ಪುಟ:ಬೆಳಗಿದ ದೀಪಗಳು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಡತಾಳು ಭೂಪಾಲ ಉಚಿತವಾದ ಲೇಹ್ಯಪೇರುಗಳನ್ನು ಕೊಟ್ಟು ಸಮಾಧಾನಗೊಳಿಸಿ ಹೀಗೆ ನಿಷ್ಕಾರಣವಾಗಿ ಸಾಹಸವನ್ನು ಮಾಡಿದ್ದಕ್ಕಾಗಿ ಅವನಿಗೆ ಸಿಟ್ಟು ಮಾಡಿದes. ಅಷ್ಟರಲ್ಲಿ ರಾಯನ ಕುದುರೆಯು ನಿಂತನಿಂತಲ್ಲಿಯೇ ಪ್ರಾಣ ಬಿಟ್ಟಿತೆಂದು ಓರ್ವ ಸೇವಕನು ನಿವೇದಿಸಿದ್ದನ್ನು ಕೇಳಿ ಅರಸನು ವಿಸ್ಮಯಾಕುಲನಾಗಿ, ತನ್ನ ಕಡೆ ಯಾಳಿನ ಗತಿಯೇನಾಯಿತೋ ನೋಡಿರಿ ಎಂದು ವ್ಯಾಕುಲಚಿತ್ತನಾಗಿ ರಜ- ವೈದ್ಯರಿಗೆ ಹೇಳಿದನು. ಉಪಾಯವಿಲ್ಲ, ರಾಜಾಧಿರಾಜರೆ, ಕುದುರೆಗಾದ ಗತಿಯೇ ಕಡೆ ಯಾಳಿಗೆ ಆಗಿರುವದು ! ” ಎಂದು ರಾಜವೈದ್ಯರು ವಿಷಾದದಿಂದ ಹೇಳಿದರು, (ಏನೂ ಉಪಾಯವಿಲ್ಲವೆ ? ನೋಡಿರಿ, ಹೇಗಾದರೂ ಮಾಡಿ ಆ ನನ್ನ ಪ್ರಿಯ ನೃತ್ಯನನ್ನು ಬದುಕಿಸಿಕೊಳ್ಳಿರಿ. * 11 ಮಹಾರಾಜರ ಕೃಪಾಪಾತ್ರನಾದ ಆ ನೃತ್ಯನು ಓಡುವದನ್ನು ಬಿಟ್ಟು ನಿಂತಾಕ್ಷಣವೇ, ಅವನ ಹಣೆಯೊಡೆದು ರಕ್ತ ತೆಗೆದು ಅವನಿಗೆ ನನ್ ಗಡಲೆ ತಿನ್ನಲಿಕ್ಕೆ ಕೊಟ್ಟು, ಅವನನ್ನು ಕಾಲುಮೇಲಾಗಿ ಮಾಡಿ ಮುಗಿಸಿ ದ್ದರೆ ಬದುಕಬಹುದಾಗಿತ್ತು. ಇಷ್ಟು ಹೊತ್ತಾದ ಬಳಿಕ ಯಾವ ಉಪಾಯ ಗಳಿಂದಲೂ ಪ್ರಯೋಜನವಿಲ್ಲ.' ಅವನಿದ್ದೆಡೆಗೆ ಹೋಗಿ ನೋಡಿಯಾದರೂ ಬರೋಣ ಬನ್ನಿರಿ, ” ಎಂದು ಆ ಮಹಾರಾಜನು ರಾಜವೈದ್ಯನನ್ನು ಕರಕೊಂಡು ಕಡೆಯಾಳು ಇದ್ದ ಸ್ಥಳಕ್ಕೆ ಬಂದನು. ಅಲ್ಲಿ ಒಂದು ಚಮತ್ಕಾರವೇ ಆಗಿತ್ತು. ಈ qfa aga fagfa ಇd” ಎಂಬಂತೆ, ರಾಜವೈದ್ಯರು ಹೇಳಿದ ಉಪಚಾರಗಳೆಲ್ಲ ಆ ಕೊಡೆ ಯಾಳಿಗೆ ದೈವಯೋಗದಿಂದೆ ಸಲ್ಲಿದ್ದವು. ಆ ಸಾಹಸಿಯಾದ ಸೇವಕನು ತನಿ ಮಳಲಿನ ಆಸೆಗಾಗಿ ಬಳಿಯಲ್ಲಿಯೇ ಇರುವ ದುರ್ಗಾದೇವಿಯ ಗುಡಿಹೊಕ್ಕನು. ದೇವಾಲಯದ ಬಾಗಿಲದ ಹಣೆಪಟ್ಟಿ ಯು ಅವನ ಹಣೆಗೆ ಥಟ್ಟನೆ ಬಡಿದದ್ದ ರಿಂದ ಬಳಬಳನೆ ರಕ್ತ ಸುರಿದಿತ್ತು, `ಭಕ್ತ ಜನರು ದೇವಿಗೆ ಉಡಿತುಂಬಿದೆ ಸನಗಡಲೆಯ ಕಾಳುಗಳನ್ನು ಅವನು ಸಂಕಟಗರೆದು ತಿಂದಿದ್ದನು , ಮೂರು ಜೊಳ ಅಗಲವಾಗಿದ್ದ ಆ ಚಿಕ್ಕ ಗುಡಿಯಲ್ಲಿ ಅವನು ಮಲಗುವದು ಹೇಗೆ ? ಅರ್ಥಾತ್ ಕಾಲು ಮೇಲೆಮಾಡಿ ಗೋಡೆಗೆ ಆನಿಸಿ ಇಟ್ಟು ಕೊಂಡು ಅವನು od