ಪುಟ:ಬೆಳಗಿದ ದೀಪಗಳು.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಸಪುಟನ

"ವಿಷಮಪ್ಯಮೃತಂ ಕ್ವಚಿದ್ಭವೇದಮೃತಂ ವಾ ವಿಷಮೀಶ್ವರೇಚ್ಛಯಾ"- ಈಶ್ವರೇಚ್ಛೆಯಿಂದ ವಿಷವು ಒಮ್ಮೊಮ್ಮೆ ಅಮೃತವಾಗಿಯ ಅಮೃತವು ವಿಷವಾಗಿಯೂ ಪರಿಣಮಿಸುತ್ತದೆಂಬ ಭಾವಾರ್ಥದ ವಾಕ್ಯವನ್ನು ಕವಿಕುಲಶ್ರೇಷ್ಠನಾದ ಕಾಳಿದಾಸನು ಹೇಳಿ ಎರಡು ಸಾವಿರ ವರ್ಷಗಳಾಗಿ ಹೋಗಿದ್ದರೂ ಆ ವಾಕ್ಯದ ಸತ್ಯತೆಯು ಈಗಿನ ಮಹಾಯುದ್ಧದ ಕಾಲದಲ್ಲಿ ಜಗತ್ತಿಗೆಲ್ಲ ಸ್ಪಷ್ಟವಾಗಿ ಒಡೆದುತೋರಿದಂತೆ ಈ ಮುಂಚಿತವಾಗಿ ಎಂದೂ ತೋರಲಿಲ್ಲ. ಮೇಲಿನ ಉಕ್ತಿಯು ಕವಿಯ ಕಲ್ಪನೆಯೆಂದೆ ಈವರೆಗೆ ಅನೇಕರು ತಿಳಿದುಕೊಳ್ಳುತ್ತಿದ್ದರು. ಯುರೋಪದಲ್ಲಿ ಮಹಾಯುದ್ಧವು ಪ್ರಾರಂಭವಾದ ಬಳಿಕ ಅನೇಕವಾದ ಆಸಕ್ತಿಗಳಿಗೆ ಈ ಜಗತ್ತು ಈಡಾಯಿತು. ಲೆಕ್ಕವಿಲ್ಲದಷ್ಟು ರಕ್ತವು ಹರಿಯಿತು, ಸಮರಭೂಮಿಗಳಲ್ಲಿ ಹರಡಿಕೊಂಡಿರುವ ಎಲಬುಗಳ ರಾಶಿಯನ್ನು ಒಟ್ಟಿದರೆ, ಅದೊಂದು ಪರ್ವತಪ್ರಾಯವೇ ಆಗುವದು. ಯುದ್ಧಕ್ಕಾಗಿ ಪ್ರತಿನಿತ್ಯ ದಲ್ಲಿಯ ವೆಚ್ಚಾದ ಹಣವನ್ನು ಒಂದು ಸ್ಥಳದಲ್ಲಿ ಕೂಡಿ ಹಾಕಿದರೆ ಅದೊಂದು ಕನಕಗಿರಿಯೇ ಆಗುವದು. ಶಾಂತತಾ ಪ್ರಿಯರೂ ನಿರಪರಾಧಿಗಳೂ ಆದ ಅಸಂಖ್ಯಾತ ಜನರು ಧನಭ್ರಷ್ಟರೂ ದೇಶಭ್ರಷ್ಟರೂ ಆದರು. ಯುವತಿಯರ ಸರ್ವಸ್ವವಾದ ಮರ್ಯಾದೆಗೆ ಎಷ್ಟೋ ಎಡೆಗಳಲ್ಲಿ ಭಂಗವುಂಟಾಯಿತು. ಯುದ್ಧದ ಚಿತ್ರವು ಈ ರೀತಿಯಾಗಿ ಭಯಾನಕವಾಗಿದ್ದರೂ ಭವಿಷ್ಯತ್ಕಾದಲ್ಲಿ ಜಗತ್ತಿನ ತುಂಬೆಲ್ಲ ಬಂಧುಭಾವವನ್ನು ಹಬ್ಬಿಸಿ ಜಗತ್ತಿಗೆ ಸುಖಶಾಂತಿಗಳನ್ನಿಳಿಯುವ ಉದಾತ್ತವಾದದ್ದೊಂದು ತತ್ವವು ಯುದ್ಧ ಪ್ರಾರಂಭದಿಂದಲೇ ಕ್ರಮೇಣ ಅಡಿಗಳನ್ನಿಕ್ಕುತ್ತ ಮುಂದಕ್ಕೆ ಬರುತ್ತಿತ್ತು. ಅಥವಾ ಈ ತತ್ವದ ವಿಕಾಸಕ್ಕಾಗಿಯೇ ಈ ಯುದ್ಧವು ಪ್ರಾರಂಭವಾಯಿತೆಂದರೂ ಅದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಮಿತ್ರಸಂಘದವರು ಜರ್ಮನಿಯ ಕ್ಷಾತ್ರಶಕ್ತಿಯ ಅಹಮ್ಮವ್ಯತೆಯ ವಿರುದ್ಧವಾಗಿ ಯುದ್ಧವನ್ನು ಸಾರಿ ರಣಭೇರಿಯನ್ನು ಹಾಡಿಸಿದಾಗ ನಿರ್ಬಲವಾದ ರಾಷ್ಟ್ರಗಳ ಸ್ವಾತಂತ್ರ್ಯ ರಕ್ಷಣವೇ ಅವರ ಉದ್ದೇಶವಾಗಿತ್ತು. ಆದರೆ, ಕಳೆದ ತಿಂಗಳಿನಲ್ಲಿ ಅಮೇರಿ