ಪುಟ:ಬೃಹತ್ಕಥಾ ಮಂಜರಿ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳಿ" ಬೃ ಹ ತ ಥಾ ನ ೦ ಜರಿ , ತಂಗ ಆರಿಕೆ ಮಾಡೆಂದು ಹೇಳಿ ಕಳುಹಲಾ ದೂತಿಯು ಆ ರಾಜನೂಳು ಅಂತೆಯೇ ಅರಿಕೆ ಮಾಡಲು ಸಿಂಹ ವಿಕ್ರಮರಾಯಂ ಮಹದಾನಂದ ಭರಿತನಾಗಿ ತನ್ನ ಕಾಂತರು ನೊಡಗೊಂಡು ಪುತ್ರಿಯ ಆಂತಃಪುರಮಂ ಸಾರಿ ಅಳಿಯನಂ ನೋಡಿ ಆನುರೂಪನಾದ ಪತಿಯನ್ನೇ ವರಿಸಿದಳೆಂದು ಸುತೆಯಂ ಮಡುತ್ತ ಅಳಿಯನ ವೃತ್ತಾಂತಮಂ ವಿಚಾರಿಸಿ ಕೇಳಿ ತಿಳಿದು ಸಂತೋಷಿಸುತ್ತಾ ಅಲ್ಲಿಂ ಬಂದು ಮಂತ್ರಿಯಂ ಬರೆಯಿಸಿ ಕುಮಾರಿಯ ವಿವಾಹೋತ್ಸವವ, ನಾಳೆಯೊಳೆ ನಡಿಯುವಂತೆ ಪರುಠವಿಸಬೇಕೆಂದಾಜ್ಞೆಯಂ ಮಾರಿ ಯೆಲ್ಲರೊಂದಿಗೆ ಸ್ನಾನಾದಿಗಳಂ ಮಾಡಿಕೊಂಡು ದಿವ್ಯಪಕ್ಷಭಕ್ಷಾನ್ನಗಳಂ ಭುಜಿಸಿ ಯಾದಿನವಂ ಸುಖವಾಗಿ ಕಳೆದು ಮರುದಿನದುದಯದೊಳು ಆ ಇರರಿಗೂ ಸಕಲ ಸಂಭ್ರಮದಿಂದ ಓಡೋಲಗವಾಗಿ ಪರಮೋಲ್ಲಾಸದೊಳು ಮಹಾ ವೈಭವಾತಿಶಯ ಮಾಗಿ ವಿಧ್ಯುಕ್ತವಾದ ಮೊದುವೆಯಂ ಮಾಡಿ ನಾಲ್ಕು ದಿನಗಳೂ ಕ್ರಮವಾಗಿ ವಿವಾ ಹ ಪ್ರಸ್ತುತಮಂ ಮಾಡಿದನು, ಆ ಚಿತ್ರವರಂ ಲೋಕೈಕ ಸುಂದರಿಯಾದಾ ಭಾಮಾ ಮಣಿಯಂ ಕೂಡಿ ಸಕಲ ಸೌಖ್ಯಂಗಳಂ ಅನುಭವಿಸುತ್ತಿದ್ದು ಹದಿನೈದಿಪ್ಪತ್ತು ದಿನಂಗ ಳಾದ ಅನಂತರ ತನ್ನ ವೃತ್ತಾಂತಮಂ ಅತ್ತೆ ಮಾವಂದಿರೋಳರುಹಿ ಅವರಿಂದನುಜ್ಞಾತ ನಾಗಿ ಸಕಲ ಪರಿವಾರ, ಚತುರಂಗ, ಸಮಾಮ್ರತನಾಗಿ, ತನ್ನ ಕಾಂತಿಯನ್ನೂ ಗೊಂಡು ಕನಕಾಲವಾಲ ಪರಮಂ ಸೇರಿ ಅಣ್ಣನಂ ನೋಡಿ, ತನ್ನ ಕಾಂತೆಯೊಡನೆ ನಮಸ್ಕರಿಸಿ, ತನ್ನ ವಿಶಿಷ್ಟ ಸಮಾಚಾರಂಗಳಂ ಚಿನ್ನಿಸಿ, ಸ್ನಾನದ ಮನೆಯೊಳು ನೀರು ಕಾಯಿಸುವಂತೆ ಪರಿಚಾರಿಣಿಯರಿಗಾಚ್ಚಾಪಿಸಿ, ಸಿದ್ಧರಸವನ್ನೂ ಆಘಟಿಕೆಯ ನ್ಯೂ, ಆ ನೀರಿನ ಕೊಪ್ಪರಿಗೆಯೊಳು ಹಾಕಿ, ಶಿಲಾರೂಪವಾದ ತನ್ನ ಅತ್ತಿಗೆಯ ವಿಗ್ರಿ ಹಮಂ ತರಿಸಿ ಸ್ನಾನಮಂ ಮಾಡಿಸೆಂದು ಪರಿಚಾರಿಣಿಯರಿಗೆ ಆಜ್ಞಾಪಿಸಿ ತಾಂ ಅಣ್ಣ ನೊಂದಿಗೆ ಸೇರಿ ಕುಳಿತಿರೆ, ಆ ಪರಿಚಾರಿಣಿಯರಾ ಬಿಸಿನೀರಂ ಆ ಶಿಲಾಪ್ರತಿಮೆಗೆ ಸ್ವಾ ನವಂ ಮಾಡಿಸಲು ಸಿದ್ದ ರಸ ಪ್ರಭಾವದಿಂ, ಮುನ್ನಿ ನಂತೆ ರಾಜಾತ್ಮಜೆಯಾಗೆ ಈ ಸುದ್ದಿ ಯಂ ಕೇಳುತ ಮಹದಾನಂದ ತುಂದಿಲನಾದ ಮಣಿವರಂ ತನ್ನ ಅತ್ತೆಯೇ ಮೊದಲಾದ ಆಪ್ತ ಬಂಧುವರ್ಗಮಂ ಕರೆಯಿಸಿಕೊಂಡು ಕುಳಿತಿರುವ ಕಾಲದೊಳು ಸ್ನಾನಮಂ ಮಾ ಡಿದ ಶಿಲಾರೂಪಮಂ ತೊರೆದ. ಮಣಿವರನ ಧರ ಕಾಂತಿಯು ತನ್ನ ಅಂತಃಪುರಮಂ ಸಾರಿ ದಿವ್ಯಾಲಂಕಾರಭೂಷಿತ ಗಾತ್ರಳಾಗಿ, ಬಂದು ತಂನ ಕಾಂತನಿಗಭಿವಂದಿಸಿ ತಾಯಿ ಗೆ ಪೊಡಮಟ್ಟು ನಿಲ್ಲಲು, ಮಣಿವರಂ ಸಂತೋಷದಿಂದ ಕಾಂತೆಯಂ ತೆಗದ ತೊಡೆ ಯಮೇಲೆ ಕುಳ್ಳಿರಿಸಿಕೊಂಡು ಚಿತ್ರ ವರನಂ ತೋರಿ ಎಲೈ ಮೋಹನಾಂಗಿಯೇ ? ಈತಂ ನಿನ್ನ ಮೈದುನನು ಅವನ ಬಳಿಯೊಳು ನಿಂದಿಹಳು ನಿನ್ನ ತಂಗಿಯು, ಇವನ ಪ್ರ ಯಾಸದಿಂದ ನೀಂ ಮರಳೀ ಮನುಜಳಾದೆ ಎಂದೊರೆದು ಆ ಸುಂದರಿಯಂ ತನ್ನ ತಾಯಿ ಯಂ ಸಮಾಧಾನಗೊಳಿಸೆಂದು ಹೇಳಿ ಸವಿಾಪದೊಳು ನಿಂದಿರ್ದ ತನ್ನ ಅತ್ತೆಯ ಬಳಿಗೆ ಕಳುಹಲು ತಾಯಿ ಮಕ್ಕಳು ಪರಸ್ಪರವಾಗಿ ಮಹದಾನಂದವತಿಯರಾಗಿ ಮತುಗಳ ನಾಡುತ್ತ ನಿಂತಿರ್ದರು, ti