ಪುಟ:ಬೆಳಗಿದ ದೀಪಗಳು.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊಡೆಯಾಳು ಭೂಪಾಲ

೯೯

"ನಿನ್ನಿಚ್ಛೆ. ಮಗನೆ, ನೀನೆಂದು ಸಿಂಹಾಸನವನ್ನೇರಬೇಕೆನ್ನುವಿ? " ಎಂದು ಆ ಸ್ವಾಮಿಶ್ರೇಷ್ಠನು ಕೇಳಿದನು.

“ನಾನೊಂದು ಒಳ್ಳೇ ದಿವಸವನ್ನು ಹುಡುಕಿ ಮಹಾರಾಜರ ಪಾದಕ್ಕೆ ಅರಿಕೆ ಮಾಡಿಕೊಳ್ಳುವೆನು."

ಮುಂದಾಗುವ ಈ ಅರ್ಧಪ್ರಹರದ ರಾಜನು ತನ್ನ ಪಟ್ಟಾಭಿಷೇಕಕ್ಕೆ ಮುಂಚಿತವಾಗಿ ಕೇರಳ ದೇಶದ ತುಂಬ ಸಂಚಾರ ಮಾಡಿದನು. ಗುಡಿ ಗುಂಡಾರಗಳನ್ನೂ, ಮಠಪಾಠಶಾಲೆಗಳನ್ನೂ ಅವನು ಪ್ರತ್ಯಕ್ಷವಾಗಿ ನೋಡಿದನು. ಗ್ರಾಮಗ್ರಾಮಗಳಲ್ಲಿರುವ ಸಾಧುಸಂತರನ್ನೂ, ವಿದ್ವಜ್ಜನರನ್ನೂ ಕಂಡು ಮಾತಾಡಿಸಿ ಅವರ ಸಮಾಚಾರಗಳನ್ನು ಅರಿತುಕೊಂಡನು. ಅವರೆಲ್ಲರಿಗೂ ಇಂತಿಷ್ಟು ಭೂಸ್ವಾಸ್ಥಿಯನ್ನು ಕೇರಳ ದೇಶಾಧಿಪತಿಗಳು ಕೊಡುವರೆಂದೂ ಆ ಜನರೆಲ್ಲರೂ ತಮ್ಮ ಇಚ್ಛೆಗೆ ಬಂದಲ್ಲಿ ಭೂಮಿಗಳನ್ನು ಕಂಡುಕೊಂಡು, ಆ ಬಗ್ಗೆ ನಮಗೆ ಸಿಕ್ಕ ತಕ್ಕ ಸನದುಗಳನ್ನು ತಾವು ಬರೆದಿಟ್ಟು ಕೊಂಡಿರಬೇಕೆಂತಲೂ, ಇಂಥದೊಂದು ಮುಹೂರ್ತದಲ್ಲಿ ಆ ಸನದುಗಳಿಗೆ ರಾಜಮುದ್ರೆಯಾಗುವದೆಂದೂ ಹೇಳುತ್ತ ನಡೆದಿದ್ದನು.

ಶುಭ ಮುಹೂರ್ತದಲ್ಲಿ ಕೊಡೆಯಾಳು ಭೂಪಾಲನ ಪಟ್ಟವೇರಿದನು ಭಾಗ್ಯಶಾಲಿಯಾದ ನೃಪನು ಪಟ್ಟವೇರಿದ ಕಾಲಕ್ಕೆ ಕೇರಳ ದೇಶವಾಸಿಗಳಾದ ಪಂಡಿತರೂ, ದಶಗ್ರಂಥಿಗಳಾದ ವಿಪ್ರೊತ್ತವರೂ, ತಪಸ್ವಿಗಳಾದ ಸಾಧುಸಂತರೂ ಪವಿತ್ರವಾದ ದೇವಾಲಯಗಳ ಅರ್ಚಕರ ದಯಮಾಡಿದ್ದರು, ರಾಜಧಾನಿಯಲ್ಲಿ ಎತ್ತ ನೋಡಿದತ್ತ ಜರದ ಶಾಲಿನವರೂ, ಕಾಷಾಯವಸನದವರೂ, ಜಡೆಲಂಗಟದವರೂ ಸಂತೆಗೆ ನೆರೆದಂತೆ ನೆರೆದಿದ್ದರು.

ಕೊಡೆಯಾಳು ಭೂಪಾಲನು ಪಟ್ಟವೇರುವಾಗ ವೇಷದ ಸೊಬಗಿನಲ್ಲಿಯಾಗಲಿ, ವಾದ್ಯ ವೈಭಗಳ ಮೆರವಣಿಗೆಯಲ್ಲಾಗಲಿ ಕಾಲಹಾನಿಯನ್ನು ಮಾಡದೆ ತಾನು ಧರಿಸಿರುವ ಕೀಳುತರದ ಉಡುಪಿನಿಂದಲೇ ಪಟ್ಟವೇರಿ ಒಮ್ಮೆಲೆ ಜನರು ತಂದಿರುವ ಸಸದುಗಳಿಗೆ ರಾಜಮುದ್ರೆಯನ್ನು ಎಡೆಬಿಡದೆ ಜಡೆಯಲಾರಂಭಿಸಿದನು. ಕ್ಷಣಹೊತ್ತು ಕಳೆದರೆ ಯಾವ ಬ್ರಾಹ್ಮಣನ ಸನದಿಗ ಮುದ್ರೆ ಇಲ್ಲದಂತಾಗುವದೋ ಎಂಬ ಯೋಚನೆಗಾಗಿ ಆ ಮಹಾತ್ಮನು ಮೈತುಂಬ ಕಣ್ಣುಳ್ಳವನಾಗಿ ತನ್ನ ಕೆಲಸವನ್ನು ನಡೆಸಿದ್ದನು. ತನಗಿದ