ಪುಟ:ಬೃಹತ್ಕಥಾ ಮಂಜರಿ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೮) ಬ ಹ ತ ಥ ದ ೦ 8 ರಿ . ೨೯೭ ಅವನ ವಿದ್ಯಮಾನವನೆಲ್ಲಮಂ ತಿಳಿದು, ಎಲೈ ರಾಜನಂದನನೇ ! ನಿನಗೊಂದು ಪಾತ್ರೆ ಯಂ ಕೊಡುವನು, ಆ ಪಾತ್ರೆಯೊಳು ಇಸರೋವರೋದಕಮಂ ತುಂಬಿ, ಅದರೊಳು ಈ ನೇರಿಳೆವರದ ನಾಲ್ಕು ರೆಂಬೆಗಳೊಳಗಿನ ಹಣ್ಣುಗಳ ರಸಮಂ ಬೆರಸಿ, ಪಾತ್ರೆಯಲ್ಲಿ ರುವ ನಾಲ್ಕು ಮುಖಗಳೊಳು ತಾಮ್ರಮಯಮುಖದಿಂ ಬೊಗ್ಗಿಸಿದ ನೀರಂ ಕುಡಿಯಲು ಮನುಷ್ಯನು ಕಪಿಯಾಗುವನು ಹಿತ್ತಾಳೆಯಮುಖದಿಂದ ಬೊಗ್ಗಿಸಿದ ನಿರಂ ಕುಡಿದರೆ ಆಕಪಿಯು ಮುನ್ನಿನಂತೆಮನುಜನಾಗುವನು,ಚಿನ್ನದ ಮುಖದ ಕಡೆಯಿಂದ ನೀರಬೊ ಗಿಸಿ ಕುಡಿಯೆ ಮನುಜನು ಶುಕರೂಪಮಂತಾಳುವನು, ಲೋಹದ ಮುಖ ದಕಡೆ ನೀರಂ ಬೊಗ್ಗಿಸಿಕೊಂಡು ಕುಡಿದರೆ ಗಿಣಿಯರೂಪವಡಗಿ ಮನುಜರೂಪವಂ ತಾಳುವನು ಎಂದು ಹೇಳಿ ನಾಲ್ಕು ಮುಖಗಳಾಗಿರ್ದ ಪಾತ್ರೆಯ೦ಕೊಟ್ಟು, ಎಲೈ ರಾಜ ಕುಮಾರನೇ ! ಇಸಿದ್ದ ರಸಮಂ ನಿನ್ನ ಅಂಗಾಲುಗಳಿಗೆ ಲೇಪಿಸಿಕೊಳ್ಳವನಾಗು, ನೀನ ಲ್ಲಿಗೆ ಹೋಗಬೇಕೆಂದುಯೋಚಿಸಿದರೆ ಅಲ್ಲಿಗೆ ಆಕಾಶಮಾರ್ಗವಾಗಿ ಮುಹೂರ್ತನಾ ಇದೆಳು ಹೋಗಿ ಸೇರುವೆ, ನಿನ್ನ ಕಾಲ್ಗಳು ಭೂಮಿಯಂ ಮುಟ್ಟಿದಮಾತ್ರದಿಂದಲೇ ಈಸಿದ ರಸಶಕ್ತಿಯು ನಾಶವಾಗುವದೆಂದೊರೆದು, ಕೈಯೊಳುಹಾಕಲು ಅದು, ಅಂತೆ ಯೇಹಿಡಿದು ಮತ್ತೊಂದು ಕೈಯೊಳಾಪಾತ್ರೆಯಂಕೊಂಡುಬಂದು ಅಸರೋವರದ ನೀ ರಂತುಂಬಿ, ಆ ವೃಕ್ಷದಶಾಖೆಗಳ ಫಲಗಳಂ ಕಿತ್ತು, ಆ ಪಾತ್ರೆಯೊಳುಹಾಕಿ ಆನಂತರ ಪಾತ್ರೆಯಂಕೊಂಡುಸಿದ್ದ ರಸಮಂ ಅಂಗಾಲುಗಳಿಗೆ ಲೇಪಿಸಿಕೊಂಡು ಗಂಧಭನಗರಕ್ಕೆ ಹೋಗಬೇಕೆಂದು ಸ್ಮರಿಸಿದಮಾತ್ರಕ್ಕೆ ಆ ರಾಜನಂದನಂ ಅಂತರಿಕ್ಷ ಮಾರ್ಗವಾಗಿಒಂ ದು ನಿಮಿಷಮಾತ್ರದೊಳು ಗಂಧೇಭನಗರಮಂಗೇರಿ ಪುನಃ ಆ ವೇಶ್ಯಾಂಗನೆಯ ಮ ನೆಗೆ ತಂದು ಬಾಗಿಲೊಳು ನಿಂತುಗಲು ಧ್ವನಿಯಂ ಕೇಳುತಾ ವಾರನಾರಿಯು ಹೋ ಮರಳಿ ಬಂದನಲ್ಲಾ, ಆ ದ್ವೀಪದಿಂದ ಹೇಗೆಬಂದನೋ ಕಾಣೆನಲ್ಲಾ, ನಾಂ ಮೋಸಮಾಡಿ ಬಂದೆನೆಂದು ತಿಳಿದಿರುವ ಇವನ ಮನೋಭಾವವಂ ಎಂತು ಸರಿಮಾ ಡಲಿ, ಎಂದು ತಕ್ಕ ಉಪಾಯಮಂ ಯೋಚಿಸಿ ಬಂದು ಬಾಗಿಲಂತೆಗದು, ಎಲೈ ಪ್ರಾಣ ಕಾಂತನೇ ! ನೀನೇತಕಿ೦ತು ಆತುರಗೊಂಡು ಬಂದೆ, ನಾನಾ ದೇವಿಗೆ ಸಮರ್ಪಿಸುವ ಕ್ಕಾಗಿ ಮಾಡಿಸಿರ್ದ ರತ್ನಾಭರಣವಂಮರತು ಬಂದಿರ್ದೆನಾದ್ದರಿಂದ ಆದಂ ತರಲೋ ಸುಗ ಸ್ಮರಿಸಿಕೊಂಡು ಇಲ್ಲಿಗೆ ಹೊರಟು ಬಂದನು, ಈದಿನ ಸಾಯಂಕಾಲಂ ಇಲ್ಲಿಂ ಹೊ ರಟುಬರಬೇಕೆಂದು ಯೋಚಿಸಿದ್ದೆನುನೀನೇ ಬಂದುದು ಸರೋತ್ತಮವಾಯ್ತು ನೀಂಹೇ ಗೆಬಂದೆ ಪಾದುಕೆಗಳಂ ನಾಂ ತಂದಿರ್ದೆನಲ್ಲವೆ, ಎಂದು ಸವಿನಯವಾಗಿ ಮುಗುಳುನ ಗೆಯಂ ತೋರುತ್ತಾ ಕೇಳಲು, ಆ ರಾಜನಂದನಂ ಈ ಪಾಪಿಯಾದವಳಿಗೆ ನಿಜಮಂ ಹೇಳಿದ್ದಕ್ಕೆ ಫಲಮಂ ಅನೇಕಾವೃತ್ತಿ ಹೊಂದಿದ್ದಾಯಿತಲ್ಲ, ಸುಳ್ಳು ಹೇಳಿ ಇವಳಂ ಮೋಸಗೊಳಿಸಬೇಕೆಂದು ನಿಶ್ಚಯಿಸಿದವನಾಗಿ ಎಲೈ ಸುಂದರಾಂಗಿಯೇ ! ಈಗ ನಾ ನೊಂದು ವಿದ್ಯೆಯನ್ನು ಓರ ಸಿದಪುರುಷನಲ್ಲಿ ಸಂಪಾದಿಸಿಕೊಂಡು ಬಂದಿರುವನು, ಆ