ಪುಟ:ಬೆಳಗಿದ ದೀಪಗಳು.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ಸಂಪೂರ್ಣ-ಕಥೆಗಳು

ಆಧಿಕಾರದ ಅಲ್ಪಾವಧಿಯ ಕಾಲದಲ್ಲಿ ಧರ್ಮವರ್ತಿಯಾದ ಮಹಾತ್ಮನು ತುಸು ಕಡಿಮೆ ಎಲ್ಲ ಸನದುಗಳಿಗೆ ಮುದ್ರೆ ಬಡಿದುಬಿಟ್ಟನು.

"ಇನ್ನೂ ಕೆಲವು ಸನದುಗಳು ಮುದ್ರೆಯಾಗದೆ ಉಳಿಯುವವು; ಆವಕ್ಕೇನು ಮಾಡುವೆ? ” ಎಂದು ಕೇರಳಾಧೀಶ್ವರನು ಆ ಮರುಮುಕ್ಕಾಲು ಗಳಿಗೆಯ ರಾಜನನ್ನು ಕೇಳಿ ನಕ್ಕನು.

ಕೊಡೆಯಾಳು ಆ ಮಾತಿಗೆ ನಕ್ಕು "ಸದ್ಯಕ್ಕೆ ನಾನು ಸರ್ವಶಕ್ತನಾದ ರಾಜನಷ್ಟೆ? ನನ್ನ ತರುವಾಯದಲ್ಲಿ ಈ ಪಟ್ಟವನ್ನೇರುವ ರಾಜನಿಗೆ ಉಳಿದ ಸನದುಗಳಿಗೆ ಮುದ್ರೆ ಮಾಡಿ ಕೊಡಲು ಆಜ್ಞಾಪಿಸುತ್ತೇನೆ” ಎಂದು ನುಡಿದವನೇ ನಾಲ್ಕನೆಯ ಗಳಿಗೆಬಟ್ಟಲು ಮುಕ್ಕಾಲು ಪಾಲು ನೀರಲ್ಲಿ ಮುಳುಗಿದ್ದು ಕಂಡು ಸಿಂಹಾಸನದಿಂದಿಳಿದನು.

ಪಟ್ಟದಿಂದಿಳಿದ ತನ್ನ ಪರಮೋದಾರನಾದ ಭೃತ್ಯನನ್ನು ಕಂಡು ಕೇರ೪ಾಧೀಶ್ವರನು ಪರಮ ಸಂತುಷ್ಟನಾಗಿ ಅವನನ್ನು ಗಟ್ಟಿಯಾಗಿ ಆಲಿಂಗಿಸಿದನು. ಕಣ್ಣುಗಳಲ್ಲಿ ಆನಂದಾಶ್ರುಗಳನ್ನು ಸುರಿಸುತ್ತೆ ಆ ರಾಜಾಧಿರಾಜನು ತನ್ನ ಭೃತ್ಯರಾಜನನ್ನು ಕುರಿತು ನುಡಿದದ್ದು: "ಮಗನೆ, ನೀನು ಇಮ್ಮಡಿ ಕರ್ಣನು. ಮರುಮುಕ್ಕಾಲು ಗಳಿಗೆ ಈ ಸಿಂಹಾಸನವನ್ನೇರಿ ಅಜರಾಮರವಾದ ಕೀರ್ತಿಯನ್ನು ಪಡೆದಿ. ಹತ್ತು ವರ್ಷ ನಾನು ಇದೇ ಸಿಂಹಾಸನದ ಮೇಲೆ ವ್ಯರ್ಥವಾಗಿ ಕುಳಿತೆನು,.ನಿನ್ನ ಸಂಬಂಧದಿಂದ 'ಇಂಥ ಮಹಾತ್ಮನ ಯಜಮಾನನು' ಎಂಬ ಮಧ್ಯಮಪತಿಯ ಕೀರ್ತಿಯಾದರೂ ನನ್ನ ಪಾಲಿಗೆ ಬಂದಿತು. ಅಷ್ಟೇ ನನಗೆ ಸಾಕು. ನಾನಿನ್ನು ನಿನ್ನ ಹೇಳಿಕೆಯ ಮೇರಿಗೆ ಸನದುಗಳಿಗೆ ಮುದ್ರೆ ಮಾಡುತ್ತೇನೆ. ಇನ್ನೇನಾದರೂ ನಿನ್ನ ಇಚ್ಛೆ ಇದುವದೋ?"

ಕೊಡೆಯಾಳು ಭೂಮಾಲನು ತನ್ನ ಒಡೆಯನ ಚರಣಗಳನ್ನು ಗಟ್ಟಿಯಾಗಿ ಹಿಡಿದು ಅವುಗಳನ್ನು ಕೃತಜ್ಞತಾಪೂರ್ವಕವಾಗಿ ಆನಂದಾಶ್ರುಗಳಿಂದ ಅಭಿಷೇಕಿಸಿ, ಪೂಜೆಗೈದು ನಮಸ್ಕರಿಸಿ “ಮಹಾಪ್ರಭೋ, ನಾನೆಷ್ಟರವನು! ನನ್ನ ಯೋಗ್ಯತೆ ಯಾತರದು! ಪ್ರಭುಗಳು ಸೇವಕನನ್ನು ಸಂಭಾವಿಸಿದ ಪುಣ್ಯ ಕಥೆಯೇ ಇದು. ದಾತೃಶಿರೋಮಣಿಗಳಾದ ಮಹಾರಾಜರ ಬಳಿಯಲ್ಲಿ ನಾನಿನ್ನನು ಕೇಳಿಕೊಳ್ಳಲಿ ? ಪುಣ್ಯಮಯವಾದ ಈ ಪಾದಗಳ