ತಿರಲು ಒಂದು ಕೋಡಗ ಬಂದು, ಆ ಸರೋವರದ ದಡದೊಳಿರ್ದ ನೇರಿಳೆ ಮರವಂ ಹತ್ತಿ ಒಂದು ರೆಂಬೆಯೊಳಗಣ ಫಲಗಳಂ ಕಿತ್ತು ತಿಂದು, ಅಲ್ಲಿಂದಿಳಿದು ಬಂದು ಆ ಸರೋವರದೊಳು ನೀರು ಕುಡಿಯೆ ಅದರ ಕಪಿರೂಪವು ನಾಶವಾಗಿ ಮ ನುಜಾಕಾರಂ ತಾಳುದು, ಅಂತೆಯೇ ಮರಳಿ ಆದೇಗಿಡಮಂ ಹತ್ತಿ, ಮತ್ತೊಂದು ರೆಂ ಬೆಳು ಫಲಂಗಳಂ ಸವಿದಿಳಿದುಬಂದು, ಸರೋವರದನೀರಂ ಕುಡಿಯಲು ಶುಕಮಾ ದುದು, ಆ ಶುಕಂ ಅಲ್ಲಿಂದ ಹಾರಿ ಹೋಗಿ ಅದೇ ಗಿಡದ ಇನ್ನೊಂದು ಶಾಲೆಯೊಳಗಣ ಹಣ್ಣಂಮ ದ್ದು ಬಂದು, ಆನೀರು ಕುಡಿದು, ಯಥಾಪ್ರರರವಾಗಿ ಕಪಿರೂಪಮಂ ಹೊಂದಿ, ಹೊರಟು ಹೋದುದು, ಇದಂ ನೋಡುತಾ ಚಿತ್ರವರಂ ಪರಮಾಶ್ಚರ್ಯ ಮಂ ತಾಳಿ, ಓಹೋ ಪ್ರಾಣತ್ಯಾಗಮಂ ಮಾಡುವದು ಯುಕ್ತವಲ್ಲ, ಇದೇನೋಚಿ ಇಮೊಂದಿಲ್ಲಿಹುದು, ಇದಂ ಕಂಡುಕೊಂಡರೆ ಬಲದಿಂದನಾ೦ ಮರಳಿ ಭೂಮಂಡಲಮಂ ಹೊಂದಬಹುದುಎಂದು ನಿಶ್ಚಯಿಸಿ ಅಲ್ಲಿಂದೆದ್ದು ನಿಂತುಕೊಳ್ಳಲಾವೇಳೆಗೆ ಆ ದ್ವೀಪದೊ ಳು ಆಶ್ರಮಮಂ ಕಲ್ಪಿಸಿಕೊಂಡು ತಪಮಂ ಗೈಯ್ಯುತ್ತಿರ್ದ ವಾಲಖಿಲ್ಯನೆಂಬೊರ್ವ ತಾಪಸೇಂದ್ರನ ಧರ್ಮಾ೦ಗನೆಯು ಮೋಕ್ಷದಾಕ್ಷಾಯಣೀ ಸಂದರ್ಶಿನಾರ್ಥವಾಗಿ ಬ ರುತ್ತಿರಲಾಕೆಯಂ ನೋಡುತ್ತ ಭರದೊಳ್ಳೆ ತಂದು ಪ್ರದಕ್ಷಿಣ ನಮಸ್ಕಾರಮಂಮಾಡಿ, ಕೈ ಗಳಂ ಕಟ್ಟಿಕೊಂಡು ನಿಲ್ಲುತ್ತಾ, ಅಮ್ಮಾ ಲೋಕಮಾತೆಯೇ ! ನನ್ನ೦ ಉದ್ಧಾರವಾಡ ಬೇಕೆಂದು ಪ್ರಾರ್ಥಿಸಲು, ಆ ತಾಪಸಿಯು ಅವನಂ ನೋಡಿ, ತನ್ನ ತಪಃಶಕ್ತಿಯಿಂದ